Saturday, April 19, 2025

ಸತ್ಯ | ನ್ಯಾಯ |ಧರ್ಮ

ಗಡಿಯಲ್ಲಿ ಬಂಕರ್‌ ಹಾಗೂ ಇಂಧನ ಸಂಗ್ರಹಗಾರಗಳನ್ನು ನಿರ್ಮಿಸುತ್ತಿದೆ ಚೀನಾ

ಹೊಸದೆಹಲಿ: ದೇಶದ ಗಡಿಯಲ್ಲಿ ಚೀನಾದ ಚಟುವಟಿಕೆಗಳು ಹೆಚ್ಚುತ್ತಿವೆ. ಇತ್ತೀಚೆಗೆ ಬಿಡುಗಡೆಯಾದ ಉಪಗ್ರಹ ಚಿತ್ರಗಳು ಪೂರ್ವ ಲಡಾಖ್‌ನ ಪಾಂಗಾಂಗ್ ಸರೋವರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದೀರ್ಘಕಾಲದಿಂದ ಉತ್ಖನನಗಳು ನಡೆಯುತ್ತಿವೆ ಎಂದು ಬಹಿರಂಗಪಡಿಸಿದೆ.

ಚೀನಾ ಸೇನೆಯು ಶಸ್ತ್ರಾಸ್ತ್ರಗಳು ಮತ್ತು ಇಂಧನಗಳನ್ನು ಸಂಗ್ರಹಿಸಲು ಭೂಗತ ಬಂಕರ್‌ಗಳನ್ನು ಮತ್ತು ಶಸ್ತ್ರಸಜ್ಜಿತ ವಾಹನಗಳನ್ನು ರಕ್ಷಿಸಲು ಪಾರ್ಕಿಂಗ್ ರಚನೆಗಳನ್ನು ನಿರ್ಮಿಸುತ್ತಿರುವುದನ್ನು ಅಮೇರಿಕಾ ಮೂಲದ ಕಂಪನಿ ಬ್ಲ್ಯಾಕ್‌ಸ್ಕಿ ಉಪಗ್ರಹ ಚಿತ್ರಗಳಲ್ಲಿ ತೋರಿಸಿದೆ.

ಈ ವರ್ಷ ಮೇ 30ರಂದು ತೆಗೆದ ಈ ಫೋಟೋಗಳ ಪ್ರಕಾರ, ದೊಡ್ಡ ಭೂಗತ ಬಂಕರ್‌ಗೆ ಎಂಟು ರಾಂಪ್ ಪ್ರವೇಶದ್ವಾರಗಳನ್ನು ನಿರ್ಮಿಸಿರುವುದು ಕಂಡುಬಂದಿವೆ. ಅದೇ ರೀತಿ ಇನ್ನೊಂದು ಸಣ್ಣ ಬಂಕರ್ ಇದ್ದು ಅದರ ಹತ್ತಿರ ಐದು ಪ್ರವೇಶ ದ್ವಾರಗಳಿವೆ. ಈ ಎಲ್ಲಾ ಉತ್ಖನನಗಳು ಚೀನಾ ಸೇನೆಯ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ನೆಲೆಯಾದ ಸಿರ್ಜಾಪ್ ನೆಲೆಯಲ್ಲಿ ನಡೆಯುತ್ತಿವೆ.

ಆದರೆ, ಭಾರತ ತನ್ನ ಪ್ರದೇಶವೆಂದು ಹೇಳಿಕೊಳ್ಳುವ ಪ್ರದೇಶದಲ್ಲಿ ಚೀನಾ ಈ ಸೇನಾ ನೆಲೆಯನ್ನು ನಿರ್ಮಿಸಿದೆ. ಈ ಪ್ರದೇಶವು ವಾಸ್ತವಿಕ ನಿಯಂತ್ರಣ ರೇಖೆಯಿಂದ (LAC) ಕೇವಲ 5 ಕಿ.ಮೀ ದೂರದಲ್ಲಿದೆ. ಇತ್ತೀಚಿನ ಉಪಗ್ರಹ ಚಿತ್ರಗಳ ಬಗ್ಗೆ ಭಾರತೀಯ ಸೇನೆಯಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page