ಹೊಸದೆಹಲಿ: ರೋಗಿಗಳಿಗೆ ಅಪಾಯ ತಂದೊಡ್ಡಬಹುದು ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ 156 ಬಗೆಯ ಔಷಧಗಳನ್ನು ನಿಷೇಧಿಸಿದೆ. ಇವುಗಳನ್ನು ಮುಖ್ಯವಾಗಿ ಜ್ವರ, ಶೀತ, ನೋವು ಮತ್ತು ಅಲರ್ಜಿಗಳಿಗೆ ಔಷಧಿಗಳಾಗಿ ಬಳಸಲಾಗುತ್ತದೆ.
ಸಾಮಾನ್ಯವಾಗಿ ಸಂಯೋಜಿತ ಔಷಧಿಗಳನ್ನು ಕಾಕ್ಟೈಲ್ ಔಷಧಿಗಳೆಂದು ಕರೆಯಲಾಗುತ್ತದೆ, ಇದರಲ್ಲಿ ಎರಡು ಅಥವಾ ಹೆಚ್ಚು ಸಕ್ರಿಯ ಔಷಧಗಳನ್ನು ಸ್ಥಿರ ಪ್ರಮಾಣದಲ್ಲಿ ಸಂಯೋಜಿಸಿರಲಾಗುತ್ತದೆ. Aceclofenac 500 mg and paracetamol 125 mg tablets, Mefenamic acid and paracetamol injection, Cetirizine HCL and Paracetamol and Phenylephrine HCL, Levocetirizine and Phenylephrine HCL and Paracetamol ನಿಷೇಧಿತ ಔಷಧಿಗಳ ಪಟ್ಟಿಯಲ್ಲಿವೆ.
ಈ ನಿಟ್ಟಿನಲ್ಲಿ ಇದೇ ತಿಂಗಳ 12ರಂದು ಅಧಿಸೂಚನೆ ಹೊರಡಿಸಲಾಗಿದೆ. ಸುರಕ್ಷಿತ ಪರ್ಯಾಯ ಔಷಧಗಳು ಲಭ್ಯವಿದ್ದಾಗ ಫಿಕ್ಸೆಡ್ ಡೋಸ್ ಕಾಂಬಿನೇಷನ್ (ಎಫ್ ಡಿಸಿ) ಔಷಧಗಳ ಬಳಕೆ ಅಪಾಯಕ್ಕೆ ಆಹ್ವಾನ ನೀಡುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.