ದೆಹಲಿ: ಕೃಷಿಯನ್ನು ಸಂಪೂರ್ಣವಾಗಿ ಕಾರ್ಪೊರೇಟ್ ಸಂಸ್ಥೆಗಳಿಗೆ ವಹಿಸಿ ಗರಿಷ್ಠ ಲಾಭ ಪಡೆಯುವ ಪ್ರಸ್ತಾವನೆಗಳು ಕೇಂದ್ರ ಬಜೆಟಿನಲ್ಲಿವೆ ಎಂದು ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಹೇಳಿದೆ.
ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಕ್ಷೇತ್ರಗಳ ಹಂಚಿಕೆಯಲ್ಲಿ ಶೇ.21.2ರಷ್ಟು ಕಡಿತವಾಗಿದೆ ಎಂದು ಹೇಳಿದೆ. ಕನಿಷ್ಠ ಬೆಂಬಲ ಬೆಲೆ ನೀಡಿ ಬೆಳೆ ಖರೀದಿಗೆ ಕ್ರಮಕೈಗೊಂಡಿಲ್ಲ ಎಂದು ಸಂಘಟನೆ ಆರೋಪಿಸಿದಡ.
ಉದ್ಯೋಗ ಖಾತ್ರಿ, ಪಿಎಂ ಕಿಸಾನ್ ಮತ್ತು ಪಿಎಂ ಫಸಲ್ ಭೀಮಾ ಯೋಜನೆಗಳಿಗೆ ಮಧ್ಯಂತರ ಬಜೆಟ್‌ನಲ್ಲಿ ಮೀಸಲಿಟ್ಟಿದ್ದಕ್ಕಿಂತ ಹೆಚ್ಚಿನ ಅನುದಾನವನ್ನು ಘೋಷಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.
ಸಾರ್ವಜನಿಕ ವಲಯದ ಕೃಷಿ ಸಂಶೋಧನಾ ಕೇಂದ್ರಗಳನ್ನು ತೆರೆಯಲು ಬೇಯರ್ ಮತ್ತು ಅಮೆಜಾನ್‌ನಂತಹ ಏಕಸ್ವಾಮ್ಯಕ್ಕೆ ಅವಕಾಶ ನೀಡುವ ಮೂಲಕ ಹಣಕಾಸು ಸಚಿವರು ಬಜೆಟ್‌ನಲ್ಲಿ ರೈತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.
ದೇಶದಲ್ಲಿ ಕೃಷಿ ಸಂಶೋಧನೆಯನ್ನು ಖಾಸಗಿ ಕಂಪನಿಗಳಿಗೆ ಒಪ್ಪಿಸುವುದನ್ನು ಒಪ್ಪಲಾಗದು ಎಂದು ಎಐಕೆಎಸ್ ಟೀಕಿಸಿದೆ. ಆರು ಕೋಟಿ ರೈತರು ಮತ್ತು ಅವರ ಭೂಮಿಯನ್ನು ಕೇಂದ್ರೀಕೃತ ಡಿಜಿಟಲ್ ವ್ಯವಸ್ಥೆಯಲ್ಲಿ ನೋಂದಾಯಿಸುವ ಪ್ರಸ್ತಾಪವು ಕಾರ್ಪೊರೇಟ್‌ಗಳು ಮತ್ತು ಅವರ ಏಜೆಂಟರ ಭೂ ವಂಚನೆಗೆ ಅನುಕೂಲವಾಗಲಿದೆ ಎಂದು ಕಿಸಾನ್ ಸಭಾ ಆರೋಪಿಸಿದೆ.