ಆಂಬ್ಯುಲೆನ್ಸ್ ನಲ್ಲಿ ಉತ್ಸವಕ್ಕೆ ತೆರಳಿದ್ದ ಕೇಂದ್ರ ಸಚಿವ ಸುರೇಶ್ ಗೋಪಿ ವಿರುದ್ಧ ಪ್ರಕರಣ ದಾಖಲು

ತಿರುವನಂತಪುರಂ, ನವೆಂಬರ್ 3: ಕೇಂದ್ರ ರಾಜ್ಯ ಸಚಿವ ಹಾಗೂ ಮಲಯಾಳಂ ಸಿನಿಮಾ ನಟ ಸುರೇಶ್ ಗೋಪಿ ವಿರುದ್ಧ ಕೇರಳ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ನಿರ್ಲಕ್ಷತನದಿಂದ ವಾಹನ ಚಲಾಯಿಸಿದ್ದು, ಸಂಚಾರ ನಿಯಮ ಉಲ್ಲಂಘಿಸಿ ಆಂಬ್ಯುಲೆನ್ಸ್ ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಎಫ್ ಐಆರ್ ದಾಖಲಾಗಿದೆ.

ಈ ವರ್ಷ ಏಪ್ರಿಲ್‌ನಲ್ಲಿ ತ್ರಿಶೂರ್‌ನಲ್ಲಿ ನಡೆದ ಸಮಾರಂಭದಲ್ಲಿ ಸುರೇಶ್ ಗೋಪಿ ಆಂಬ್ಯುಲೆನ್ಸ್‌ನಲ್ಲಿ ಹಾಜರಾಗಿದ್ದು ವಿವಾದಕ್ಕೀಡಾಗಿತ್ತು.

ಕೇರಳ ಪೊಲೀಸರು ಕಮ್ಯುನಿಸ್ಟ್ ನಾಯಕರಿಂದ ದೂರು ಸ್ವೀಕರಿಸಿದ್ದಾರೆ. ಎಫ್‌ಐಆರ್‌ನಲ್ಲಿ ಸುರೇಶ್ ಗೋಪಿ ಅವರನ್ನು ಮೊದಲ ಆರೋಪಿ ಮತ್ತು ಆಂಬ್ಯುಲೆನ್ಸ್ ಚಾಲಕ ಮೂರನೇ ಆರೋಪಿ ಎಂದು ಹೆಸರಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು