Saturday, August 24, 2024

ಸತ್ಯ | ನ್ಯಾಯ |ಧರ್ಮ

ಮುಡಾ ಹಗರಣ| ರಾಹುಲ್‌, ಖರ್ಗೆ ಮೌನಕ್ಕೆ ಸಿಎಮ್‌ ಸಿದ್ದರಾಮಯ್ಯ ಬೇಸರ

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ತಮ್ಮ ಸಹೋದ್ಯೋಗಿ ಸಚಿವರು, ಶಾಸಕರು ಬೆಂಬಲಕ್ಕೆ ನಿಂತಿದ್ದರೂ ಕಾಂಗ್ರೆಸ್ ನಾಯಕತ್ವದಿಂದ ಒಗ್ಗಟ್ಟು ಇಲ್ಲದಿರುವುದಕ್ಕೆ ಕರ್ನಾಟಕ ಸಿಎಂ ಸಿದ್ದರಾಮಯ್ಯ ಅಸಹನೆ ತೋರುತ್ತಿದ್ದಾರೆ.

ಈ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಯಾವುದೇ ಹೇಳಿಕೆ ನೀಡದಿರುವುದನ್ನು ಸಿದ್ದರಾಮಯ್ಯ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನುತ್ತಿವೆ ಆಪ್ತ ಮೂಲಗಳು. ಅದಾನಿ, ಬಂಗಾಳದಲ್ಲಿ ವೈದ್ಯೆಯ ಹತ್ಯೆ, ದೇಶದ ಪ್ರತಿಯೊಂದು ಸಮಸ್ಯೆಗೂ ಸ್ಪಂದಿಸುತ್ತಿರುವ ರಾಹುಲ್ ತನ್ನ ವಿಷಯವಾಗಿ ಮೌನವಾಗಿರುವ ಕುರಿತು ಅವರು ಬೇಸರಗೊಂಡಿದ್ದಾರೆ.

ಈ ವಿಚಾರವನ್ನು ದೆಹಲಿಯಲ್ಲೇ ಇತ್ಯರ್ಥಪಡಿಸಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಇದರ ಭಾಗವಾಗಿ ಶುಕ್ರವಾರ ಉಪ ಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಗೃಹ ಸಚಿವ ಜಿ.ಪರಮೇಶ್ವರ ಅವರೊಂದಿಗೆ ತೆರಳಿ ರಾಹುಲ್ ಭೇಟಿ ಮಾಡಿರುವುದು ಗೊತ್ತಾಗಿದೆ. ಆದರೆ, ಈ ಸಭೆಯಲ್ಲಿ ಮುಡಾ ಹಗರಣದ ವಿಷಯದಲ್ಲಿ ನಾಯಕತ್ವದಿಂದ ಬೆಂಬಲ ವ್ಯಕ್ತವಾಗಿದ್ದು, ಈ ಪ್ರಕರಣದಲ್ಲಿ ಕಾನೂನಾತ್ಮಕವಾಗಿ ಮುಂದುವರಿಯುವುದು ಹೇಗೆ? ಬಿಜೆಪಿಯ ಷಡ್ಯಂತ್ರಗಳನ್ನು ಹಿಮ್ಮೆಟ್ಟಿಸುವ ತಂತ್ರ ಮತ್ತಿತರ ವಿಷಯಗಳ ಕುರಿತು ಪ್ರಮುಖವಾಗಿ ಚರ್ಚಿಸಿದಂತಿದೆ.

ಕಳೆದ ಶನಿವಾರ ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಅವರನ್ನು ವಿಚಾರಣೆಗೆ ಒಳಪಡಿಸಲು ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಅನುಮತಿ ನೀಡಿದ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಬೆಂಗಳೂರಿನಲ್ಲಿ ಹಾಜರಿದ್ದರು. ಈ ಬಗ್ಗೆ ಮಾಧ್ಯಮದವರು ಕೇಳಿದಾಗ, ‘ರಾಜ್ಯಪಾಲರ ನಿರ್ಧಾರ ನನಗೆ ಗೊತ್ತಿಲ್ಲ. ವಕೀಲರ ಜೊತೆ ಚರ್ಚಿಸಿದ ನಂತರವೇ ಮಾತನಾಡುತ್ತೇನೆʼ ಎಂದು ಹೊರಟು ಹೋದರು. ಇದರೊಂದಿಗೆ ಸಿದ್ದರಾಮಯ್ಯ ಬಣ ಖರ್ಗೆ ಶೈಲಿಯ ಕುರಿತು ಮುನಿಸಿಕೊಂಡಿತ್ತು. ಇದರಿಂದಾಗಿ ಬಿಜೆಪಿಯೇತರ ರಾಜ್ಯಗಳ ವಿರುದ್ಧ ಕೇಂದ್ರ ಷಡ್ಯಂತ್ರ ನಡೆಸುತ್ತಿದೆ ಎಂದು ಖರ್ಗೆ ಹೇಳಿಕೆ ನೀಡಬೇಕಾಯಿತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page