Monday, June 17, 2024

ಸತ್ಯ | ನ್ಯಾಯ |ಧರ್ಮ

ʼಚಡ್ಡಿಗಳೇ ಎಚ್ಚರ! ನಾವು ಮತ್ತೆ ಬರುತ್ತೇವೆʼ : ರಸ್ತೆಯ ಮೇಲೆ PFI ಬರಹ, ಬಿಜೆಪಿ ದೂರು

ಬಂಟ್ವಾಳ : ಪಿಎಫ್‌ಐ ಬ್ಯಾನ್‌ ಹಿನ್ನಲೆ ನಾವು ಮತ್ತೆ ಬರುತ್ತೇವೆ ಎಂದು ರಸ್ತೆಯ ಮೇಲೆ ಎಚ್ಚರಿಕೆಯ ಬರಹವನ್ನು ಬರೆದಿರುವ ಘಟನೆ ಬಂಟ್ವಾಳದ ಸ್ನೇಹಗಿರಿ ಎಂಬಲ್ಲಿ ನಡೆದಿದೆ.

ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಎನ್‌ಐಎ ದಾಳಿಯ ಸಂಬಂಧಪಟ್ಟಂತೆ ಸೆಪ್ಟಂಬರ್‌ನಲ್ಲಿ 5 ವರ್ಷಗಳ ಕಾಲ ಪಿಎಫ್‌ಐ ಬ್ಯಾನ್‌ ಮಾಡಿದ್ದು, ಎಂಟು ಪಿಎಫ್‌ಐ ಸಂಸ್ಥೆಗಳನ್ನು ಸಹ ಕೇಂದ್ರ ಸರ್ಕಾರ ಬ್ಯಾನ್‌ ಮಾಡಿತ್ತು. ಈ ಹಿನ್ನಲೆ ಪಿಲಾತಾಬೆಟ್ಟು ಗ್ರಾಮದ ಸ್ನೇಹಗಿರಿ ಎಂಬಲ್ಲಿ ಪಿಎಫ್‌ಐ ಪರ ನಿಂತು ಪೋಲೀಸ್‌ ಠಾಣಾ ವ್ಯಾಪ್ತಿಯ  ರಸ್ತೆಯಲ್ಲೇ ಎಚ್ಚರಿಕೆಯನ್ನು ನೀಡಿದ್ದು, ರಸ್ತೆಯ  ಮೇಲೆ “ಚಡ್ಡಿಗಳೇ ಎಚ್ಚರ! PFI ನಾವು ಮರಳಿ ಬರುತ್ತೇವೆ “ ಎಂದು ಬರೆದಿದ್ದಾರೆ.

ಈ ಬಗ್ಗೆ ಅಲ್ಲಿನ ಸ್ಥಳೀಯ ಬಿಜೆಪಿ ಯುವಮೋರ್ಚ ಪುಂಜಾಲ್‌ ಕಟ್ಟೆ ಪೋಲೀಸ್‌ ಠಾಣೆಗೆ ದೂರು ನೀಡಿದ್ದು, ಕೂಡಲೇ  ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಇದನ್ನೂ ನೋಡಿ : ವಸಾಹತುಶಾಹಿಗೆ ಚಳ್ಳೆಹಣ್ಣು ತಿನ್ನಿಸಿದ ಶೂದ್ರ ರಾಣಿ ರಾಶ್ಮೋನಿ

ಕುಟಿಲ ವಸಾಹತುಶಾಹಿ ಕಂಪನಿಗೆ ಚಳ್ಳೆಹಣ್ಣು ತಿನ್ನಿಸಿ ಕೋಲ್ಕತಾದ ಹೂಗ್ಲಿ ನದಿ ತಟದಲ್ಲಿ ಕಾಳಿಕಾ ದೇವಿಗೆ ದಕ್ಷಿಣೇಶ್ವರ ದೇವಾಲಯ ನಿರ್ಮಿಸಿದ ಶೂದ್ರ ರಾಣಿ ರಾಶ್ಮೋನಿ ಭಾರತದ ಇತಿಹಾಸದ ಒಂದು ದಂತಕತೆ. ಸಹಾಯಕ ಪ್ರಾಧ್ಯಾಪಕರಾದ ಪುನೀತ್‌ ಕುಮಾರ್‌ ರಾಶ್ಮೋನಿಯ ಕತೆಯನ್ನು ಇಲ್ಲಿ ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು