Monday, February 2, 2026

ಸತ್ಯ | ನ್ಯಾಯ |ಧರ್ಮ

ಚೋರ್ಲಾ ಘಾಟ್ ₹400 ಕೋಟಿ ದರೋಡೆ ಪ್ರಕರಣ: ಮುಖ್ಯ ಆರೋಪಿ ಕಿಶೋರ್ ಶರಣು, ಬಂಧನ

ಬೆಳಗಾವಿ ಚೋರ್ಲಾ ಘಾಟ್‌ನಲ್ಲಿ ನಡೆದಿದೆ ಎನ್ನಲಾದ ₹400 ಕೋಟಿ ಮೌಲ್ಯದ ದರೋಡೆ ಪ್ರಕರಣ ಹಾಗೂ ಇದನ್ನು ಬಹಿರಂಗಪಡಿಸಿದ ಸಂದೀಪ ಪಾಟೀಲ ಅವರ ಅಪಹರಣ ಪ್ರಕರಣದ ಮುಖ್ಯ ಆರೋಪಿ ಕಿಶೋರ್ ಶನಿವಾರ ರಾತ್ರಿ ಮಹಾರಾಷ್ಟ್ರದ ನಾಸಿಕ್ ತಾಲ್ಲೂಕಿನ ಘೋಟಿ ಪೊಲೀಸ್ ಠಾಣೆಗೆ ಶರಣಾಗಿದ್ದಾರೆ.

ಭಾನುವಾರ ಎಸ್‌ಐಟಿ ಅಧಿಕಾರಿಗಳು ಕಿಶೋರ್ ಅವರನ್ನು ಬಂಧಿಸಿದ್ದಾರೆ. ಈ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.

ಸಂದೀಪ ಪಾಟೀಲ ಅವರು ದಾಖಲಿಸಿದ ದೂರಿನಲ್ಲಿ, “ಚೋರ್ಲಾ ಘಾಟ್‌ನಲ್ಲಿ ₹400 ಕೋಟಿ ಹಣವಿದ್ದ ಎರಡು ಕಂಟೇನರ್‌ಗಳನ್ನು ದರೋಡೆ ಮಾಡಲಾಗಿದೆ. ಈ ದರೋಡೆ ನಾನೇ ಮಾಡಿಸಿದ್ದೇನೆ ಎಂದು ಹೇಳಿ ಹಣದ ಮಾಲೀಕ ಕಿಶೋರ್ ಸಾಳವೆ ಹಾಗೂ ತಂಡದವರು ನನ್ನನ್ನು ಅಪಹರಣ ಮಾಡಿದ್ದರು” ಎಂದು ಆರೋಪಿಸಿದ್ದರು.

ಆದರೆ ಇದುವರೆಗೆ ಹಣ ದರೋಡೆ ಅಥವಾ ವಾಹನ ದರೋಡೆಗೆ ಸಂಬಂಧಿಸಿದ ಯಾವುದೇ ಪ್ರತ್ಯೇಕ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ, ವಾಹನ ಚಾಲಕ ಸೇರಿ ಈಗಾಗಲೇ ಏಳು ಮಂದಿಯನ್ನು ಬಂಧಿಸಲಾಗಿತ್ತು. ಕಿಶೋರ್ ತಲೆಮರೆಸಿಕೊಂಡಿದ್ದು, ಇದೀಗ ನಾಸಿಕ್ ತಾಲ್ಲೂಕಿನ ಘೋಟಿ ಪೊಲೀಸ್ ಠಾಣೆಗೆ ಶರಣಾಗಿದ್ದಾರೆ. ಸದ್ಯ ಅಪಹರಣ ಪ್ರಕರಣದಲ್ಲಿಯೇ ಅವರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page