Monday, June 17, 2024

ಸತ್ಯ | ನ್ಯಾಯ |ಧರ್ಮ

ಛತ್ತೀಸ್‌ಗಢ: ವಿದ್ಯುತ್ ಸ್ಪರ್ಶದಿಂದ ಆನೆ ಸಾವು

ಬಲೋಡಾ ಬಜಾರ್: ವಿದ್ಯುತ್ ಸ್ಪರ್ಶದಿಂದಾಗಿ ಗಂಡು ಆನೆಯೊಂದು ಮೃತಪಟ್ಟಿರು ಘಟನೆ, ಛತ್ತೀಸ್‌ಗಢದ ಬಲೋಡಾ ಬಜಾರ್ ಜಿಲ್ಲೆಯ ಕಾಸ್ದೋಲ್ ಉಪವಾನ್ ವಿಭಾಗದ ವ್ಯಾಪ್ತಿಯ ದೇವಪುರ ಪ್ರದೇಶದಲ್ಲಿ ನಡೆದಿದೆ.

ಈ ಕುರಿತು ಅರಣ್ಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಅರಣ್ಯ ಇಲಾಖೆಯ ವಿಶ್ರಾಂತಿ ಗೃಹದಿಂದ ಕೇವಲ 50 ಮೀಟರ್ ದೂರದಲ್ಲಿ  ಆನೆಯ ಶವ ಪತ್ತೆಯಾಗಿದ್ದು. ಶವವು ವಾಸನೆ ಬರಲು ಪ್ರಾರಂಭಿಸಿದ ನಂತರ ಆನೆ ಸತ್ತಿರುವುದು ಬೆಳಕಿಗೆ ಬಂದಿದೆ.

ಆನೆಯ ಸಾವಿನ ಬಗ್ಗೆ ಮಾಹಿತಿ ಪಡೆದ ನಂತರ, ಮರಣೋತ್ತರ ಪರೀಕ್ಷೆ ನಡೆಸಲು ಪಶುವೈದ್ಯರ ತಂಡವನ್ನು ಕರೆಸಲಾಗಿದೆ ಎಂದು ಜಿಲ್ಲಾ/ವಲಯ ಅರಣ್ಯಾಧಿಕಾರಿ (ಡಿಎಫ್ಒ) ಮಯಾಂಕ್ ಅಗರ್ವಾಲ್ ತಿಳಿಸಿದ್ದಾರೆ.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ), ರಾಯಪುರದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ವನ್ಯಜೀವಿ ಎಸ್ಒಎಸ್ ತಂಡದ ಉಪಸ್ಥಿತಿಯಲ್ಲಿ ಪಶುವೈದ್ಯಕೀಯ ತಂಡವು ಆನೆಯ ಮರಣೋತ್ತರ ಪರೀಕ್ಷೆಯನ್ನು ನಡೆಸಿತು. ನಂತರ ಇದು ಗಂಡು ಆನೆಯಾಗಿದ್ದು, ಅದಕ್ಕೆ ಸುಮಾರು 22 ರಿಂದ 26 ವರ್ಷ ವಯಸ್ಸಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.

ʼಹೈಟೆನ್ಷನ್ 11 ಕೆವಿ ವಿದ್ಯುತ್ ಪ್ರವಾಹದಿಂದಾಗಿ ಆನೆ ಸಾವನ್ನಪ್ಪಿದೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ಕಂಡುಬಂದಿದೆ. ಆನೆಯನ್ನು ಕೊಲ್ಲಲು ಬಳಸಲಾದ ತಂತಿಯನ್ನು ಅರಣ್ಯಾಧಿಕಾರಿ ಸ್ಥಳದಿಂದ ವಶಪಡಿಸಿಕೊಂಡಿದ್ದಾರೆ. ಅಪರಾಧದಲ್ಲಿ ಭಾಗಿಯಾಗಿರುವ ಶಂಕಿತರು ಪಕ್ರಿದ್ ಗ್ರಾಮದವರಾಗಿದ್ದು, ಅವರು ಕಾಣೆಯಾಗಿದ್ದಾರೆʼ ಎಂದು ಅಗರ್ವಾಲ್ ಹೇಳಿದರು.

ಶಂಕಿತ ಆರೋಪಿಗಳನ್ನು ಬಂಧಿಸಲು ಎಲ್ಲಾ ರೀತಿಯ ಪ್ರಯತ್ನಗಳು ನಡೆಯುತ್ತಿದ್ದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು