Tuesday, June 18, 2024

ಸತ್ಯ | ನ್ಯಾಯ |ಧರ್ಮ

ಕಾಲೇಜಿನಲ್ಲಿ ಬುರ್ಖಾ ಧರಿಸಿ ಡ್ಯಾನ್ಸ್: ನಾಲ್ವರು ವಿದ್ಯಾರ್ಥಿಗಳ ಅಮಾನತು

ಮಂಗಳೂರು: ಕಾಲೇಜು ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ಹಾಡಿಗೆ ಬುರ್ಖಾ ಧರಿಸಿ ನೃತ್ಯ ಮಾಡಿದ ಕಾರಣ, ನಾಲ್ಕು ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿರುವ ಘಟನೆ ಮಂಗಳೂರಿನ ಸೇಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದಿದೆ.

ಸೇಂಟ್ ಜೋಸೆಫ್‌ ಎಂಜಿನಿಯರಿಂಗ್ ಕಾಲೇಜಿನ ಕಾರ್ಯಕ್ರಮದಲ್ಲಿ ‘ಫೆವಿಕಾಲ್ ಸೆ’ ಹಾಡಿಗೆ ನಾಲ್ವರು ಹುಡುಗರು ಬುರ್ಖಾ ಧರಿಸಿ ನೃತ್ಯ ಮಾಡುತ್ತಿರುವ ವೀಡಿಯೋ ವೈರಲ್‌ ಆಗಿದ್ದು, ಕಾಲೇಜಿನ ವಿದ್ಯಾರ್ಥಿಗಳು ಬುರ್ಖಾ ಧರಿಸಿ ಬುರ್ಖಾ ಮತ್ತು ಹಿಜಾಬ್‌ ಧರಿಸಿ ನೃತ್ಯ ಮಾಡಿರುವುದು ಒಂದು ರೀತಿ ಸಮುದಾಯವನ್ನು ಅಣಕಿಸುವಂತಿದೆ ಎಂದು ಆರೋಪಿಸಿದ್ದಾರೆ. ಇದರಿಂದ ಕಾಲೇಜಿನ ಪ್ರಾಂಶುಪಾಲರು ನೃತ್ಯ ಮಾಡಿರುವ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿದ್ದಾರೆ.

ವಿಡಿಯೋದಲ್ಲಿ ಒಂದು ಸಮುದಾಯದ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ನೃತ್ಯಕ್ಕೆ ಅನುಮತಿ ನೀಡಿದ್ದಕ್ಕಾಗಿ ಕಾಲೇಜು ಆಡಳಿತವನ್ನು ಅನೇಕರು ಟೀಕಿಸಿದ್ದಾರೆ.

ವಿಡಿಯೋದಲ್ಲಿನ ದೃಶ್ಯವು ʼಅಶ್ಲೀಲ ಹೆಜ್ಜೆಗಳನ್ನುʼ ಹೊಂದಿದೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ನೃತ್ಯವನ್ನು ಅನುಚಿತವೆಂದು ಕರೆದಿದ್ದಾರೆ. ಆದರೆ ಬಾಲಿವುಡ್ ಹಾಡು ಅನುಮೋದಿತ ಕಾರ್ಯಕ್ರಮಗಳ ಪಟ್ಟಿಯ ಭಾಗವಾಗಿಲ್ಲ ಎಂದು ಕಾಲೇಜು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವೇದಿಕೆಯ ಮೇಲೆ  ʼಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನುʼ ಉಲ್ಲಂಘಿಸಿದ್ದಾರೆ ಎಂದು ಕಾಲೇಜು ಪ್ರತಿಕ್ರಿಯಿಸಿದೆ.

“ಸಮುದಾಯಗಳು ಮತ್ತು ಎಲ್ಲರ ನಡುವಿನ ಸಾಮರಸ್ಯಕ್ಕೆ ಧಕ್ಕೆ ತರುವ ಚಟುವಟಿಕೆಗಳನ್ನು ಕಾಲೇಜು ಬೆಂಬಲಿಸುವುದಿಲ್ಲ ಅಥವಾ ಕ್ಷಮಿಸುವುದಿಲ್ಲ” ಎಂದು ಸಂಸ್ಥೆ ತಿಳಿಸಿದ್ದು, ಈ ರೀತಿ ನಡೆದಿರುವುದು ವಿದ್ಯಾರ್ಥಿಗಳ ಅನೌಪಚಾರಿಕ ಭಾಗವಾಗಿದ್ದು, ಕಾರ್ಯಕ್ರಮದಲ ಭಾಗವಲ್ಲ, ಈ ನೃತ್ಯದಲ್ಲಿ ಭಾಗಿಯಾಗಿರುವ ವಿದ್ಯಾರ್ಥಿಗಳನ್ನು ಮುಂದಿನ ವಿಚಾರಣೆಯವರೆಗೆ ಅಮಾನತುಗೊಳಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು