Sunday, January 11, 2026

ಸತ್ಯ | ನ್ಯಾಯ |ಧರ್ಮ

Champions Trophy : ಆಸ್ಟ್ರೇಲಿಯ ವಿರುದ್ಧ ಸೇಡು ತೀರಿಸಿಕೊಂಡು ಫೈನಲ್‌ ಪ್ರವೇಶಿಸಿದ ಭಾರತ

ದುಬೈ: ಚೇಸಿಂಗ್‌ ಮಾಸ್ಟರ್‌ ವಿರಾಟ್‌ ಕೊಹ್ಲಿ 84(98), ಅವರ ಅತ್ಯಮೂಲ ಅರ್ಧಶತಕದ ನೆರವಿನಿಂದ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 4 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಮೊದಲ ತಂಡವಾಗಿ ಫೈನಲ್‌ ಪ್ರವೇಶಿಸಿದೆ.

ಇಲ್ಲಿನ ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಆಸ್ಟ್ರೇಲಿಯಾ ತಂಡ 49.3 ಓವರ್‌ಗಳಲ್ಲಿ 264 ರನ್‌ಗೆ ಆಲೌಟ್‌ ಆಯಿತು. ತಂಡದ ಪರ ಆರಂಭಿಕ ಆಟಗಾರ ಟ್ರಾವಿಸ್‌ ಹೆಡ್‌ 39(33) ಬಿರುಸಿನ ಆರಂಭ ನೀಡಿದರು. ನಂತರ, ನಾಯಕ ಸ್ಟೀವ್‌ ಸ್ಮಿತ್‌ 73(96) ಹಾಗೂ ಅಲೆಕ್ಸ್‌ ಕ್ಯಾರಿ 61(57) ಇಬ್ಬರು ಅರ್ಧಶತಕ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್‌ಗಳು ನಿರೀಕ್ಷೆಗೆ ತಕ್ಕಂತೆ ಆಡಲಿಲ್ಲ.

ಭಾರತ ತಂಡದ ಪರ ಮೊಹಮ್ಮದ್‌ ಶಮಿ 3 ವಿಕೆಟ್‌ ಪಡೆದರೆ, ವರುಣ್‌ ಚಕ್ರವರ್ತಿ ಮತ್ತು ರವೀಂದ್ರ ಜಡೇಜಾ ತಲಾ 2 ವಿಕೆಟ್‌ ಹಾಗೂ ಹಾರ್ದಿಕ್‌ ಮತ್ತು ಅಕ್ಷರ್‌ ತಲಾ ಒಂದು ವಿಕೆಟ್‌ ಪಡೆದರು.

ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ಭಾರತ ತಂಡ 48.1 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 267 ರನ್‌ ಬಾರಿಸುವ ಮೂಲಕ ಫೈನಲ್‌ ತಲುಪಿತು.

ವಿರಾಟ್‌ ಕೊಹ್ಲಿ 84(98), ಶ್ರೇಯಸ್‌ ಅಯ್ಯರ್‌ 45(62), ಕೆಎಲ್‌ ರಾಹುಲ್‌ ಔಟಗದೇ 42(34), ಹಾರ್ದಿಕ್‌ ಪಟೇಲ್‌ 28(24) ರನ್‌ ಗಳಿಸುವ ಮೂಲಕ ಭಾರತದ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದರು.

ಆಸ್ಟ್ರೇಲಿಯಾ ತಂಡದ ಪರ ನಾಥನ್‌ ಎಲ್ಲಿಸ್‌ ಮತ್ತು ಆಡಂ ಜಂಪಾ ತಲಾ 2 ವಿಕೆಟ್‌ ಪಡೆದರೆ, ಉಳಿದಂತೆ ಡ್ವಾರ್ಶಿಸ್‌ ಮತ್ತು ಕೊನೊಲಿ ತಲಾ ಒಂದು ವಿಕೆಟ್‌ ಪಡೆದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page