Monday, January 12, 2026

ಸತ್ಯ | ನ್ಯಾಯ |ಧರ್ಮ

ಲೈಂಗಿಕ ದೌರ್ಜನ್ಯ ಪ್ರಕರಣ, ಬ್ರಿಜ್ ಭೂಷಣ್ ನ್ಯಾಯಾಲಕ್ಕೆ ಹಾಜರು. ಮಧ್ಯಂತರ ಜಾಮೀನು ಮಂಜೂರು

ಮಹಿಳಾ ಕುಸ್ತಿಪಟುಗಳ ಲೈಂಗಿಕ ಶೋಷಣೆ ಪ್ರಕರಣದಲ್ಲಿ ಭಾರತೀಯ ಜನತಾ ಪಕ್ಷದ ಸಂಸದ ಬ್ರಿಜ್ ಭೂಷಣ್ ಸಿಂಗ್ ಅವರಿಗೆ ಮಧ್ಯಂತರ ಜಾಮೀನು ಸಿಕ್ಕಿದೆ. ಮಂಗಳವಾರ ಬ್ರಿಜ್ ಭೂಷಣ್ ಅವರನ್ನು ದೆಹಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು, ವಿಚಾರಣೆ ಪ್ರಾರಂಭವಾದ ಕೆಲವೇಕ್ಷಣಗಳಲ್ಲಿ, ಅವರಿಗೆ ಎರಡು ದಿನಗಳ ಮಧ್ಯಂತರ ಜಾಮೀನು ನೀಡಲಾಯಿತು.

ಮಂಗಳವಾರ ನ್ಯಾಯಾಲಯದ ಹಾಜರಾತಿಗೂ ಮುನ್ನ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಬ್ರಿಜ್ ಭೂಷಣ್ ಪರವಾಗಿ ವಕೀಲರಾದ ಎಪಿ ಸಿಂಗ್, ರಾಜೀವ್ ಮೋಹನ್ ವಾದ ಮಂಡಿಸಿದರೆ, ದೆಹಲಿ ಪೊಲೀಸರ ಪರವಾಗಿ ಅತುಲ್ ಶ್ರೀವಾಸ್ತವ ಅವರು ವಾದ ಮಂಡಿಸಿದರು.

ಕಳೆದ ತಿಂಗಳಷ್ಟೇ ದೆಹಲಿ ಪೊಲೀಸರು ಈ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಸಿದ್ದರು, ಸುಮಾರು ಒಂದೂವರೆ ಸಾವಿರ ಪುಟಗಳ ಚಾರ್ಜ್ ಶೀಟಿನಲ್ಲಿ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಲಾಗಿತ್ತು. ಅದರ ನಂತರ ಜುಲೈ 6ರಂದು ನ್ಯಾಯಾಲಯವು ಬ್ರಿಜ್ ಭೂಷಣ್ ಸಿಂಗ್‌ಗೆ ಹಾಜರಾಗುವಂತೆ ಸಮನ್ಸ್ ನೀಡಿತ್ತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page