Sunday, June 23, 2024

ಸತ್ಯ | ನ್ಯಾಯ |ಧರ್ಮ

ಮುಖ್ಯಮಂತ್ರಿ ಆಯ್ಕೆ ಫೈನಲ್ : ಇಂದು ಸಂಜೆ 7ಕ್ಕೆ CLP ಮೀಟಿಂಗ್ ಕರೆದ ಡಿಕೆ ಶಿವಕುಮಾರ್

ಕರ್ನಾಟಕ ಸಿಎಂ ಆಯ್ಕೆ ವಿಚಾರ ತಾರಕಕ್ಕೇರಿದೆ, ಸಿಎಂ ಆಯ್ಕೆ ಈಗ ಕ್ಷಣಕ್ಕೊಂದು ತಿರುವು ಪಡೆಯುತ್ತಿದ್ದು, ಯಾರು ಮುಖ್ಯಮಂತ್ರಿ ಆಗ್ತಾರೆ ಎನ್ನುವುದೇ ದೊಡ್ಡ ಚರ್ಚೆಗೆ ತೆರೆ ಬಿದ್ದಿದೆ.

ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ಭಾರಿ ಪೈಪೋಟಿ ನಡೆಸುತ್ತಿದ್ದು ವರಿಷ್ಠರ ಗಮನಕ್ಕೆ ಬಂದು ಇದನ್ನು ಇತ್ಯರ್ಥ ಮಾಡಿದದಾರೆ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ ಮಧ್ಯಸ್ಥಿಕೆ ವಹಿಸಿ ಇಬ್ಬರೂ ನಾಯಕರನ್ನು ಕೂರಿಸಿಕೊಂಡು ಮಾತನಾಡುತ್ತಿದ್ದಾರೆ. ಪೂರ್ಣಾವಧಿಗೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಲು, ಡಿ.ಕೆ.ಶಿವಕುಮಾರ್ ಅವರನ್ನು ಉಪಮುಖ್ಯಮಂತ್ರಿಯಾಗುವಂತೆ ಒಪ್ಪಿಸಿದ್ದಾರೆ. ಇದರ ಬೆನ್ನಲ್ಲೇ ಡಿಕೆಶಿ ಇಂದು 18 ಮೇ ಸಂಜೆ 7 ಗಂಟೆಗೆ ಸಿಎಲ್‌ಪಿ ಮೀಟಿಂಗ್ ಕರೆ ನೀಡಿದ್ದಾರೆ.

ಬಹುತೇಕ ಕರ್ನಾಟಕ ಮುಖ್ಯಮಂತ್ರಿ ಯಾರು ಎಂಬುದು ಫೈನಲ್ ಆಗಿದ್ದು, ಈ ಕುರಿತು ಶಾಸಕರ ಅಭಿಪ್ರಾಯ ಪಡೆಯಲು ಡಿಕೆಶಿ ಸಭೆ ಕರೆದಿದ್ದಾರೆ. ಆಗಾಗಿ ದಿನಾಂಕ 18-05-2023 ರಂದು ಸಂಜೆ 7-00 ಗಂಟೆಗೆ ಕಾಂಗ್ರೆಸ್ ಶಾಸಕಾಂಗ (CLP MEETING) ಸಭೆ ಕರೆಯಲಾಗಿದೆ.

ಈ ಕುರಿತು ಕಾಂಗ್ರೆಸ್ ಪಕ್ಷ ಎಲ್ಲಾ ನೂತನ ಶಾಸಕರು, ಪರಿಷತ್ ಸದಸ್ಯರು ಹಾಗೂ ಸಂಸದರಿಗೆ ಪತ್ರದ ಮೂಲಕ ಕರೆ ನೀಡಿದ್ದು ಪತ್ರದಲ್ಲಿ, ದಿನಾಂಕ 18-05-2023 ರಂದು ಸಂಜೆ 7-00 ಗಂಟೆಗೆ ಬೆಂಗಳೂರು ಕ್ರೀನ್ಸ್ ರಸ್ತೆಯಲ್ಲಿರುವ ಇಂದಿರಾ ಗಾಂಧಿ ಭವನದಲ್ಲಿ ನೂತನವಾಗಿ ಆಯ್ಕೆಯಾಗಿರುವ ವಿಧಾನಸಭೆ ಸದಸ್ಯರುಗಳು, ವಿಧಾನಪರಿಷತ್ ಸದಸ್ಯರುಗಳು ಹಾಗೂ ಸಂಸದರನ್ನು ಒಳಗೊಂಡ “ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ”ಯನ್ನು ಆಯೋಜಿಸಲಾಗಿದೆ. ಈ ಸಭೆಗೆ ಎಲ್ಲಾ ಸದಸ್ಯರುಗಳು ತಪ್ಪದೇ ಭಾಗವಹಿಸಬೇಕಾಗಿ ಕೋರುತ್ತೇನೆ ಎಂದು ಕೂರಲಾಗಿದೆ.

peepal media

Related Articles

ಇತ್ತೀಚಿನ ಸುದ್ದಿಗಳು