Thursday, August 21, 2025

ಸತ್ಯ | ನ್ಯಾಯ |ಧರ್ಮ

ಟಿಕೆಟ್ ವಂಚನೆ ಪ್ರಕರಣ : ಚೈತ್ರ ಸೇರಿದಂತೆ 9 ಮಂದಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ

ಬಿಜೆಪಿ ಟಿಕೆಟ್ ಗೆ ಆಮಿಷವೊಡ್ಡಿ 5 ಕೋಟಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದಾಪುರ ಮೂಲದ ಚೈತ್ರ ಸೇರಿದಂತೆ 9 ಮಂದಿ ಆರೋಪಿಗಳ ವಿರುದ್ಧ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಸಿಸಿಬಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

ಸಿಸಿಬಿ ಅಧಿಕಾರಿಗಳು 75 ಮಂದಿ ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಂಡು ಸುಮಾರು 800 ಪುಟಗಳ ಚಾರ್ಜ್​ಶೀಟ್ ಸಲ್ಲಿಸಿದ್ದಾರೆ. ಡಿಜಿಟಲ್ ಸಾಕ್ಷಿಗಳು, ಬ್ಯಾಂಕ್ ಸ್ಟೇಟ್ ಮೆಂಟ್​ಗಳು, ಸಾಂದರ್ಭಿಕ ಸಾಕ್ಷಿಗಳು, ಸ್ವಾಮಿಜಿ ಕಾರು ಚಾಲಕ ಹಣ ಇಟ್ಟು ಹೋಗಿದ್ದ ಬಗ್ಗೆ ಸೇರಿದಂತೆ ಸ್ಪಾಟ್ ಮಹಜರ್ ನಡೆಸಿ ಹಣ ಸೀಜ್ ಮಾಡಿದ ಸ್ಥಳಗಳ ಬಗ್ಗೆ ಸಿಸಿಬಿ ಪೊಲೀಸರು ಚಾರ್ಜ್​​ಶೀಟ್​ನಲ್ಲಿ ಉಲ್ಲೇಖಿಸಿದ್ದಾರೆ.

ಅಲ್ಲದೇ ಚೈತ್ರಾ ವಂಚನೆ ಪ್ರಕರಣದಲ್ಲಿ‌ ಈವರೆಗೆ ಬರೋಬ್ಬರಿ 4 ಕೋಟಿ 11 ಲಕ್ಷ ರೂಪಾಯಿ ವಸೂಲಿ ಮಾಡಲಾಗಿದೆ. ಪ್ರಮುಖ ಆರೋಪಿ ಚೈತ್ರಾ, ಶ್ರೀಕಾಂತ್, ಗಗನ್ ಕಡೂರ್, ಹಾಲಶ್ರೀ, ಧನರಾಜ್ ಸೇರಿದಂತೆ 9 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.

ದೂರುದಾರ ಗೋವಿಂದ ಬಾಬು ಪೂಜಾರಿ ಬಳಿ ಎಲ್ಲಾ ಆಡಿಯೋ, ವಿಡಿಯೋವನ್ನು ಸಿಸಿಬಿ ಪೊಲೀಸರು ಪಡೆದಿದ್ದಾರೆ. ಗೋವಿಂದ ಬಾಬು ಪೂಜಾರಿ ಬಳಿಯೇ ಡೀಲ್ ಸಂಬಂಧ 10 ವಿಡಿಯೋ ಪಡೆಯಲಾಗಿದೆ. ಆರೋಪಿಗಳ ಮೊಬೈಲ್ ಗಳ ಡೇಟಾ ರಿಟ್ರೀವ್ ವರದಿ ಕೂಡ ಉಲ್ಲೇಖಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page