ಹಾಸನ : ಕ್ರಿಸ್ಮಸ್ ಎಂಬುದು ಮಾನವೀಯತೆಯ ಹಬ್ಬವಾಗಿದ್ದು, ಶಾಂತಿ ಸಹ ಬಾಳ್ವೆಯ ಸಂಕೇತವಾಗಿದೆ. ಎಂದು ಕ್ರೈಸ್ಟ್ ಶಾಲೆಯ ಕ್ಯಾಂಪಸ್ ಡೈರೆಕ್ಟರ್ ರೆವರೆಂಡ್ ಫಾದರ್ ಅಲೆಕ್ಸ್ ತಿಳಿಸಿದರು.
ನಗರದ ಕ್ರೈಸ್ಟ್ ಶಾಲೆಯಲ್ಲಿ ಇಂದು ನಡೆದ ಕ್ರಿಸ್ಮಸ್ ಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನುಷ್ಯನಾಗಿ ಹುಟ್ಟಿದ ಮೇಲೆ ಹೇಗೆ ಜನರೊಡನೆ ಬೆರೆತು ಪ್ರೀತಿಯಿಂದ ಜೀವಿಸಬೇಕು ಎಂಬುವ ಸಂದೇಶ ಸಾರುವ ಈ ಕ್ರಿಸ್ಮಸ್ ಹಬ್ಬ ನಾಡಿನಾದ್ಯಂತ ಆಚರಿಸಲ್ಪಡುತ್ತಿದೆ ಎಂದರು.
ತಮಗಾಗಿ ಹುಟ್ಟುವ ರಾಜನು ಅರಮನೆಯಲ್ಲಿ ಹುಟ್ಟುತ್ತಾನೆ ಎಂಬ ನಿರೀಕ್ಷೆಯಲ್ಲಿದ್ದ ಜನರಿಗೆ ಕೊಟ್ಟಿಗೆಯಲ್ಲಿ ಹುಟ್ಟಿ ಪ್ರಪಂಚಕ್ಕೆ ಮಾದರಿ ಸಂದೇಶ ನೀಡಿದ ಏಸುಕ್ರಿಸ್ತರ ಜನ್ಮ ದಿನಾಚರಣೆ ಇದಾಗಿದ್ದು, ಸರಳತೆಯ ಬದುಕು ನೆಮ್ಮದಿ ನೀಡುತ್ತದೆ. ಎಂಬ ಸಂದೇಶವನ್ನು ಇಡೀ ವಿಶ್ವಕ್ಕೆ ಏಸುಕ್ರಿಸ್ತರು ಪಸರಿಸಿದ್ದಾರೆ ಎಂದರು. ಶಾಂತಿ ಸಮಾಧಾನದ ಈ ಹಬ್ಬದಲ್ಲಿ ಕ್ರೈಸ್ತ ಬಾಂಧವರು ಹೊಂದಡೆ ಸೇರಿ ಯೇಸು ಕ್ರಿಸ್ತನ ಸ್ಮರಣೆ ಮಾಡುವ ಮೂಲಕ ಸಮಾಜಕ್ಕೆ ಒಳಿತನ್ನು ಬಯಸುವ ಈ ಹಬ್ಬದಲ್ಲಿ ಪಾಲ್ಗೊಳ್ಳುವ ಎಲ್ಲರ ಪರವಾಗಿ ತಾನು ಕ್ರಿಸ್ಮಸ್ ಹಬ್ಬದ ಶುಭಾಶಯ ಕೋರುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ಶಾಲೆಯ ಪ್ರಾಂಶುಪಾಲರಾದ ರೆವೆರ್ ಅಂಡ್ ಫಾದರ್ ಹನುಮೂನ್ ಜೋಸೆಫ್, ಆಡಳಿತಾಧಿಕಾರಿ ರೆವರೆಂಡ್ ಫಾದರ್ ರಿಜೋ ಥಾಮಸ್, ಫಾಧರ್ ಲ್ಯನ್ಸಿ ಎಂ.ಫರ್ನಾಂಡಿಸ್, ಇತರರು ಉಪಸ್ಥಿತರಿದ್ದರು.
