ನಾಳೆ ಚೆನ್ನಮ್ಮ ಅವರ ಕಾರ್ಯ, ಸಿದ್ಧತೆ ಬಹುತೇಕ ಪೂರ್ಣ – ಬಾರಿ ಜನರ ನಿರೀಕ್ಷೆ

ಹಾಸನ : ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ದಿ. ಚೆನ್ನಮ್ಮ ಅವರ ಉತ್ತರಕ್ರಿಯಾದಿ ಕಾರ್ಯ ಜುಲೈ 30ರಂದು ಗುರುವಾರ ನಡೆಯಲಿದ್ದು, ಇದಕ್ಕಾಗಿ ಭರದಿಂದ ನಡೆಯುತ್ತಿರುವ ಪೂರ್ವಸಿದ್ಧತಾ ಕಾರ್ಯಗಳು ಬಹುತೇಕ ಅಂತಿಮ ಹಂತ ತಲುಪಿವೆ. ಸಿದ್ಧತಾ ಕಾರ್ಯಗಳ ಮೇಲ್ವಿಚಾರಣೆ ನಡೆಸಿದ್ದಾರೆ. ಮಂಗಳವಾರವೂ ಎಚ್.ಡಿ. ಕುಮಾರಸ್ವಾಮಿ ಸ್ಥಳಕ್ಕೆ ಆಗಮಿಸಿ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಈ ವೇಳೆ ಹಾಸನ ಶಾಸಕ **ಎಚ್.ಪಿ. ಸ್ವರೂಪ್ ಪ್ರಕಾಶ್**, ಶ್ರವಣಬೆಳಗೊಳ ಶಾಸಕ **ಬಾಲಕೃಷ್ಣ** ಸೇರಿದಂತೆ ಮುಖಂಡರು ಜೊತೆಗಿದ್ದರು.

ಚೆನ್ನಮ್ಮ ಅವರ 11ನೇ ದಿನದ ಕಾರ್ಯಕ್ಕೆ ಲಕ್ಷಕ್ಕೂ ಅಧಿಕ ಮಂದಿ ಆಗಮಿಸುವ ನಿರೀಕ್ಷೆ ಇದ್ದು, ಜನಸಂದಣಿ ನಿಯಂತ್ರಣ, ವಾಹನ ನಿಲುಗಡೆ, ಊಟದ ವ್ಯವಸ್ಥೆ ಸೇರಿದಂತೆ ಪ್ರತಿಯೊಂದು ವಿಭಾಗಕ್ಕೂ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಅನ್ನಸಂತರ್ಪಣೆಯ ಜವಾಬ್ದಾರಿಯನ್ನು ಪ್ರಸಿದ್ಧ ಮಯ್ಯಾಸ್ ಗ್ರೂಪ್ ಗೆ ವಹಿಸಲಾಗಿದ್ದು, ಸುಮಾರು ಆರು ವಿಧದ ಸಿಹಿತಿಂಡಿ ಸೇರಿದಂತೆ ವಿವಿಧ ಬಗೆಯ ಭೋಜನ ಸಿದ್ಧಪಡಿಸಲಾಗುತ್ತಿದೆ. ಸುಮಾರು 1500 ಬಾಣಸಿಗರು ಅಡುಗೆ ತಯಾರಿಯಲ್ಲಿ ತೊಡಗಿಕೊಳ್ಳಲಿದ್ದಾರೆ.

ಸಾರ್ವಜನಿಕರು ಹಾಗೂ ಗಣ್ಯರಿಗಾಗಿ ಪ್ರತ್ಯೇಕವಾಗಿ ಒಟ್ಟು 16 ಊಟದ ಕೌಂಟರ್‌ಗಳನ್ನು ತೆರೆಯಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದರೂ ಯಾವುದೇ ತೊಂದರೆಯಾಗದಂತೆ ಅನ್ನಸಂತರ್ಪಣೆಗೆ ವ್ಯವಸ್ಥೆ ಮಾಡಲಾಗಿದೆ.

ಒಂದು ಕಿ.ಮೀ. ದೂರದಿಂದಲೇ ವಾಹನ ನಿಲುಗಡೆ ವ್ಯವಸ್ಥೆ

ಕಾರ್ಯಕ್ರಮ ನಡೆಯುವ ಸ್ಥಳದಿಂದ ಸುಮಾರು ಒಂದು ಕಿ.ಮೀ. ದೂರದಲ್ಲೇ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.ಊಟದ ಸ್ಥಳಕ್ಕೆ ತೆರಳುವ ಮಾರ್ಗ, ಮಹಿಳೆಯರ ಊಟದ ಸ್ಥಳ ಹಾಗೂ ಬೈಕ್-ಕಾರುಗಳ ನಿಲುಗಡೆಗೆ ಪ್ರತ್ಯೇಕ ಮಾರ್ಗಗಳನ್ನು ನಿಗದಿಪಡಿಸಲಾಗಿದೆ.

ಹಾಸನ ಕಡೆಯಿಂದ ಆಗಮಿಸುವವರಿಗೆ ಹೆದ್ದಾರಿ ಎದುರು ಹಾಗೂ ಎಡಭಾಗದಲ್ಲಿ, ಹರಿಹರಪುರ ಕಡೆಯಿಂದ ಬರುವವರಿಗೆ **ಮೊರಾರ್ಜಿ ವಸತಿ ಶಾಲೆ ಸುತ್ತಮುತ್ತ, ನೀರಿನ ಟ್ಯಾಂಕ್ ಪಕ್ಕ, ಹೆಲಿಪ್ಯಾಡ್ ಕೆಳಭಾಗ, ಹರದನಹಳ್ಳಿ ಸರ್ಕಾರಿ ಸಂಯುಕ್ತ ಶಾಲೆ ಸೇರಿದಂತೆ ಸುಮಾರು ಹತ್ತು ಕಡೆ ಪಾರ್ಕಿಂಗ್ ಸ್ಥಳಗಳನ್ನು ಗುರುತಿಸಲಾಗಿದೆ.

ಕಾರ್ಯಕ್ರಮದ ಸ್ಥಳದ ಒಂದು ಕಿ.ಮೀ. ವ್ಯಾಪ್ತಿಯೊಳಗೆ ದೇವೇಗೌಡರ ಕುಟುಂಬದ ವಾಹನಗಳನ್ನು ಹೊರತುಪಡಿಸಿ ಇತರ ಖಾಸಗಿ ವಾಹನಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸುವ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರನ್ನು **ಪಿಕ್‌ಅಪ್ ಮತ್ತು ಡ್ರಾಪ್ ಮಾಡಲು ಸುಮಾರು 16 ವಾಹನಗಳನ್ನು ನಿಯೋಜಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು