Tuesday, July 1, 2025

ಸತ್ಯ | ನ್ಯಾಯ |ಧರ್ಮ

224 ವಿಧಾನಸಭಾ ಕ್ಷೇತ್ರಗಳಲ್ಲೂ ಸಮುದಾಯದ ಜಾತಿಗಣತಿ ಸಮೀಕ್ಷೆ – ಬಿ.ಎಸ್. ಸೋಮಶೇಖರ್

ಹಾಸನ : ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಜಾತಿಗಣತಿ ವರದಿಯನ್ನು ನೇಕಾರ ಸಮುದಾಯವೋ ಸ್ವಾಗತಿಸುತ್ತಿದ್ದು, ನಿಖರ ಮಾಹಿತಿಯನ್ನು ದಾಖಲಿಸಲು 224 ವಿಧಾನಸಭಾ ಕ್ಷೇತ್ರಗಳಲ್ಲೂ ಸಮುದಾಯದ ಜಾತಿಗಣತಿ ಸಮೀಕ್ಷೆಯನ್ನು ಸ್ಥಳೀಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಮೂಲಕ ಆಯಾ ಕುಟುಂಬಗಳನ್ನು ಭೇಟಿ ಮಾಡಿ ಅಂಕಿ ಅಂಶವನ್ನು ದಾಖಲಿಸಲಾಗುವುದು ಎಂದು ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಬಿ.ಎಸ್. ಸೋಮಶೇಖರ್ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಜಾತಿಗಣತಿ ವರದಿಯನ್ನು ನೇಕಾರ ಸಮುದಾಯವೋ ಸ್ವಾಗತಿಸುತ್ತದೆ. ಆದರೆ ನೇಕಾರರ ಜನಸಂಖ್ಯೆ ನಿಖರವಾಗಿ ದಾಖಲಿಸುವಲ್ಲಿ ಆಯೋಗವು ಕೈಗೊಂಡಿರುವ ಕ್ರಮ ಅವೈಜ್ಞಾನಿಕವಾಗಿದೆ. ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿನ ಅಂಕಿ 224 ವಿಧಾನಸಭಾ ಕ್ಷೇತ್ರಗಳಲ್ಲಿ ನೇಕಾರರ ಜಾತಿ ಗಣತಿ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದಿಂದ ಸಮೀಕ್ಷೆ ಅಂಶಗಳು ಸಮುದಾಯಕ್ಕೆ ದೊಡ್ಡ ಆಘಾತ ಉಂಟು ಮಾಡಿದೆ. ಆದ್ದರಿಂದ ನೇಕಾರ ಸಮುದಾಯಗಳ ಮಠಾಧೀಶರು ರಾಜಕೀಯ ಮುಖಂಡರು ಸಮಾಜದ ಗಣ್ಯರು ಸುಮಾರು 5-6 ಸಭೆಗಳನ್ನು ನಡೆಸಿ ಒಕ್ಕೂಟದಿಂದ ಸಮಗ್ರ ಸಮೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎಂದರು.


ಹಿAದುಳಿದ ವರ್ಗಕ್ಕೆ ಸೇರಿದ ಅನೇಕ ಸಮುದಾಯದ ನಿಖರ ಜನಸಂಖ್ಯೆಯನ್ನು ಸರ್ಕಾರದ ಗಮನಕ್ಕೆ ತರುವ ನಿಟ್ಟಿನಲ್ಲಿ ಒಕ್ಕೂಟದ ಮೂಲಕ ಆಪ್ ಅನ್ನು ಸಿದ್ಧಪಡಿಸಲಾಗಿದೆ. ಈ ಆಪ್ ಮೂಲಕ ರಾಜ್ಯದಲಿತಮ್ಮ ಕುಟುಂಬದ ಸದಸ್ಯರ ಮಾಹಿತಿಯನ್ನು ಒದಗಿಸ ಬಹುದು ಅಲ್ಲದೆ ನಿಖರ ಮಾಹಿತಿಯನ್ನು ದಾಖಲಿಸಲು 224 ವಿಧಾನಸಭಾ ಕ್ಷೇತ್ರಗಳಲೂ ಸಮುದಾಯದ ಜಾತಿಗಣತಿ ಸಮೀಕ್ಷೆಯನ್ನು ಸ್ಥಳೀಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಮೂಲಕ ಆಯಾ ಕುಟುಂಬಗಳನ್ನು ಭೇಟಿ ಮಾಡಿ ಅಂಕಿ ಅಂಶವನ್ನು ದಾಖಲಿಸಲಾಗುವುದು ಎಂದರು. ಈಗಾಗಲೇ ರಾಜ್ಯದಲ್ಲಿ ಸಮೀಕ್ಷೆ ಪ್ರಾರಂಭವಾಗಿದ್ದು ಈ ಮೂಲಕ ನೇಕಾರ ಸಮುದಾಯದ ನಿಖರ ಜನಸಂಖ್ಯೆ ಮಾಹಿತಿ ದೊರಕಲಿದೆ. ನಂತರ ಈ ವರದಿಯನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಹಾಗೂ ಸರ್ಕಾರದ ಸಮೀಕ್ಷಾ ವರದಿ ಅಂಕಿ-ಅAಶವನ್ನು ಸಹ ಪರಾಮರ್ಶೆ ಮಾಡಿ ಅಂತಿಮವಾಗಿ ರಾಜ್ಯದ ನೇಕಾರರ ಜನಸಂಖ್ಯೆಯನ್ನು ಕ್ರೋಢೀಕರಿಸಬಹುದಾಗಿದೆ ಎಂದು ಹೇಳಿದರು. ನಮ್ಮ ಒಕ್ಕೂಟದಿಂದ ಹಮ್ಮಿಕೊಂಡಿರುವ ಜಾತಿ ಸಮೀಕ್ಷೆಯಲ್ಲಿ ಸಮುದಾಯದ ಕುಟುಂಬ ಸದಸ್ಯರೆಲ್ಲ ಕೈಜೋಡಿಸಿ ನಿಖರ ಮಾಹಿತಿಯನ್ನು ಒದಗಿಸುವಲ್ಲಿ ಸಹಕರಿಸಬೇಕು ಎಂದು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಜಗದೀಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಪ್ಪ ಶೆಟ್ಟಿ, ಕುರುಹಿನ ಶೆಟ್ಟಿ ಸಮಾಜದ ಕೇಂದ್ರ ಒಕ್ಕೂಟದ ಗೌರವ ಅಧ್ಯಕ್ಷ ಪುಟ್ಟರಾಮಶೆಟ್ಟಿ, ಮಹಿಳಾ ಘಟಕದ ಉಪಾಧ್ಯಕ್ಷ ಮಂಜುಳಾ, ಮುಖಂಡರು ಪ್ರೇಮಮ್ಮ, ಜಿಲ್ಲಾಧ್ಯಕ್ಷ ಶಂಕರ ಶೆಟ್ಟಿ ಇತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page