Sunday, July 13, 2025

ಸತ್ಯ | ನ್ಯಾಯ |ಧರ್ಮ

ಸಿಎಂ ಕಚೇರಿಯಿಂದ ಪತ್ರಕರ್ತರಿಗೆ ಲಂಚ ನೀಡಿದ ವರದಿಯ ಬಗ್ಗೆ ತನಿಖೆಯಾಗಬೇಕು: ಕಾಂಗ್ರೆಸ್‌ ಒತ್ತಾಯ

ಬೆಂಗಳೂರು : ಪತ್ರಕರ್ತರಿಗೆ ಮುಖ್ಯಮಂತ್ರಿಗಳ ಕಚೇರಿಯಿಂದ ಸಿಹಿಯ ಜೊತೆಗೆ 2.5 ಲಕ್ಷ ರೂಪಾಯಿ ನಗದು ಕೊಡುಗೆಯಾಗಿ ನೀಡಿರುವ ಸುದ್ದಿ ಎಲ್ಲಡೆ ವರದಿಯಾಗಿದ್ದು, ಈ ಕುರಿತು ಟ್ವೀಟ್‌ ಮಾಡಿರುವ ರಾಜ್ಯ ಕಾಂಗ್ರೆಸ್‌ ಸಿಎಂ ಕಚೇರಿಯಿಂದ ಪತ್ರಕರ್ತರಿಗೆ ಲಂಚ ನೀಡಿದ ವರದಿಯ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯ ಮಾಡಿದೆ.

ಮಾಧ್ಯಮಗಳ ಪತ್ರಕರ್ತರಿಗೆ, ಸಂಪಾದಕರಿಗೆ ಮುಖ್ಯಮಂತ್ರಿಗಳ ಕಚೇರಿಯಿಂದ ದೀಪಾವಳಿ ಗಿಫ್ಟ್‌ ಆಗಿ ಸಿಹಿ ತಿಂಡಿಯೊಂದಿಗೆ ಲಕ್ಷಗಟ್ಟಲೆ ಹಣ ನೀಡಿರುವ ಕುರಿತು ʻಪೀಪಲ್‌ ಮೀಡಿಯಾʼ ಇಂದು ಬೆಳಿಗ್ಗೆ ಸ್ಫೋಟಕ ವರದಿ ಮಾಡಿತ್ತು.

ಈ ಕುರಿತು ಟ್ವೀಟ್‌ ಮಾಡಿರುವ ರಾಜ್ಯ ಕಾಂಗ್ರೆಸ್‌ ಘಟಕ, ʼಸಿಎಂ ಕಚೇರಿಯಿಂದ ಪತ್ರಕರ್ತರಿಗೆ ಲಂಚ ನೀಡಿದ ವರದಿಯ ಬಗ್ಗೆ ತನಿಖೆಯಾಗಬೇಕು. ಆ ಹಣ ಯಾರದ್ದು? ಸರ್ಕಾರದ್ದೇ? ಬಿಜೆಪಿ ಪಕ್ಷದ್ದೇ? ಮುಖ್ಯಮಂತ್ರಿಗಳದ್ದೇ? 40% ಕಮಿಷನ್ ಆ ಹಣದ ಮೂಲವೇ? ಪಡೆದ ಲಂಚವು ಕೊಡುವ ಲಂಚವಾಗಿ ಮಾರ್ಪಟ್ಟಿದೆಯೇ? ನಿಮ್ಮ ಕಚೇರಿಯಲ್ಲಿ ನಡೆದದ್ದಕ್ಕೆ ನೀವೇ ಉತ್ತರದಾಯಿ, ತನಿಖೆಯಾಗಬೇಕಲ್ಲವೇ?ʼ ಎಂದು ಕಾಂಗ್ರೆಸ್‌ ಕಿಡಿಕಾರಿದೆ.

ಇದನ್ನೂ ಓದಿ : ➤➤ಪತ್ರಕರ್ತರಿಗೆ ಲಕ್ಷಗಟ್ಟಲೆ ದುಡ್ಡು: ಸಿಎಂ ಕಚೇರಿಗೆ ಪತ್ರ ಬರೆದ ಪತ್ರಿಕಾ ಸಂಸ್ಥೆ

➤➤ಪತ್ರಕರ್ತರಿಗೆ ಹಣ ಹಂಚಿಕೆ: ಲೋಕಾಯುಕ್ತ ತನಿಖೆಗೆ ಹಿರಿಯ ಪತ್ರಕರ್ತರ ಆಗ್ರಹ

➤➤ಸಿಎಂ ಕಚೇರಿಯ ಗಿಫ್ಟ್‌ ಹಣ ನಿರಾಕರಿಸಿದ ಕನ್ನಡಪ್ರಭ


Related Articles

ಇತ್ತೀಚಿನ ಸುದ್ದಿಗಳು

You cannot copy content of this page