Wednesday, December 11, 2024

ಸತ್ಯ | ನ್ಯಾಯ |ಧರ್ಮ

ಅಂತರ್ಯುದ್ಧ: ಸಿರಿಯಾದಿಂದ 75 ಭಾರತೀಯರ ಸ್ಥಳಾಂತರ

ಹೊಸದೆಹಲಿ: ಅಂತರ್ಯುದ್ಧದಿಂದ ನಲುಗುತ್ತಿರುವ ಸಿರಿಯಾದಿಂದ ಸುಮಾರು 75 ಭಾರತೀಯರನ್ನು ಸುರಕ್ಷಿತವಾಗಿ ಕರೆತರಲಾಗಿದೆ ಎಂದು ಸರ್ಕಾರ ತಿಳಿಸಿದೆ. ಸಶಸ್ತ್ರ ಹೋರಾಟವನ್ನು ಕೈಗೆತ್ತಿಕೊಂಡ ಬಂಡುಕೋರರು ಅಲ್ಲಿನ ಬಶರ್ ಅಲ್-ಅಸ್ಸಾದ್ ಸರ್ಕಾರವನ್ನು ಉರುಳಿಸಿದ್ದಾರೆ.

ಜೀವಭಯದಿಂದ ಅಸಾದ್ ವಿದೇಶಕ್ಕೆ ಓಡಿಹೋದರು. ಅವರಿಗೆ ರಷ್ಯಾ ಆಶ್ರಯ ನೀಡುತ್ತಿದೆ. ಸಿರಿಯಾದಿಂದ ಲೆಬನಾನ್‌ಗೆ ಹೋದ ಭಾರತೀಯರು ಅಲ್ಲಿಂದ ಸುರಕ್ಷಿತವಾಗಿ ಭಾರತಕ್ಕೆ ಮರಳುತ್ತಿದ್ದಾರೆ ಎಂದು ಕೇಂದ್ರ ವಿದೇಶಾಂಗ ಸಚಿವರು ತಿಳಿಸಿದ್ದಾರೆ. ಸಿರಿಯಾದಲ್ಲಿ ಸಿಲುಕಿರುವವರಲ್ಲಿ ಜಮ್ಮು ಮತ್ತು ಕಾಶ್ಮೀರದ 44 ಝೈರೀನ್ ಯಾತ್ರಿಕರು ಸೇರಿದ್ದಾರೆ.

ಡಮಾಸ್ಕಸ್‌ನಲ್ಲಿರುವ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರಲು ಸರ್ಕಾರ ಅವರಿಗೆ ಸೂಚನೆ ನೀಡಿದೆ. ಅಸ್ಸಾದ್ ಕುಟುಂಬವು ಸುಮಾರು ಐದು ದಶಕಗಳಿಂದ ಸಿರಿಯಾವನ್ನು ಆಳಿದೆ. ಆದರೆ ಬಂಡುಕೋರರ ಬಂಡಾಯದಿಂದ ಅವರು ಭಾನುವಾರ ದೇಶ ತೊರೆದಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page