Friday, June 14, 2024

ಸತ್ಯ | ನ್ಯಾಯ |ಧರ್ಮ

ಚಿರತೆ ಸೆರೆಗೆ ಕಾರ್ಯಾಚರಣೆ ಆರಂಭ: 22 ಶಾಲೆಗಳು ಬಂದ್

ಬೆಳಗಾವಿ : ಇಂದು ಬೆಳಗಾವಿ ಜಿಲ್ಲೆಯಲ್ಲಿ ಚಿರತೆ ಕಾಣಿಸಿಕೊಂಡ ಹಿನ್ನೆಲೆ, ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಸೇರಿದಂತೆ 22 ಶಾಲೆಗಳನ್ನು ಮುಚ್ಚಲಾಗಿದೆ.

ಚಿರತೆ ಕಾಣಿಸಿಕೊಂಡ ಕಾರಣ ನಿನ್ನೆಯೂ ಶಾಲೆಗಳು ಮುಚ್ಚಿದ್ದವು. ಹಾಗಾಗಿ ಚಿರತೆ ಹಿಡಿಯಲು ಆನೆಗಳನ್ನು ಬಳಸಿಕೊಳ್ಳಲು ಜಿಲ್ಲಾಡಳಿತ ಮುಂದಾಗಿದೆ. ‌

ಈ  ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಡಿಸಿಪಿ ರವೀಂದ್ರ ಗಡಾದಿ, ಬೆಂಗಳೂರಿನಿಂದ ಆಗಮಿಸಿರುವ ವಿಶೇಷ ತಂಡವು ಕಾರ್ಯಾಚರಣೆಗೆ ಮುಂದಾಗಿದ್ದು, ಗಾಲ್ಫ್ ಮೈದಾನದಲ್ಲಿ ಅಡಗಿರುವ ಚಿರತೆಯ ಶೋಧ ಕಾರ್ಯಕ್ಕಾಗಿ ಅಲ್ಗೋರಿದಮ್ ತಂತ್ರಜ್ಞಾನದ ಡ್ರೋಣ್ ಬಳಸಲಾಗುತ್ತಿದೆ. ಈ ಡ್ರೋಣ್ ಗಾಲ್ಫ್ ಮೈದಾನದ 250 ಎಕರೆ ಪ್ರದೇಶವನ್ನು ಇಡಿಯಾಗಿ ಸ್ಕ್ಯಾನ್ ಮಾಡಲಿದೆ. ಹಾಗಾಗಿ ಇಂದು ಚಿರತೆಯನ್ನು ಸರೆ ಹಿಡಿಯಲು ಕಾರ್ಯಾಚರಣೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಗಾಲ್ಫ್ ಮೈದಾನಕ್ಕೆ ಶಾಸಕ ಅನಿಲ್​ ಬೆನಕೆ ಭೇಟಿ ನೀಡಿ, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರೊಂದಿಗೆ ಚರ್ಚಿಸಿ ಅಗತ್ಯ ಮಾಹಿತಿ ಪಡೆದುಕೊಂಡರು, ನಂತರ  ಕಾರ್ಯಾಚರಣೆ ಮುಗಿಯುವವರೆಗೂ ಶಾಸಕರು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಆದಷ್ಟು ಬೇಗ ಚಿರತೆ ಸರೆಹಿಡಯಲಾಗುತ್ತೆ ಎಂದು ತಿಳಿಸಿದರು.  

Related Articles

ಇತ್ತೀಚಿನ ಸುದ್ದಿಗಳು