ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ಯುವ ಬ್ಯಾಟರ್ ಋತುರಾಜ್ ಗಾಯಕ್ವಾಡ್ (Ruturaj Gaikwad) ಭರ್ಜರಿ ಶತಕ ಸಿಡಿಸಿ ವಿಜೃಂಭಿಸಿದ್ದಾರೆ. 4ನೇ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ ಬ್ಯಾಟಿಂಗ್ಗೆ ಆಗಮಿಸಿದ ಗಾಯಕ್ವಾಡ್, ಕೊಹ್ಲಿ ( Virat Kohli) ಜೊತೆಗೂಡಿ ಅದ್ಭುತ ಜೊತೆಯಾಟ ನೀಡಿದರು. ಆರಂಭದಿಂದಲೂ ಸಂಪೂರ್ಣ ಹಿಡಿತ ಸಾಧಿಸಿದ ಗಾಯಕ್ವಾಡ್ ಕೇವಲ 52 ಎಸೆತಗಳು ಅರ್ಧಶತಕ ಸಿಡಿಸಿದರು. ನಂತರ ಕೇವಲ 25 ಎಸೆತಗಳಲ್ಲಿ ತಮ್ಮ ಶತಕ ಪೂರ್ಣಗೊಳಿಸಿದರು.
ಕ್ಷಿಣ ಆಫ್ರಿಕಾ ಬೌಲರ್ಸ್ ಅನ್ನು ದಂಡಿಸಿದ ವಿರಾಟ್ ಕೊಹ್ಲಿ 90 ಎಸೆತಗಳಲ್ಲಿ 53ನೇ ಏಕದಿನ ಶತಕ ಮತ್ತು 84ನೇ ಅಂತಾರಾಷ್ಟ್ರೀಯ ಶತಕ ಪೂರೈಸಿದರು. ಇದು ಈ ವರ್ಷ ತವರಿನಲ್ಲಿ ವಿರಾಟ್ ಕೊಹ್ಲಿ ಅವರ ಸತತ ಎರಡನೇ ಶತಕ. ಮೊದಲ ಏಕದಿನ ಪಂದ್ಯದಲ್ಲಿಯೂ ಕೊಹ್ಲಿ 135 ರನ್ ಗಳಿಸಿದ್ದರು. ಇದು ಕೊಹ್ಲಿ ಅವರ ಸತತ ಮೂರನೇ 50 ಪ್ಲಸ್ ಸ್ಕೋರ್ ಆಗಿದೆ. ಈ ಎರಡು ಏಕದಿನ ಪಂದ್ಯಗಳಿಗೂ ಮೊದಲು, ಕೊಹ್ಲಿ ಸಿಡ್ನಿಯಲ್ಲಿ ಅರ್ಧಶತಕ ಗಳಿಸಿದ್ದರು.
