Friday, November 14, 2025

ಸತ್ಯ | ನ್ಯಾಯ |ಧರ್ಮ

ಹಾಸನದಲ್ಲಿ ಸಿಐಟಿಯು 16ನೇ ರಾಜ್ಯ ಸಮ್ಮೇಳನ

ದ್ವಂದ್ವ ವಾದವನ್ನು ಒಟ್ಟಿಗೆ ಕೊಂಡೊಯ್ಯುವುದಕ್ಕೆ ನಾನಾ ರೀತಿಯ ಭಿನ್ನಾಭಿಪ್ರಾಯವಿದೆ. ಆದರೆ ಕಾಲಕಾಲಕ್ಕೆ ವಿಷಯಗಳನ್ನು ಮಂಡಿಸಬೇಕು. ಉದಾಹರಣೆಗೆ ಅಮೆರಿಕದಲ್ಲಿ ನ್ಯೂಯಾರ್ಕ್‌ನ ಮೇಯರ್‌ ಆದರು. ಹಾಗೆಯೇ ಈ ವ್ಯವಸ್ಥೆಯಲ್ಲಿ ಆಶಾಭಾವನೆ ಇನ್ನೂ ಉಳಿದಿದೆ ಎಂದು ಟಿಯುಸಿಸಿ ರಾಷ್ಟ್ರೀಯ ಅಧ್ಯಕ್ಷ ಜಿ ಆರ್ ಶಿವಶಂಕರ್ ಆಶಾಭಾವ ವ್ಯಕ್ತಪಡಿಸಿದರು.

ಹಾಸನದಲ್ಲಿ 13, 14, 15 ಒಟ್ಟು ಮೂರು ದಿನಗಳ ಕಾಲ ಸಿಐಟಿಯು ವತಿಯಿಂದ 16ನೇ ರಾಜ್ಯ ಸಮ್ಮೇಳನ ನಡೆಯುತ್ತಿದ್ದು, ಇಂದು ಮೊದಲ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.

“ದ್ವಂದ್ವ ವಾದದ ಬಗ್ಗೆ ವಿಶ್ವಾಸವಿಟ್ಟಿರುವ ಜನ ನಾವು. ಎಲ್ಲಿ ದ್ವಂಧ್ವವಾದ ಇರುವುದಿಲ್ಲ, ಅಲ್ಲಿ ಪ್ರಗತಿ ಸಾಧ್ಯವಿಲ್ಲ. ಆದರೆ ಆ ದ್ವಂದ್ವ ವಾದವನ್ನು ಯಾವ ರೀತಿಯಲ್ಲಿ ಕೊಂಡೊಯ್ಯಬೇಕು ಎಂಬುದನ್ನು ಅರಿಯಬೇಕು. ನಮ್ಮ ಸೈದ್ಧಾಂತಿಕ ವಿಚಾರಧಾರೆಗಳನ್ನು ಕಾಲಕಾಲಕ್ಕೆ ಮಾರ್ಪಾಟು ಮಾಡಿ, ಮುಂದೆ ಕೊಂಡೊಯ್ಯುವ ವ್ಯವಸ್ಥೆ ಮಾಡುವಲ್ಲಿ ಎಡವಿದ್ದೇವೆ. ಈ ದೇಶದ ಎಲ್ಲ ಕ್ಷೇತ್ರಗಳೂ ಇವತ್ತು ಅಸಂಘಟಿತ ವ್ಯವಸ್ಥೆಯಾಗಿದೆ. ಸಂಘಟಿತ ವ್ಯವಸ್ಥೆಗಳು ಕಣ್ಮರೆಯಾಗುತ್ತಿವೆ” ಎಂದು ಕಳವಳ ವ್ಯಕ್ತಪಡಿಸಿದರು.

“ಬೆಂಗಳೂರು ನಗರವೆಂದರೆ ಸಾರ್ಜನಿಕ ಉದ್ದಿಮೆಗಳ ಒಂದು ದೊಡ್ಡ ನಗರವಾಗಿತ್ತು. ಇವತ್ತು ಅವೆಲ್ಲವೂ ಮುಚ್ಚಿವೆ. ಇದಕ್ಕೆ ಟ್ರೇಡ್‌ ಯೂನಿಯನ್‌ ಮೂವ್‌ಮೆಂಟ್‌ ತಪ್ಪಾ? ವ್ಯವಸ್ಥೆ ವಿರುದ್ಧ ಹೋರಾಡುವುದರಲ್ಲಿ ನಾವು ಫೇಲ್ಯೂರ್‌ ಆಗಿದ್ದೇವಾ? ಈ ವ್ಯವಸ್ಥೆ ಯಾಕೆ ಹೀಗಾಗುತ್ತಿದೆ ಎಂಬ ವಿಷಯಗಳನ್ನು ಕ್ರೋಢೀಕರಣ ಮಾಡುವ ಒಂದು ವ್ಯವಸ್ಥೆಯನ್ನು ನಾವು ಮಾಡಿಕೊಂಡಿಲ್ಲ” ಎಂದು ಹೇಳಿದರು.

“ಈ ಹಿಂದೆ ಆರ್‌ಎಸ್‌ಎಸ್‌ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿರಲ್ಲಿ ಎಂದುಕೊಂಡಿದ್ದೆವು. ಪ್ರಚಲಿತದಲ್ಲಿ ಬೇಡವೆಂದರೂ ಕಾರ್ಮಿಕ ಸಂಘಟನೆಗಳು ಆರ್‌ಎಸ್‌ಎಸ್‌ ಅಂದ್ರೆ ಏನು? ಎಂಬುದನ್ನು ಚರ್ಚಿಸಲೇಬೇಕಾಗಿದೆ. ಆಗಿನ ಕಾಲದಲ್ಲಿ ಅದು ಕೇವಲ ಬ್ರಾಹ್ಮಣರ ಒಂದು ಗುಂಪು ಇರಬಹುದೇನೋ ಅಂದುಕೊಂಡಿದ್ದೆವು. ಎಸ್‌ ಆರ್‌ ಭಟ್‌ ಆಗಲೇ ಆರ್‌ಎಸ್‌ಎಸ್‌ ಅಂದ್ರೆ ಏನು? ಎಂಬ ಒಂದು ಪುಸ್ತಕ ಬರೆದಿದ್ದರು. ಆರ್‌ಎಸ್‌ಎಸ್‌ ಬಗ್ಗೆ ಎಲ್ಲವನ್ನೂ ಹೇಳುತ್ತಿದ್ದರು” ಎಂದರು.

ಸಿಐಟಿಯು ಕೂಡ ದೇಶದಲ್ಲಿ ಕಾರ್ಮಿಕರ ಪರವಾಗಿ ಹೋರಾಟ ಮಾಡುತ್ತಿರುವಂತಹ ಒಂದು ಬಹುದೊಡ್ಡ ಸಂಘಟನೆಯಾಗಿರುವುದರಿಂದ ಟಿಯುಸಿಸಿ ಕೂಡ ಬೆಂಬಲವಾಗಿ ನಿಂತಿದೆ” ಎಂದು ಹೇಳಿದರು.

ಪ್ಲಾಂಟೇಶನ್ ಕಾರ್ಮಿಕರು, ಅಂಗನವಾಡಿ ನೌಕರರು, ಗ್ರಾಮ ಪಂಚಾಯಿತಿ ನೌಕರರು, ಫ್ಯಾಕ್ಟರಿ ಕಾರ್ಮಿಕರು, ಬಿಸಿಯೂಟ ಕಾರ್ಮಿಕರು, ಗುತ್ತಿಗೆ ಹಾಗೂ ಹೊರಗುತ್ತಿಗೆ ಕಾರ್ಮಿಕರು ಸೇರಿದಂತೆ ಅಸಂಘಟಿತ ಕಾರ್ಮಿಕರ ನೇತೃತ್ವ ವಹಿಸಿರುವ ಮುಖ್ಯ ಅತಿಥಿಗಳಾದ ಸಿಐಟಿಯು ರಾಷ್ಟ್ರೀಯ ಅಧ್ಯಕ್ಷೆ ಹೇಮಲತಾ, ರಾಷ್ಟ್ರೀಯ ಕಾರ್ಯದರ್ಶಿ ಕೆ ಎನ್‌ ಉಮೇಶ್‌, ರಾಜ್ಯ ಉಪಾಧ್ಯಕ್ಷ ವಿಜೆಕೆ ನಾಯರ್‌, ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಅಧ್ಯಕ್ಷತೆ ರಾಜ್ಯ ಅಧ್ಯಕ್ಷೆ ಎಸ್‌ ವರಲಕ್ಷ್ಮಿ, ಸ್ವಾಗತ ಎಚ್‌ ಎನ್‌ ಪರಮಶಿವಯ್ಯ ಸೇರಿದಂತೆ ಇತರ ಮುಖಂಡರು ಇದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page