ಬೆಳ್ತಂಗಡಿ: ಬಾಹುಬಲಿ ಪ್ರತಿಮೆಯ ಫೋಟೊ ವಿಕೃತಗೊಳಿಸಿ ಅವಮಾನಿಸಿದ್ದಾರೆ ಎಂದು ನಾರಾವಿಯ ಮಹಿಳೆಯೊಬ್ಬರ ವಿರುದ್ಧ ವೇಣೂರು ಠಾಣೆಯಲ್ಲಿ ದೂರು ದಾಖಲಾಗಿದೆ. ನಾರಾವಿ ಗ್ರಾಮದ ವಿಜಯಾ ನಾರಾವಿ ಎಂಬಾಕೆ ಡಿಸೆಂಬ್ 20ರಂದು ತನ್ನ ಫೇಸ್‌ಬುಕ್ ಮತ್ತು ವಾಟ್ಸಪ್‌ನಲ್ಲಿ ಬಾಹುಬಲಿಯ ಚಿತ್ರಗಳನ್ನು ವಿಕೃತಗೊಳಿಸಿ ಹಂಚಿಕೊಂಡಿದ್ದರು.
ಇದರಿಂದ ಜೈನರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಿದೆ ಎಂದು ಆಕೆಯ ವಿರುದ್ಧ ದೂರು ನೀಡಲಾಗಿತ್ತು. ವೇಣೂರು ಪೊಲೀಸ್ ಠಾಣೆಯಲ್ಲಿ ಡಿಸೆಂಬರ್ 24ರಂದು ಪ್ರಕರಣ ದಾಖಲಾಗಿದೆ.
ಕಲ್ಮಂಜ ನಿವಾಸಿ ಪಣಿರಾಜ್ ಎಂಬುವರು ವಿಜಯಾ ವಿರುದ್ಧ ದೂರು ನೀಡಿದ್ದಾರೆ. ಡಿಸೆಂಬರ್ 20ರಂದು ವಿಜಯಾ ನಾರಾವಿ ಭಗವಾನ್ ಬಾಹುಬಲಿ ಸ್ವಾಮಿಯ ಮೂರ್ತಿಯ ಭಾವಚಿತ್ರಕ್ಕೆ ಮನುಷ್ಯನ ಮುಖವನ್ನು ಹಾಕಿ, ಅದಕ್ಕೊಂದು ಚಡ್ಡಿ ಹಾಕಿ ತನ್ನ ಫೇಸ್‌ಬುಕ್ ಖಾತೆ ಹಾಗೂ ವಾಟ್ಸಪ್‌ನಲ್ಲಿ ಹಾಕಿದ್ದರು. ಇದರಿಂದ ಜೈನ ಧರ್ಮೀಯರ ಮನಸ್ಸಿಗೆ ನೋವು ಉಂಟಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.