Home ಅಪಘಾತ 600 ಅಡಿ ಆಳದ ಕಂದಕಕ್ಕೆ ಬಿದ್ದ ಕಾರು; ಆರು ಮಂದಿ ಸಾವು

600 ಅಡಿ ಆಳದ ಕಂದಕಕ್ಕೆ ಬಿದ್ದ ಕಾರು; ಆರು ಮಂದಿ ಸಾವು

0

ನಾಸಿಕ್: ಮಹಾರಾಷ್ಟ್ರದ ನಾಸಿಕ್‌ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕಳವಾನ್ ತಾಲೂಕಿನ ಸಪ್ತಶೃಂಗ ಗರ್ ಘಾಟ್‌ನಲ್ಲಿ ಟೊಯೋಟಾ ಇನ್ನೋವಾ ಕಾರೊಂದು ಅಧುಮುತಪ್ಪಿ, ಬರೋಬ್ಬರಿ 600 ಅಡಿ ಆಳದ ಕಂದಕಕ್ಕೆ ಬಿದ್ದಿದೆ.

ಈ ದುರಂತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರಾದವರೆಲ್ಲರೂ ಪಿಂಪಾಲ್‌ಗಾಂವ್ ಬಸ್ವಂತ್ ಗ್ರಾಮದವರಾಗಿದ್ದು, ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ.

ಕೀರ್ತಿ ಪಟೇಲ್ (50), ರಸೀಲಾ ಪಟೇಲ್ (50), ವಿಠಲ್ ಪಟೇಲ್ (65), ಲತಾ ಪಟೇಲ್ (60), ವಚನ್ ಪಟೇಲ್ (60) ಮತ್ತು ಮಣಿಬೆನ್ ಪಟೇಲ್ (70) ಎಂದು ಪೊಲೀಸರು ಮೃತರನ್ನು ಗುರುತಿಸಿದ್ದಾರೆ. ಅಪಘಾತ ಸಂಭವಿಸಿದಾಗ ವಾಹನದಲ್ಲಿ ಒಟ್ಟು ಏಳು ಜನರಿದ್ದರು. ಈ ಘಟನೆಯಿಂದ ಪಿಂಪಲ್‌ಗಾಂವ್ ಬಸ್ವಂತ್ ಗ್ರಾಮದಲ್ಲಿ ತೀವ್ರ ವಿಷಾದದ ಛಾಯೆಗಳು ಆವರಿಸಿವೆ.

ಕಂದಕಕ್ಕೆ ಬಿದ್ದ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಮೃತದೇಹಗಳನ್ನು ಹೊರತೆಗೆಯಲು ಪೊಲೀಸರು ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿಯ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಗಳನ್ನು ಮುಂದುವರೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಧಾನಿ, ಮುಖ್ಯಮಂತ್ರಿ ಸಂತಾಪ

ಈ ದುರಂತಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

“ಈ ಅಪಘಾತದಲ್ಲಿ ಹಲವರು ಪ್ರಾಣ ಕಳೆದುಕೊಂಡಿರುವುದು ತೀವ್ರ ದುಃಖಕರ. ತಮ್ಮ ಆಪ್ತರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಸಂತಾಪಗಳನ್ನು ತಿಳಿಸುತ್ತೇನೆ,” ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಘಟನೆಯನ್ನು “ಬಹಳ ದುಃಖಕರ” ಎಂದು ಬಣ್ಣಿಸಿದ್ದು, ಸಂತ್ರಸ್ತ ಕುಟುಂಬಗಳಿಗೆ ರಾಜ್ಯ ಸರ್ಕಾರದ ಪರವಾಗಿ ತಲಾ ₹5 ಲಕ್ಷ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದ್ದಾರೆ.

You cannot copy content of this page

Exit mobile version