Monday, January 12, 2026

ಸತ್ಯ | ನ್ಯಾಯ |ಧರ್ಮ

ಚುನಾವಣಾ ಸ್ಥಾನಗಳಿಗೆ ಬಿಜೆಪಿ ಪಟ್ಟಿ ಪ್ರಕಟ : 11 ಹಾಲಿ ಶಾಸಕರಿಗಿಲ್ಲ ಟಿಕೆಟ್

ಹಿಮಾಚಲ ಪ್ರದೇಶ : ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆಗೆಂದು  ಬಿಜೆಪಿ ಇಂದು  ಮೊದಲ ಹಂತದ 62 ಸ್ಥಾನಗಳಿಗೆ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನು  ಪ್ರಕಟಿಸಿದೆ.

ನವೆಂಬರ್‌ 12ರಂದು ನಡೆಯಲಿರುವ ಹಿಮಾಚಲ ಪ್ರದೇಶ ವಿಧಾನಸಬೆ ಚುನಾವಣೆ ಕುರಿತು ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯು ಸೋಮವಾರದಂದು ಸಭೆ ನಡೆಸಿದ್ದು, ಇಂದು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಪಟ್ಟಿಯಲ್ಲಿ ಒಟ್ಟು ಹನ್ನೊಂದು ಹಾಲಿ ಶಾಸಕರಿಗೆ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸುವ  ಅವಕಾಶವನ್ನು ನಿರಾಕರಿಸಲಾಗಿದೆ.

ಪರಿಶಿಷ್ಟ್‌ ಪಂಗಡಕ್ಕೆ ಸೇರಿದ ಎಂಟು ಅಭ್ಯರ್ಥಿಗಳು ಈ ಚುನಾವಣೆ ಪಟ್ಟಿಯಲ್ಲಿದ್ದು, ಮೂರು ಸ್ಥಾನಗಳನ್ನು ಎಸ್‌ಟಿ ವರ್ಗದ ಅಡಿಯಲ್ಲಿ ಮೀಸಲಿಡಲಾಗಿದೆ. ಮತ್ತು ಈ ಪಟ್ಟಿಯಲ್ಲಿ ಒಟ್ಟಾರೆ ಐದು ಜನ ಮಹಿಳೆಯರು ಚುನಾವಣಾ ಸ್ಪರ್ಧೆಯಲ್ಲಿ ಕಣಕ್ಕಿಳಿಯಲ್ಲಿದ್ದಾರೆ.

ನವೆಂಬರ್‌ 12 ರಂದು ಚುನಾವಣೆ  ನಡೆಯಲಿದ್ದು, ಅಕ್ಟೋಬರ್‌ 25 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಡಿಸೆಂಬರ್‌ 8ರಂದು ಫಲಿತಾಂಶ ಪ್ರಕಟವಾಗಲಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page