Home ಅಪರಾಧ ನಿಮಿಷಾ ಪ್ರಿಯಾ ಮರಣದಂಡನೆ ತಪ್ಪಿಸಲು ಕೈಚೆಲ್ಲಿ ಕೂತ ಕೇಂದ್ರ ಸರ್ಕಾರ; ನಮ್ಮ ಮಿತಿ ಇಷ್ಟೇ ಎಂದು...

ನಿಮಿಷಾ ಪ್ರಿಯಾ ಮರಣದಂಡನೆ ತಪ್ಪಿಸಲು ಕೈಚೆಲ್ಲಿ ಕೂತ ಕೇಂದ್ರ ಸರ್ಕಾರ; ನಮ್ಮ ಮಿತಿ ಇಷ್ಟೇ ಎಂದು ಸು.ಕೋರ್ಟ್ ಗೆ ಸ್ಪಷ್ಟನೆ

0

ಸಹವರ್ತಿಯ ಕೊಲೆ ಪ್ರಕರಣದಲ್ಲಿ ಯೆಮೆನ್ ದೇಶದಲ್ಲಿ ಜೈಲು ಸೇರಿ, ಈಗ ಜುಲೈ 16 ಕ್ಕೆ ಮರಣದಂಡನೆ ಶಿಕ್ಷೆಗೂ ಗುರಿಯಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರ ಪ್ರಕರಣದಲ್ಲಿ ಕೇಂದ್ರ ಸರ್ಕಾರ ನಮ್ಮ ಪ್ರಯತ್ನ ಇಷ್ಟೇ ಎಂದು ಸುಪ್ರೀಂಕೋರ್ಟಿಗೆ ತಿಳಿಸಿದೆ. ಯೆಮೆನ್ ನ ರಾಜತಾಂತ್ರಿಕ ಸೂಕ್ಷ್ಮತೆಯಿಂದಾಗಿ ಭಾರತ “ಹೆಚ್ಚೇನೂ” ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಇದೇ ಜುಲೈ 16ರಂದು ಕೊಲೆ ಪ್ರಕರಣದಲ್ಲಿ ನಿಮಿಷಾ ಪ್ರಿಯಾ ಅವರನ್ನು ಗಲ್ಲಿಗೇರಿಸಲಾಗುತ್ತಿದೆ. ಹೀಗಾಗಿ ಅವರ ಪರ ವಕೀಲ ಸುಭಾಷ್ ಚಂದ್ರನ್ ಕೆ.ಆರ್ ಅವರು ತುರ್ತಾಗಿ ಈ ಪ್ರಕರಣದ ವಿಚಾರಣೆ ನಡೆಸಬೇಕು ಮತ್ತು ಕೇಂದ್ರ ಸರ್ಕಾರ ರಾಜತಾಂತ್ರಿಕ ಮಾರ್ಗಗಳನ್ನು ಆದಷ್ಟು ಬೇಗ ಪರಿಶೀಲಿಸಬೇಕು ಎಂದು ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿದ್ದರು.

ಪ್ರಕರಣದ ತುರ್ತನ್ನು ಮನಗಂಡು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರು ಇಂದು ಪ್ರಕರಣದ ವಿಚಾರಣೆ ನಡೆಸಿದರು.

ಕೇಂದ್ರ ಸರ್ಕಾರವು ಯೆಮನ್‌ನ ಪ್ರಭಾವಿ ಶೇಖ್‌ ಅವರನ್ನು ಸಂಪರ್ಕಿಸಿ ಗಲ್ಲು ಶಿಕ್ಷೆ ತಡೆಯುವಂತೆ ಸಾರ್ವಜನಿಕ ಅಭಿಯೋಜಕರನ್ನು ಕೋರಿದೆ ಎಂದು ವೆಂಕಟರಮಣಿ ಹೇಳಿದರು. ಆದರೆ ಆ ಪ್ರಯತ್ನಗಳು ಫಲ ನೀಡಿಲ್ಲ. “ನಮಗೆ ಮರಣದಂಡನೆ ಸ್ಥಗಿತಗೊಳಿಸಲಾಗುವುದು ಎಂದು ಅನೌಪಚಾರಿಕ ಸಂವಹನ ಸಿಕ್ಕಿದೆ. ಆದರೆ ಅದು ಕಾರ್ಯರೂಪಕ್ಕೆ ಬರುತ್ತದೆಯೇ ಎಂದು ನಮಗೆ ಖಚಿತವಾಗಿ ತಿಳಿದಿಲ್ಲ” ಎಂದು ಸರ್ಕಾರದ ಪರ ವಕೀಲರು ಸುಪ್ರೀಂಕೋರ್ಟ್ ಗೆ ಹೇಳಿದರು.

ನಿಮಿಷಾ ಅವರನ್ನು ಉಳಿಸಲು ಏಕೈಕ ಆಯ್ಕೆಯೆಂದರೆ ಬ್ಲಡ್ ಮನಿ ಇತ್ಯರ್ಥ. ಮೃತರ ಕುಟುಂಬವು ಅದನ್ನು ಸ್ವೀಕರಿಸಲು ಸಿದ್ಧ. ನಿಮಿಷಾ ಪ್ರಿಯಾಳನ್ನು ಉಳಿಸಲು ಉಳಿದಿರುವ ಏಕೈಕ ಆಯ್ಕೆ ಬ್ಲಡ್ ಮನಿ ಇತ್ಯರ್ಥ ಎಂದು ನಿಮಿಷಾ ಪ್ರಿಯಾ ಪರ ವಕೀಲರು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.

ಬ್ಲಡ್ ಮನಿ ಇತ್ಯರ್ಥ ಎಂದರೆ ಮೃತರ ಕುಟುಂಬಕ್ಕೆ ಅವರು ಕೇಳಿದಷ್ಟು ಆರ್ಥಿಕ ಸಹಾಯ ನೀಡುವುದು. ಆದರೆ, ಇದರಲ್ಲಿ ಸರ್ಕಾರ ಮಧ್ಯ ಪ್ರವೇಶಿಸಲು ಸಾಧ್ಯವಿಲ್ಲ. ಇದು ನಿಮಿಷಾ ಅವರ ಕುಟುಂಬದ ಖಾಸಗಿ ವಿಷಯ. ಶೆರಿಯಾ ಕಾನೂನಿನಡಿ ಇದಕ್ಕೆ ಅವಕಾಶವಿದೆ. ಆದರೆ, ಇದಕ್ಕೆ ನಿಮಿಷಾ ಅವರ ಕುಟುಂಬ ಒಪ್ಪಬೇಕಷ್ಟೆ’ ಎಂದು ವಕೀಲರು ಸುಪ್ರೀಂ ಕೋರ್ಟ್​ಗೆ ತಿಳಿಸಿದ್ದಾರೆ.

ಆದರೆ ‘ನಿಜವಾಗಿ ಏನು ನಡೆಯುತ್ತಿದೆ ಎಂದು ನಮಗೆ ತಿಳಿಯಲು ಯಾವುದೇ ಮಾರ್ಗವಿಲ್ಲ. ನಿಮಿಷಾ ಅವರನ್ನು ಉಳಿಸಲು ಕೇಂದ್ರ ಸರ್ಕಾರ ಸಾಕಷ್ಟು ಪ್ರಯತ್ನಿಸಿದೆ. ಇನ್ನೂ ಪ್ರಯತ್ನ ನಡೆಯುತ್ತಿದೆ’ ಎಂದು ಕೇಂದ್ರ ಸರ್ಕಾರದ ಪರ ವೆಂಕಟರಮಣಿ ಹೇಳಿದ್ದಾರೆ.

You cannot copy content of this page

Exit mobile version