Monday, June 17, 2024

ಸತ್ಯ | ನ್ಯಾಯ |ಧರ್ಮ

ಬದನವಾಳುವಿನಲ್ಲಿ ಗಾಂಧಿ ಜಯಂತಿ ಆಚರಿಸಿರುವುದು ಹೆಮ್ಮೆಯ ಸಂಗತಿ: ಡಿ.ಕೆ.ಶಿ

ಮೈಸೂರು: ಮೈಸೂರು ಜಿಲ್ಲೆಯ ಬದನವಾಳು ಗ್ರಾಮದಲ್ಲಿ ಮಹಾತ್ಮ ಗಾಂಧಿ ಜಯಂತಿ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ಗಾಂಧೀಜಿ ಅವರು ಸ್ಪರ್ಶಿಸಿದ ನೆಲವು ಭಾರತೀಯರ ಪಾಲಿಗೆ ಪವಿತ್ರ ಸ್ಥಳದಂತೆ. 1927ರಂದು ರಾಷ್ಟ್ರಪಿತ ಭೇಟಿ ನೀಡಿದ ಬದನವಾಳುವಿನಲ್ಲಿ ಗಾಂಧಿ ಜಯಂತಿ ಆಚರಿಸುತ್ತಿರುವುದು ನಿಜವಾಗಿಯೂ ನಮಗೆ ಹೆಮ್ಮೆಯ ಸಂಗತಿ ಎಂದು ಡಿ.ಕೆ.ಶಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬದನವಾಳು ಗ್ರಾಮದಲ್ಲಿನ ಗಾಂಧಿ ಪುತ್ತಳಿಗೆ ಡಿ.ಕೆ.ಶಿ ಗೌರವ ಸಲ್ಲಿಸುತ್ತಿರುವ ದೃಶ್ಯ

ಗಾಂಧೀಜಿ ಕನಸಿನ ಪುಟ್ಟ ಭಾರತವೇ ಬದನವಾಳು. ರಾಷ್ಟ್ರಪಿತ ಸ್ಪರ್ಶಿಸಿದ ಪುಣ್ಯಭೂಮಿಯಲ್ಲಿ ಗಾಂಧಿ ಜಯಂತಿ ಆಚರಿಸಿದ್ದು ಇತಿಹಾಸ ಪುಟದಲ್ಲಿ ಉಳಿಯಲಿದೆ. ಬದನವಾಳು ಖಾದಿ ಗ್ರಾಮೋದ್ಯೋಗ ಕೇಂದ್ರವು ಸ್ವಾವಲಂಬಿ ಭಾರತ ಕಟ್ಟುವತ್ತ ಮಹತ್ವದ ಹೆಜ್ಜೆ ಇಡುತ್ತಿದೆ. ಅವರ ಹೆಜ್ಜೆಗಳು ಭಾರತ ಐಕ್ಯತಾ ಯಾತ್ರೆಗೆ ಜೊತೆಯಾಗಿವೆ ಎಂದು ಡಿ.ಕೆ.ಶಿ ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು