Home ದೆಹಲಿ ಜನಸಂದಣಿ ನಿಯಂತ್ರಣಕ್ಕೆ ಕೇಂದ್ರದಿಂದ ಹೊಸ ಮಾರ್ಗಸೂಚಿ ಬಿಡುಗಡೆ

ಜನಸಂದಣಿ ನಿಯಂತ್ರಣಕ್ಕೆ ಕೇಂದ್ರದಿಂದ ಹೊಸ ಮಾರ್ಗಸೂಚಿ ಬಿಡುಗಡೆ

0

ದೆಹಲಿ: ಧರಣಿಗಳು ಮತ್ತು ಬೃಹತ್ ಜನಸಮೂಹಗಳನ್ನು ಗಮನದಲ್ಲಿಟ್ಟುಕೊಂಡು, ಅವುಗಳನ್ನು ನಿಯಂತ್ರಿಸಲು ಕೇಂದ್ರ ಗೃಹ ಸಚಿವಾಲಯವು ಹೊಸ ಮಾರ್ಗಸೂಚಿಗಳನ್ನು ಸಿದ್ಧಪಡಿಸಿದೆ.

ಕುಂಭಮೇಳ, ಕ್ರೀಡಾ ಸ್ಟೇಡಿಯಂಗಳು, ಧಾರ್ಮಿಕ ಕಾರ್ಯಕ್ರಮಗಳು ಮತ್ತು ಆಧ್ಯಾತ್ಮಿಕ ನಾಯಕರ ಪ್ರವಚನಗಳಿಗೆ ಈ ಮಾರ್ಗಸೂಚಿಗಳು ಅನ್ವಯಿಸುತ್ತವೆ. ಧಾರ್ಮಿಕ ಗಲಭೆಗಳು, ವಿದ್ಯಾರ್ಥಿ ಚಳುವಳಿಗಳು ಮತ್ತು ಸಾಮಾಜಿಕ ಮಾಧ್ಯಮದಿಂದ ಪ್ರೇರಿತವಾದ ಸಾರ್ವಜನಿಕ ಆಂದೋಲನಗಳಿಗೂ ಇವೇ ಅನ್ವಯವಾಗಲಿವೆ. ಕಾರ್ಮಿಕರ ರ್ಯಾಲಿಗಳಿಗಾಗಿ ವಿಶೇಷ ವ್ಯವಸ್ಥೆಗಳನ್ನು ಪ್ರಸ್ತಾಪಿಸಲಾಗಿದೆ.

ಜನಸಮೂಹವನ್ನು ನಿಯಂತ್ರಿಸುವ ವಿಧಾನಗಳು

ಜನಸಮೂಹವನ್ನು ತಡೆಯಲು (ಅರೆಸ್ಟಿಂಗ್):

ಯಾವುದೇ ರೀತಿಯ ಅನಾಹುತಕಾರಿ ಗುಂಪನ್ನು ಸಣ್ಣ ಅಥವಾ ನಿರ್ಬಂಧಿತ ಸ್ಥಳದಲ್ಲಿ ಪ್ರತ್ಯೇಕವಾಗಿ ಇರಿಸಲು ಕಟ್ಟಡಗಳು ಮತ್ತು ದಾರಿಗಳನ್ನು ಉಪಯೋಗಿಸಿ ಅವರನ್ನು ಒಂದು ನಿರ್ದಿಷ್ಟ ಪ್ರದೇಶದಲ್ಲಿ ಬಂಧಿಸಬೇಕು.

ಯಾವಾಗಲೂ ಸುರಕ್ಷಿತವಾಗಿ ಹೊರಹೋಗುವ ಮಾರ್ಗವನ್ನು (Safe Exit Route) ಕಲ್ಪಿಸಬೇಕು.

ಜನಸಮೂಹವನ್ನು ಚದುರಿಸಲು (ಡಿಸ್ಪರ್ಸಿಂಗ್):

ಗೋಡೆಯಂತೆ ಕಾಣುವ ಒಂದು ಅಥವಾ ಎರಡು ಪೊಲೀಸ್ ಲೈನ್‌ಗಳನ್ನು ರಚಿಸಬೇಕು.

ಒಂದು ಪ್ರದೇಶದ ಕಡೆಗೆ ಸಾಗುತ್ತಿರುವ ಜನಸಮೂಹವನ್ನು ದಿಗ್ಬಂಧನ ಮಾಡಲು ಮತ್ತು ಆ ಗುಂಪನ್ನು ನಿಧಾನವಾಗಿ ಹಿಂದಕ್ಕೆ ನೂಕಲು ಈ ವಿಧಾನವನ್ನು ಬಳಸಬೇಕು.

ಇದಕ್ಕಾಗಿ ರಕ್ಷಣಾ ಶೀಲ್ಡ್‌ಗಳು ಮತ್ತು ಅಗತ್ಯವಿದ್ದರೆ ಬ್ಯಾರಿಕೇಡ್‌ಗಳನ್ನು ಬಳಸಬೇಕು.

ಜನಸಮೂಹವನ್ನು ವಿಭಜಿಸಲು (ಡಿಸ್ಪರ್ಸಿಂಗ್):

ಪೊಲೀಸರು ‘V’ ಆಕಾರದಲ್ಲಿ ನಿಲ್ಲಬೇಕು.

ದಾರಿಯನ್ನು (ಉದಾಹರಣೆಗೆ ಅಂಬುಲೆನ್ಸ್‌ಗಾಗಿ) ತೆರವುಗೊಳಿಸಲು, ಜನಸಮೂಹವನ್ನು ಎರಡು ಭಾಗಗಳಾಗಿ ವಿಭಜಿಸಬೇಕು.

You cannot copy content of this page

Exit mobile version