Wednesday, April 30, 2025

ಸತ್ಯ | ನ್ಯಾಯ |ಧರ್ಮ

ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ವಿರುದ್ಧ ಮತ್ತೊಂದು ಗಂಭೀರ ಪ್ರಕರಣ ದಾಖಲು

ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಮಾಜಿ ಸಚಿವ ಸತ್ಯೇಂದರ್ ಜೈನ್ ವಿರುದ್ಧ ಮತ್ತೊಂದು ಹೊಸ ಪ್ರಕರಣ ದಾಖಲಾಗಿದೆ. ಶಾಲಾ ಕೊಠಡಿಗಳ ನಿರ್ಮಾಣದಲ್ಲಿ 2,000 ರೂ. ಹಗರಣ ನಡೆಸಿದ್ದಾರೆ ಎಂಬ ಆರೋಪದ ಮೇಲೆ ದೆಹಲಿ ಭ್ರಷ್ಟಾಚಾರ ನಿಗ್ರಹ ದಳ ಪ್ರಕರಣ ದಾಖಲಿಸಿಕೊಂಡಿದೆ.

ದೆಹಲಿಯಲ್ಲಿ AAP ಸರ್ಕಾರದ ಅಧಿಕಾರಾವಧಿಯಲ್ಲಿ 12,000 ಕ್ಕೂ ಹೆಚ್ಚು ತರಗತಿ ಕೊಠಡಿಗಳ ನಿರ್ಮಾಣದ ಗುರಿ ಇಟ್ಟು ಹೊಸ ಯೋಜನೆ ರೂಪಿಸಿತ್ತು. ಒಟ್ಟಾರೆ ವೆಚ್ಚ ಸುಮಾರು 2,892 ಕೋಟಿ ರೂ. ಆದಾಗ್ಯೂ, ಈ ಕೆಲಸವನ್ನು ಹೆಚ್ಚಿನ ಬೆಲೆಗೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಅಂದಾಜು 5 ಲಕ್ಷ ರೂ. ಗಳಿಗೆ ನಿರ್ಮಿಸಬಹುದಾದ ಶಾಲಾ ಕೊಠಡಿಗಳಲ್ಲಿ ಪ್ರತಿ ತರಗತಿಗೆ ಸರಾಸರಿ 24.86 ಲಕ್ಷ ರೂ.ಗಳ ವೆಚ್ಚ ತಗುಲಿದ ಬಗ್ಗೆ ದೂರುಗಳು ಕೇಳಿ ಬಂದಿತ್ತು. ಹಾಗೆಯೇ ಗುತ್ತಿಗೆಗಳನ್ನು ನೀಡುವಲ್ಲಿಯೂ ಹಲವಾರು ನಿಯಮಗಳನ್ನು ಅನುಸರಿಸಲಾಗಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದಲ್ಲದೆ, ನಿಗದಿತ ಅವಧಿಯಲ್ಲಿ ಒಂದೇ ಒಂದು ಕೆಲಸವೂ ಪೂರ್ಣಗೊಂಡಿಲ್ಲ ಎನ್ನಲಾಗಿದೆ. ಅಲ್ಲದೆ ಈ ತರಗತಿ ಕೊಠಡಿಗಳು ಕೇವಲ 30 ವರ್ಷಗಳ ಕಾಲ ಬಾಳಿಕೆ ಬರುವಂತಿದ್ದು ಇದರ ನಿರ್ಮಾಣದ ವೆಚ್ಚ ಮಾತ್ರ 75 ವರ್ಷಗಳ ಕಾಲ ಬಾಳಿಕೆ ಬರುವಂತೆ ತೋರಿಸಿದ್ದಾರೆ ಎಂದು ಭ್ರಷ್ಟಾಚಾರ ವಿರೋಧಿ ತನಿಖೆಯಿಂದ ತಿಳಿದುಬಂದಿದೆ.

ಕಟ್ಟಡ ನಿರ್ಮಾಣಕ್ಕೆ ಸರಿಯಾದ ಸಲಹೆಗಾರರನ್ನು ನೇಮಿಸಿಕೊಳ್ಳದೆ ಇದರ ವೆಚ್ಚ ಹೆಚ್ಚಾಗಲು ಕಾರಣ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ತರಗತಿ ಕೊಠಡಿಗಳನ್ನು ನಿರ್ಮಿಸುವ ವೆಚ್ಚವು ಸುಮಾರು ಐದು ಪಟ್ಟು ಹೆಚ್ಚಾಗಿದೆ ಎಂದು ಆರೋಪಿಸಿ ಕೆಲವು ಬಿಜೆಪಿ ನಾಯಕರು ದೂರುಗಳನ್ನು ಸಲ್ಲಿಸಿದ ನಂತರ ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ತನಿಖಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page