Saturday, June 15, 2024

ಸತ್ಯ | ನ್ಯಾಯ |ಧರ್ಮ

ಚೋಳರ ಕಾಲದಲ್ಲಿ ಹಿಂದೂ ಧರ್ಮ ಇರಲಿಲ್ಲ, ಬ್ರಿಟಿಷರೇ ಹಿಂದೂ ಎಂಬ ಪದವನ್ನು ಹುಟ್ಟುಹಾಕಿದ್ದು: ಕಮಲ್ ಹಾಸನ್

ನಟ ಕಮ್ ರಾಜಕಾರಣಿ ಕಮಲ್ ಹಾಸನ್ ಚೋಳ ರಾಜ ರಾಜರಾಜ ಚೋಳನ ಬಗ್ಗೆ ಹೇಳಿಕೆ ನೀಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಚೋಳ ರಾಜ ಹಿಂದೂ ಅಲ್ಲ ಎಂದು ನಿರ್ದೇಶಕ ವೆಟ್ರಿಮಾರನ್ ಅವರು ಹೇಳಿಕೆ ನೀಡಿದ ನಂತರ ವಿವಾದ ಭುಗಿಲೆದ್ದಿತ್ತು.

ರಾಜ ರಾಜ ಚೋಳನ್ ಹಿಂದೂ ರಾಜನಲ್ಲ ಎಂಬ ನಿರ್ದೇಶಕ ವೆಟ್ರಿಮಾರನ್ ಹೇಳಿಕೆಗೆ ಕಮಲ್ ಹಾಸನ್ ಬೆಂಬಲ ವ್ಯಕ್ತಪಡಿಸಿದ್ದಾರೆ ಮತ್ತು ಚೋಳರ ಕಾಲದಲ್ಲಿ ‘ಹಿಂದೂ ಧರ್ಮ’ ಎಂಬ ಪದ ಇರಲಿಲ್ಲ ಎಂದು ಹೇಳಿದ್ದಾರೆ. ಆ ಸಮಯದಲ್ಲಿ ವೈಷ್ಣವರು ಮತ್ತು ಶೈವರು ಇದ್ದರು. ಬ್ರಿಟಿಷರೇ ಹಿಂದೂ ಎಂಬ ಪದವನ್ನು ಹುಟ್ಟುಹಾಕಿದರು ಎಂದು ಕಮಲ್ ಹಾಸನ್ ಹೇಳಿದ್ದಾರೆ.

ವಿವಾದ ಭುಗಿಲೆದ್ದ ನಂತರ, ಕಮಲ್ ಹಾಸನ್ ಅವರ ಸಂದರ್ಶನದ ವೀಡಿಯೊ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. 

ಚೋಳ ಸಾಮ್ರಾಜ್ಯದ ರಾಜನ ಜೀವನಾಧಾರಿತ ‘ಪೊನ್ನಿಯಿನ್ ಸೆಲ್ವನ್-1’ ಚಿತ್ರವು ದೇಶಾದ್ಯಂತ ಮೆಚ್ಚುಗೆ ಪಡೆದಿದೆ. ಈ ಚಿತ್ರವು ವಿಶ್ವದಾದ್ಯಂತ ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ 300 ಕೋಟಿ ರೂಪಾಯಿಗಳ ಮ್ಯಾಜಿಕಲ್ ಫಿಗರ್ ಅನ್ನು ದಾಟಿದೆ. ಇದೇ ಚಿತ್ರದಲ್ಲಿ ರಾಜರಾಜ ಚೋಳನ ಬಗ್ಗೆಯೂ ಚರ್ಚೆ ನಡೆದಿದೆ.

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಇದನ್ನೂ ಓದಿ: ‘ಕಾಂತಾರ’: ದೃಶ್ಯಸಂಭ್ರಮದ ಮಂಜು ಕರಗಿದ ಮೇಲೆ…

ಹಿಂದೆ ನಡೆದಿರುವ ನಿಜ ಘಟನೆಗಳನ್ನು ದೈವ-ಕಾರ್ಣಿಕ-ಮಾಯಕ ಎನ್ನುವ ಬಟ್ಟಲಿನಲ್ಲಿ ಮೃಷ್ಟಾನ್ನ ಭೋಜನವಾಗಿ ಉಣಬಡಿಸಿದ್ದು ಈ ಚಿತ್ರದ ಜಾಣ್ಮೆ. ಹೊಟ್ಟೆ ತುಂಬಿದ ಮೇಲೆ ಪ್ರಶ್ನಿಸುವ ಪ್ರಜ್ಞೆ ಮತ್ತು ಹಕ್ಕು ಎರಡನ್ನೂ ಕಳಕೊಳ್ಳುವ ಅಪಾಯ ಹೆಚ್ಚು ಎಂದು ತಮ್ಮ ಅನ್ನಿಸಿಕೆಗಳನ್ನು ಹಂಚಿಕೊಂಡಿದ್ದಾರೆ ಕ್ಯಾಲಿಫೋರ್ನಿಯಾದಿಂದ ಹೇಮಶ್ರೀ ಸಯೇದ್

ಪೀಪಲ್‌ ಮೀಡಿಯಾ ವಿಶೇಷ
ಹೇಮಶ್ರೀ ಸಯೇದ್

https://peepalmedia.com/kaantara-drushyasambramada-manju-karagida-mele/

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

Related Articles

ಇತ್ತೀಚಿನ ಸುದ್ದಿಗಳು