ಬಾಗಲಕೋಟೆ: ಚಾಕುವಿನಿಂದ ಇರಿದು ಯೋಧನನ್ನು ಬರ್ಬರವಾಗಿ ಹತ್ಯೆ ಮಾಡಿರುವಂತಹ ಘಟನೆ ಜಿಲ್ಲೆಯ ಬಾದಾಮಿ ತಾಲೂಕಿನ ನೀರಲಕೇರಿ ಗ್ರಾಮದಲ್ಲಿ ನಡೆದಿದೆ.
ಊಟ ನೀಡುವ ವಿಚಾರವಾಗಿ ದಂಪತಿ ಜಗಳವಾಡಿಕೊಂಡಿದ್ದು, ಗಲಾಟೆ ಬಳಿಕ ಪತ್ನಿ ತನ್ನ ಸಹೋದರನಿಗೆ ಕರೆ ಮಾಡಿದ್ದು,ಪತಿ ಕಿರುಕುಳ ನೀಡಿರುವುದಾಗಿ ಮಾಹಿತಿ ನೀಡಿದ್ದಾಳೆ. ಸಹೋದರಿಗೆ ಕಿರುಕುಳ ನೀಡುತ್ತಿರುವ ವಿಷಯ ತಿಳಿದು ಆಕ್ರೋಶಗೊಂಡ ಸಹೋದರ ಭಾವನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಘಟನಾ ಸ್ಥಳಕ್ಕೆ ಕೆರೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಇದು ಕೇವಲ ಊಟದ ವಿಚಾರವಾಗಿ ಕೊಲೆಯಾಗಿಲ್ಲ ಬೇರೆಯವರ ಜೊತೆ ಅನೈತಿಕ ಸಂಬಂಧದ ಶಂಕೆ ಇರುವುದಾಗಿ ಕೇಳಿಬಂದಿದ್ದು ಕೊಲೆಗೆ ಇದು ಕೂಡ ಕಾರಣಗಿದೆ, ಹಿಗಾಗಿ ಸದ್ಯಕ್ಕೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕೊಲೆಯಾದ ಯೋಧ ಕರಿಸಿದ್ದಪ್ಪ ಕಳಸದ(25) ಎಂದು ತಿಳಿದು ಬಂದಿದೆ. ಧರಿಗೌಡ ದೂಳಪ್ಪ ಆರೋಪಿಯಾಗಿದ್ದು, ಕೊಲೆಗೆ ಕುಟುಂಬದವರ ಕುಮ್ಮಕ್ಕು ಇದ್ದು ,ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ವಿದ್ಯಾಶ್ರೀ, ಸಹೋದರ ಧರಿಗೌಡ ಮತ್ತು ಫಕೀರಗೌಡ, ವಿದ್ಯಾಶ್ರೀ ತಂದೆ ತಾಯಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತೆವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.