Saturday, June 15, 2024

ಸತ್ಯ | ನ್ಯಾಯ |ಧರ್ಮ

ವಿದೇಶಿ ದೇಣಿಗೆ ಪ್ರಕರಣದಲ್ಲಿ ಆಮ್ನೆಸ್ಟಿ ಇಂಡಿಯಾ ವಿರುದ್ಧ ಸಿಬಿಐ ಆರೋಪಪಟ್ಟಿ 

ವಿದೇಶಿ ಕೊಡುಗೆ (ನಿಯಂತ್ರಣ) ಕಾಯಿದೆಯಡಿ ನಿಯಮಗಳಿಂದ ತಪ್ಪಿಸಿಕೊಳ್ಳಲು ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಅನ್ನು ಸ್ಥಾಪಿಸಲಾಗಿದೆ ಎಂಬ ಆರೋಪ

ಮಾನವ ಹಕ್ಕುಗಳ ಸಂಸ್ಥೆ ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಇಂಡಿಯಾ, ಅದರ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಆಕಾರ್ ಪಟೇಲ್ ಮತ್ತು ಇತರ ಆರು ವ್ಯಕ್ತಿಗಳ ವಿರುದ್ಧ ವಿದೇಶಿ ಧನಸಹಾಯ ನಿಯಮಗಳ ಉಲ್ಲಂಘನೆ ಆರೋಪದ ಕುರಿತು ಕೇಂದ್ರೀಯ ತನಿಖಾ ದಳವು ಪೂರಕ ಆರೋಪಪಟ್ಟಿ ಸಲ್ಲಿಸಿದೆ.

ಪಟೇಲ್, ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಎಐಐಪಿಎಲ್), ಇಂಡಿಯನ್ಸ್ ಫಾರ್ ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಟ್ರಸ್ಟ್, ಎಐಐಪಿಎಲ್‌ನ ಮಾಜಿ ನಿರ್ದೇಶಕರಾದ ಶೋಭಾ ಮಥಾಯಿ, ನಂದಿನಿ ಆನಂದ್ ಬಸಪ್ಪ ಮತ್ತು ಮಿನಾರ್ ವಾಸುದೇವ ಪಿಂಪಲ್, ಎಐಐಪಿಎಲ್ ಕಾರ್ಯಾಚರಣೆ ಮುಖ್ಯಸ್ಥ ಮೋಹನ್ ಪ್ರೇಮಾನಂದ ಮುಂಡ್ಕೂರ್ ಮತ್ತು ಅದರ ಅಧಿಕೃತ ಸಿಗ್ನೇಟರಿ ರಾಜ್  ಕಿಶೋರ್ ಕಪಿಲ್ ವಿರುದ್ಧ ಪೂರಕ ಆರೋಪಪಟ್ಟಿ ಸಲ್ಲಿಸಲಾಗಿದೆ.

ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120 ಬಿ (ಕ್ರಿಮಿನಲ್ ಪಿತೂರಿ) ಮತ್ತು ವಿದೇಶಿ ಕೊಡುಗೆ (ನಿಯಂತ್ರಣ) ಕಾಯಿದೆ (provisions of the Foreign Contribution (Regulation) Act), 2010 ರ ನಿಬಂಧನೆಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದೆ.

ಯುನೈಟೆಡ್ ಕಿಂಗ್‌ಡಮ್‌ನಿಂದ ವಿದೇಶಿ ದೇಣಿಗೆ ಸ್ವೀಕರಿಸಲು 2011-12ರಲ್ಲಿ ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಇಂಡಿಯಾ ಫೌಂಡೇಶನ್ ಟ್ರಸ್ಟ್‌ಗೆ ಅನುಮತಿ ನೀಡಲಾಗಿದೆ ಎಂದು ಕೇಂದ್ರೀಯ ತನಿಖಾ ಸಂಸ್ಥೆ ಹೇಳಿದೆ. ಆದರೂ, ಭದ್ರತಾ ಏಜೆನ್ಸಿಗಳಿಂದ ಪ್ರತಿಕೂಲ ಇನ್‌ಪುಟ್‌ಗಳನ್ನು ಅನುಸರಿಸಿ ಅನುಮತಿಯನ್ನು ರದ್ದುಗೊಳಿಸಲಾಗಿದೆ.

“ಎಫ್‌ಸಿಆರ್‌ಎ [ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ] ಮಾರ್ಗದಿಂದ ತಪ್ಪಿಸಿಕೊಳ್ಳಲು” ಇಂಡಿಯನ್ಸ್ ಫಾರ್ ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಟ್ರಸ್ಟ್ ಮತ್ತು ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಅನ್ನು 2012-13 ಮತ್ತು 2013-14 ರಲ್ಲಿ ರಚಿಸಲಾಗಿದೆ ಎಂದು ಭದ್ರತಾ ಏಜೆನ್ಸಿ ಆರೋಪಿಸಿದೆ.

ಭಾರತದಲ್ಲಿ ಲಾಭರಹಿತ ಸಂಸ್ಥೆಗಳು ವಿದೇಶಿ ನಿಧಿಯನ್ನು ಸ್ವೀಕರಿಸಲು ವಿದೇಶಿ ಕೊಡುಗೆ (ನಿಯಂತ್ರಣ) ಕಾಯಿದೆಯಡಿ ನೋಂದಾಯಿಸಿಕೊಳ್ಳಬೇಕು.

“ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಇಂಡಿಯಾ ಭಾರತೀಯ ಮತ್ತು ಅಂತರಾಷ್ಟ್ರೀಯ ಕಾನೂನಿನ ಪ್ರಕಾರ ನಡೆದುಕೊಂಡಿದೆ. ಸರಕಾರದ ಗಂಭೀರ ನಿಷ್ಕ್ರಿಯತೆಗಳ ಬಗ್ಗೆ ʼಮಿತಿಮೀರಿದʼ ಸವಾಲು ಹಾಕಿದ್ದರಿಂದ “ಕಾನೂನುಬದ್ಧ ನಿಧಿಸಂಗ್ರಹಣೆ” ಯನ್ನು ಮನಿ ಲಾಂಡರಿಂಗ್ ಎಂದು ಬಿಂಬಿಸಲಾಗುತ್ತಿದೆ,” ಎಂದು ಆಮ್ನೆಸ್ಟಿ ಇಂಡಿಯಾ ಹೇಳಿದೆ.

Related Articles

ಇತ್ತೀಚಿನ ಸುದ್ದಿಗಳು