Tuesday, June 18, 2024

ಸತ್ಯ | ನ್ಯಾಯ |ಧರ್ಮ

ಫಾಕ್ಸ್‌ಕಾನ್‌ ಸಂಸ್ಥೆ ಸ್ಥಳಾಂತರ | ಕಾಂಗ್ರೆಸ್‌ ವಿರುದ್ಧ ಪ್ರಚಾರಕ್ಕೆ ನಕಲಿ ಪತ್ರ ಬಳಸಿಕೊಂಡ ತೆಲಂಗಾಣ ಮಂತ್ರಿ

ಈ ಕುರಿತು FIR ದಾಖಲಿಸಲಾಗಿದೆ ಎಂದ ಉಪ ಮುಖ್ಯಮಂತ್ರಿ

ಹೈದರಾಬಾದಿನ ಫಾಕ್ಸ್‌ಕಾನ್ ಕಂಪನಿಯನ್ನು ಬೆಂಗಳೂರಿಗೆ ಸ್ಥಳಾಂತರಿಸುವಂತೆ ಕರ್ನಾಟಕ ಉಪಮುಖ್ಯಮಂತ್ರಿ ಕಳೆದ ತಿಂಗಳು ಫಾಕ್ಸ್‌ಕಾನ್ ಕಂಪನಿಗೆ ಪತ್ರ ಬರೆದಿದ್ದರು ಎಂದು ತಲಂಗಾಣ ಮಂತ್ರಿ KTR ಮಾಡಿದ್ದ ಆರೋಪವನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸುಳ್ಳೆಂದು ಹೇಳಿದ್ದಾರೆ.

ಈ ಕುರಿತು ಟ್ವೀಟ್‌ (X) ಮಾಡಿರುವ ಅವರು “ಆಪಲ್ ಏರ್ ಪಾಡ್ ಉತ್ಪಾದನಾ ಘಟಕವನ್ನು ಹೈದರಾಬಾದ್‌ನಿಂದ ಬೆಂಗಳೂರಿಗೆ ಸ್ಥಳಾಂತರಗೊಳಿಸುವಂತೆ ಫಾಕ್ಸ್ ಕಾನ್‌‌ ಸಂಸ್ಥೆ ನಾನು ಬರೆದಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪತ್ರ ನಕಲಿಯಾಗಿದ್ದು, ಈ ಸಂಬಂಧ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.” ಎಂದು ತಿಳಿಸಿದ್ದಾರೆ.

ತೆಲಂಗಾಣ ಪ್ರಸ್ತುತ ಚುನಾವಣಾ ಕಣಕ್ಕೆ ತಯಾರಾಗುತ್ತಿದ್ದು ಅಲ್ಲಿನ BRS ಪಕ್ಷವು ಅಲ್ಲಿ ಕಾಂಗ್ರೆಸ್‌ ಪಕ್ಷವನ್ನು ಟಾರ್ಗೆಟ್‌ ಮಾಡುವ ಸಲುವಾಗಿ ಹೇಳಿಕೆಗಳನ್ನು ನೀಡುತ್ತಿದೆ. ತೆಲಂಗಾಣದಲ್ಲಿ ಕಾಂಗ್ರಸ್‌ ಗೆಲ್ಲುವ ಸಾಧ್ಯತೆಗಳನ್ನು ಸರ್ವೇಗಳು ತಿಳಿಸುತ್ತಿರುವುದರಿಂದಾಗಿ ಆಡಳಿತ ಪಕ್ಷ ಕಂಗಾಲಾಗಿದೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ಹೇಳುತ್ತಿವೆ. ಅಲ್ಲಿನ BRS ಪಕ್ಷವು ಕರ್ನಾಟಕದಲ್ಲಿ ನೀರಿನ ಸಮಸ್ಯೆ, ಬರ ಹಾಗೂ ವಿದ್ಯುತ್‌ ಸಮಸ್ಯೆಯನ್ನು ಪರಿಹರಿಸುವಲ್ಲಿ ಕಾಂಗ್ರೆಸ್‌ ಸರ್ಕಾರ ಪೂರ್ತಿಯಾಗಿ ಸೋತಿದೆ ಎಂದು ನಿರಂತರವಾಗಿ ಟ್ವಿಟರ್‌ ಮತ್ತು ತನ್ನ ಪತ್ರಿಕೆಯಲ್ಲಿ ಪ್ರಚಾರ ಮಾಡುತ್ತಿದೆ.

ಈ ಕುರಿತು ಟ್ವೀಟ್‌ ಮಾಡಿದ್ದ KTR “‘ಬಹಳ ಕಷ್ಟಪಟ್ಟು ಈ ಕಂಪನಿಯನ್ನು ತಂದಿದ್ದೇವೆ. ಫಾಕ್ಸ್‌ಕಾನ್‌ನ ಸಿಇಒ ಕೂಡ ಕಂಪನಿಯು ಇಲ್ಲಿ ಸಣ್ಣ ಉದ್ಯೋಗಗಳನ್ನು ನೀಡಲಿದೆ. ಕಂಪನಿಯ ಪ್ರಾರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಆದರೆ ಡಿಕೆ ಶಿವಕುಮಾರ್ ಫಾಕ್ಸ್‌ಕಾನ್ ಸಿಇಒಗೆ ಪತ್ರ ಬರೆದು ಕಂಪನಿಯನ್ನು ಬೆಂಗಳೂರಿಗೆ ಸ್ಥಳಾಂತರಿಸುವಂತೆ ಕೋರಿದ್ದಾರೆ. ಮುಂದೆ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬರಲಿದ್ದು ಆಗ ನಾವು ಎಲ್ಲವನ್ನೂ ಬೆಂಗಳೂರಿಗೆ ಬದಲಾಯಿಸಲಿದ್ದೇವೆ ಎಂದು ಹೇಳಿದ್ದಾರೆ. ಅವರು ಕೇವಲ ಕಂಪನಿಯನ್ನು ಸೆಳೆಯಲು ಪ್ರಯತ್ನಿಸಿದ್ದರೆ ಒಪ್ಪಬಹುದಿತ್ತು ಆದರೆ ಅವರು ರಾಜಕೀಯ ಪ್ರಯತ್ನ ಮಾಡಿದ್ದಾರೆ. ನಮ್ಮ ಪಕ್ಷದ ಸರ್ಕಾರ ಇಲ್ಲದೇ ಹೋಗಿದ್ದರೆ ಈ ಯೋಜನೆಯನ್ನು ಅವರು ಬೆಂಗಳೂರಿಗೆ ಬದಲಾಯಿಸುತ್ತಿದ್ದರು.” ಎಂದು ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು