Thursday, August 21, 2025

ಸತ್ಯ | ನ್ಯಾಯ |ಧರ್ಮ

ರಶ್ಮಿಕಾ ಮಂದಣ್ಣ| ಡೀಪ್‌ ಫೇಕ್‌ ವಿಡಿಯೋಗಳನ್ನು ತೆಗೆದು ಹಾಕುವಂತೆ ಸೋಷಿಯಲ್‌ ಮೀಡಿಯಾ ಕಂಪನಿಗಳಿಗೆ ಸೂಚಿಸಿದ ಕೇಂದ್ರ

ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವಿಡಿಯೋ ಸದ್ದು ಮಾಡಿದ ನಂತರ ಕೇಂದ್ರ ಸರ್ಕಾರ ಜಾಗೃತಿಯಾದಂತೆ ಕಂಡುಬಂದಿದೆ. ವಿವಾದದ ಹಿನ್ನೆಲೆಯಲ್ಲಿ, ತಪ್ಪು ಮಾಹಿತಿ, ಡೀಪ್‌ಫೇಕ್‌ಗಳು ಮತ್ತು ಜಾಲತಾಣದ ನಿಯಮಗಳನ್ನು ಉಲ್ಲಂಘಿಸುವ ಇತರ ವಿಷಯಗಳ ಅಡಿಯಲ್ಲಿ ಪ್ರಮುಖ ಸಾಮಾಜಿಕ ಮಾಧ್ಯಮ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ಅದರಂತೆ 36 ಗಂಟೆಗಳ ಒಳಗೆ ಇಲ್ಲಿಯವರೆಗೂ ಆದ ನಿಂದನಾತ್ಮಕ ಹಾಗೂ ಅವಹೇಳನಕಾರಿ ಎನ್ನಿಸುವಂತಹ ಫೋಟೊ ಮತ್ತು ವಿಡಿಯೋಗಳನ್ನು ತೆಗೆದುಹಾಕಲು ಪ್ರಮುಖ ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ಐಟಿ ನಿಯಮಗಳು 2021 ರಲ್ಲಿ ವಿವರಿಸಿರುವ ನಿಯಮಗಳು ಮತ್ತು ನಿಬಂಧನೆಗಳನ್ನು ಉಲ್ಲಂಘಿಸುವ ವಿಷಯದ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ನಿರ್ದಿಷ್ಟ ಸಮಯದ ಚೌಕಟ್ಟಿನೊಳಗೆ ಈ ಸೂಚನೆಯನ್ನು ಪಾಲಿಸಬೇಕು. ಅಲ್ಲದೆ, ಅಂತಹ ಉಲ್ಲಂಘನೆಯ ಮಾಹಿತಿ, ವಿಷಯ ಅಥವಾ ಡೀಪ್‌ಫೇಕ್‌ಗಳನ್ನು ಹಂಚಿಕೊಳ್ಳುವ ಅಥವಾ ಹೋಸ್ಟ್ ಮಾಡುವುದರ ವಿರುದ್ಧ ಬಳಕೆದಾರರಿಗೆ ಎಚ್ಚರಿಕೆ ನೀಡಲಾಗುತ್ತದೆ.

“ಅಂತಹ ವರದಿ ಮಾಡಿದ 36 ಗಂಟೆಗಳ ಒಳಗೆ ವರದಿ ಮಾಡಿದಾಗ ಅಂತಹ ಯಾವುದೇ ವಿಷಯ ಇದ್ದರೂ ತೆಗೆದುಹಾಕಿ ಮತ್ತು ಐಟಿ ನಿಯಮಗಳು 2021 ರ ಅಡಿಯಲ್ಲಿ ನಿಗದಿಪಡಿಸಿದ ಸಮಯದ ಚೌಕಟ್ಟಿನೊಳಗೆ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಮಾಹಿತಿ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಹೇಳಿಕೆ ನೀಡಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page