Tuesday, June 18, 2024

ಸತ್ಯ | ನ್ಯಾಯ |ಧರ್ಮ

ರೈಲಿನಲ್ಲಿ ಶೂಟೌಟ್ ಪ್ರಕರಣ ; ಆರೋಪಿ ಮಾನಸಿಕ ಅಸ್ವಸ್ಥ ಅಲ್ಲ : ಪೊಲೀಸರ ಸ್ಪಷ್ಟನೆ

ಚಲಿಸುತ್ತಿದ್ದ ರೈಲಿನಲ್ಲಿ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿ ಅವರ ಕುಟುಂಬದ ಹೇಳಿಕೆಯನ್ನು ಪರಿಗಣಿಸಲಾಗದು ಎಂದು ಘಟನೆಯ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆರೋಪಿ ಚೇತನ್ ಸಿಂಗ್ ಘಟನೆ ನಡೆದ ಸಂದರ್ಭದಲ್ಲಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಎಂಬ ಕುಟುಂಬ ಸದಸ್ಯರ ಹೇಳಿಕೆಯನ್ನು ಪೊಲೀಸ್ ಅಧಿಕಾರಿಗಳು ತಳ್ಳಿ ಹಾಕಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿ ಮತ್ತು ಮೂವರು ಪ್ರಯಾಣಿಕರನ್ನು ಗುಂಡಿಕ್ಕಿ ಕೊಂದ ರೈಲ್ವೇ ರಕ್ಷಣಾ ಪಡೆ (ಆರ್‌ಪಿಎಫ್) ಕಾನ್‌ಸ್ಟೆಬಲ್ ಗೆ ಅಪರಾಧ ಕೃತ್ಯ ಎಸಗುವ ಸಂದರ್ಭದಲ್ಲಿ ಪ್ರಜ್ಞೆ ಇದ್ದೇ ಮಾಡಿದ್ದಾನೆ. ಆತನದು ಉದ್ದೇಶಪೂರ್ವಕ ಕೃತ್ಯ ಎಂದು ಅಧಿಕಾರಿಗಳು ಹೇಳಿದ್ದಾರೆ. ಘಟನೆಯ ನಂತರ ಆರೋಪಿ ಕಾನ್‌ಸ್ಟೆಬಲ್ ಚೇತನ್ ಸಿಂಗ್ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಕುಟುಂಬ ಸದಸ್ಯರು ಹೇಳಿಕೆ ನೀಡಿದ್ದರು. ಆದರೆ ಈ ಹೇಳಿಕೆ ಪ್ರಕರಣವನ್ನು ದುರ್ಬಲಗೊಳಿಸಲು ಮತ್ತು ಚೇತನ್ ಸಿಂಗ್ ನನ್ನು ಈ ಪ್ರಕರಣದಿಂದ ಹೊರತರುವ ಪ್ರಯತ್ನ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

“ಆರೋಪಿ ಚೇತನ್ ಸಿಂಗ್ ಅಪರಾಧ ಮಾಡುವಾಗ ಆತ ಪ್ರಜ್ಞೆಯಲ್ಲಿಯೇ ಇದ್ದನು. ಆರೋಪಿ ತನಗೆ ಬೇಕಾದ ಕೃತ್ಯವನ್ನೇ ಮಾಡಿದ್ದಾನೆ. ಆತನ ಒಳಗೆ ಒಂದು ಉದ್ದೇಶ ಇಟ್ಟೇ ಮಾಡಿದ್ದಾನೆ. ಮಾನಸಿಕವಾಗಿ ಅಸ್ವಸ್ಥನಾಗಿರುವ ವ್ಯಕ್ತಿ ಇಂತಹ ಅಪರಾಧ ಮಾಡುತ್ತಾನೆ ಎಂದು ನಾವಃ ನಂಬುವುದಿಲ್ಲ” ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಆತ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರೆ ಆತ ಮಾನಸಿಕ ಅಸ್ವಸ್ಥನಾಗಿದ್ದಾನೆ ಎಂಬ ಅರ್ಥ ಬರುವುದಿಲ್ಲ ಎಂದು ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಇನ್ನು ಪ್ರಾಥಮಿಕ ಹಂತದ ತನಿಖೆ ನಡೆಸಿರುವ ಪೊಲೀಸರ ಪ್ರಕಾರ, ಚೇತನ್ ಮೊದಲು B5 ಕೋಚ್ ನಲ್ಲಿ ಮೀನಾ ಎಂಬುವವರನ್ನು ಕೊಂದಿದ್ದಾನೆ. ನಂತರ ಅದೇ ಕೋಚ್ ನಲ್ಲಿದ್ದ ಮತ್ತೊಬ್ಬ ಪ್ರಯಾಣಿಕನನ್ನು ಕೊಂದಿದ್ದಾರೆ. ನಂತರ ಅವನು B2 ಕೋಚ್‌ಗೆ ಹೋಗಿ ತನ್ನ ಎರಡನೇ ಬಲಿಪಶು ಮೇಲೆ ದಾಳಿ ಮಾಡಲು ಬಂದೂಕು ತೋರಿಸಿ ಪ್ಯಾಂಟ್ರಿ ಕಾರ್‌ಗೆ ಕರೆದೊಯ್ದಿದ್ದಾನೆ. ಅಲ್ಲಿಯೇ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ನಂತರ ಅವರು ತರಬೇತುದಾರ S6 ಕೋಚ್ ಗೆ ತೆರಳಿದರು. ಅಲ್ಲಿ ಅವರು ತಮ್ಮ ನಾಲ್ಕನೇ ಬಲಿಪಶುವನ್ನು ಕೊಂದರು. ಈ ಇಷ್ಟೂ ಜನರನ್ನು ಕೊಲ್ಲುವ ಮೊದಲು ಚೇತನ್ ತನ್ನ ಬಲಿಪಶುಗಳನ್ನು ಗುರುತಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಇಷ್ಟೂ ಪ್ರಕರಣದ ನಂತರ ಚೈನ್ ಎಳೆದು ರೈಲನ್ನು ನಿಲ್ಲಿಸಲಾಗಿದೆ. ಅಕಸ್ಮಾತ್ ರೈಲನ್ನು ನಿಲ್ಲಿಸದೇ ಹೋಗಿದ್ದರೆ, ಆತ ಇನ್ನಷ್ಟು ಮಂದಿಯನ್ನು ಕೊಲೆ ಮಾಡುತ್ತಿದ್ದ. ಯಾಕೆಂದರೆ ಆತನ ಆಕ್ರಮಣದಲ್ಲಿ ಒಂದು ಮುಖ್ಯ ಉದ್ದೇಶ ಇತ್ತು. ಆತನ ಒಳಗೊಂದು ಕ್ರೌರ್ಯ ತುಂಬಿದ‌ ಸಿದ್ಧಾಂತ ಕೆಲಸ ಮಾಡುತ್ತಿತ್ತು. ಆದರೆ ಆತ ವಿಚಾರಣೆ ಸಂದರ್ಭದಲ್ಲಿ ಸರಿಯಾಗಿ ಸ್ಪಂದಿಸುತ್ತಿಲ್ಲ. ನಾವು ಕೇಳುವ ಮತ್ತು ಆತ ಹೇಳುವ ಪ್ರಶ್ನೋತ್ತರಗಳಲ್ಲಿ ಸಾಮ್ಯತೆ ಇಲ್ಲ. ಇದೂ ಕೂಡ ತಪ್ಪಿಸಿಕೊಳ್ಳುವ ತಂತ್ರಗಾರಿಕೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು