Friday, June 14, 2024

ಸತ್ಯ | ನ್ಯಾಯ |ಧರ್ಮ

ಬಿಎಸ್‌ವೈ ವಿರುದ್ದದ ತನಿಖೆಗೆ ಸುಪ್ರೀಂ ತಡೆ

ನವದೆಹಲಿ: ಬಿಜೆಪಿ ಶಾಸಕ ಬಿ.ಎಸ್‌ ಯಡಿಯುರಪ್ಪ ವಿರುದ್ದದ ಭ್ರಷ್ಟಾಚಾರದ ಆರೋಪದ ಮೇಲೆ ಹೈಕೋರ್ಟ್ ಈ ಹಿಂದೆ ತನಿಖೆಗೆ ಆದೇಶ ನೀಡಿತ್ತು. ಆದರೆ ಶುಕ್ರವಾರ ಸುಪ್ರಿಂ ಕೋರ್ಟ್‌ ಈ ತನಿಖೆಗೆ ತಡೆಯಾಜ್ಞೆ ನೀಡಿದೆ.

ತನಿಖೆಗೆ ಅನುಮತಿ ನೀಡಿದ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಯಡಿಯೂರಪ್ಪ ಅವರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹಾಗೂ ಹಿಮಾ ಕೊಹ್ಲಿ ಅವರನ್ನು ಒಳಗೊಂಡ ನ್ಯಾಯಪೀಠವು, ದೂರುದಾರರಾದ ಟಿ.ಜೆ. ಅಬ್ರಾಹಂ ಅವರಿಗೆ ನೋಟಿಸ್ ಜಾರಿ ಮಾಡಿದೆ.

ಬಿಡಿಎ ವಸತಿ ಯೋಜನೆಯ ಕಾಮಗಾರಿಗೆ ಗುತ್ತಿಗೆ ನೀಡುವಲ್ಲಿ ಲಂಚ ಪಡೆದ ಆರೋಪದ ಮೇಲೆ ಬಿ.ಎಸ್‌.ವೈ ವಿರುದ್ದ ಎಫ್‌.ಐ.ಆರ್‌ ದಾಖಲಾಗಿತ್ತು. ಇದರ ಕುರಿತು ತನಿಖೆ ನಡೆಸುವಂತೆ ಹೈಕೋರ್ಟ್‌ ಸೂಚನೆ ನೀಡಿತ್ತು. ಅದರ ಬೆನ್ನಲ್ಲೇ ಲೋಕಾಯುಕ್ತ ಪೋಲೀಸರು ತನಿಕೆ ಶುರು ಮಾಡಿದ್ದರು.

ಯಡಿಯೂರಪ್ಪ ಪರವಾಗಿವಾದ ಮಂಡಿಸಿದ ಹಿರಿಯ ವಕೀಲರಾದ ಮುಕುಲ್ ರೊಹಟಗಿ ಹಾಗೂ ಸಿದ್ಧಾರ್ಥದಾವೆ ಅವರು, ಜನಪ್ರತಿನಿಧಿಗಳ ವಿರುದ್ದ ಎಫ್‌ಐಆರ್ ದಾಖಲಿಸುವ ಮುನ್ನ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯಬೇಕು ಎಂಬ ನಿಯಮವನ್ನು ಹೈಕೋರ್ಟ್ ನಿರ್ಲಕ್ಷಿಸಿದೆ ಎಂದು ವಾದ ಮಾಡಿದರು.

🔸 ನಿರಂತರ ಸುದ್ದಿಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

https://chat.whatsapp.com/GBc6sg7E2FQLuXblEdBxSi

Related Articles

ಇತ್ತೀಚಿನ ಸುದ್ದಿಗಳು