Monday, March 31, 2025

ಸತ್ಯ | ನ್ಯಾಯ |ಧರ್ಮ

ಮಹಿಳೆ ಹೆಗಲ ಮೇಲೆ ಕೈ ಹಾಕಿದ ಸಿಎಂ ನಿತೀಶ್ ಕುಮಾರ್; ನಿತೀಶ್ ಮಾನಸಿಕ ಅನಾರೋಗ್ಯದ ಬಗ್ಗೆ ಆರ್ಜೆಡಿ ಟೀಕೆ

ಸಾವಿರಾರು ಜನ ಸೇರಿದ್ದ ಸಾರ್ವಜನಿಕ ಸಮಾರಂಭವೊಂದರಲ್ಲಿ ಮಹಿಳೆಯೊಬ್ಬರ ಹೆಗಲ ಮೇಲೆ ಕೈ ಇಟ್ಟಿದ ಕಾರಣಕ್ಕೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಬಿಹಾರದ ವಿರೋಧ ಪಕ್ಷ ರಾಷ್ಟ್ರೀಯ ಜನತಾ ದಳ ತೀವ್ರವಾಗಿ ಟೀಕಿಸಿದೆ. ನಿತೀಶ್ ಕುಮಾರ್ ಅವರ ಮಾನಸಿಕ ಅನಾರೋಗ್ಯ ಅವರನ್ನು ಈ ಮಟ್ಟಕ್ಕೆ ತಂದಿದೆ ಎಂದು ಆರ್ಜೆಡಿ ತನ್ನ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದೆ.

ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಭಾಗವಹಿಸಿದ್ದ ಸಮಾರಂಭದಲ್ಲಿ ಅಮಿತ್ ಷಾ ಎದುರೇ ಮಧ್ಯವಯಸ್ಕ ಮಹಿಳೆ ಹೆಗಲಮೇಲೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಕೈ ಹಾಕಿದ್ದನ್ನು ವಿರೋಧ ಪಕ್ಷ ಆರ್ಜೆಡಿ ಪ್ರಮುಖ ಅಸ್ತ್ರವಾಗಿ ಟೀಕಿಸಿದೆ. ಪಾಟ್ನಾದ ವಿಶಾಲವಾದ ಬಾಪು ಸಭಾಗರ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ವೀಡಿಯೊ ಕ್ಲಿಪ್ ನ್ನು ವಿರೋಧ ಪಕ್ಷ ಹಂಚಿಕೊಂಡಿದೆ.

ಕೇಂದ್ರ ಸಹಕಾರ ಸಚಿವಾಲಯದ ಅಡಿಯಲ್ಲಿ ಯೋಜನೆಗಳ ಫಲಾನುಭವಿಗಳಿಗೆ ಶಾ “ಚೆಕ್”ಗಳನ್ನು ಸಹ ವಿತರಿಸಿದರು. ಈ ವೇಳೆ ಚೆಕ್ ಸ್ವೀಕರಿಸಲು ವೇದಿಕೆಗೆ ಆಗಮಿಸಿದ ಮಧ್ಯವಯಸ್ಕ ಗ್ರಾಮೀಣ ಮಹಿಳೆಗೆ ಫೋಟೋಗೆ ಪೋಸ್ ನೀಡುವಂತೆ ಅಮಿತ್ ಷಾ ಹೇಳುವ ಸಮಯದಲ್ಲಿ, 74 ವರ್ಷದ ಮುಖ್ಯಮಂತ್ರಿ ಆಕೆಯ ತೋಳನ್ನು ಎಳೆದುಕೊಂಡು ಪತ್ರಕರ್ತರು ಮತ್ತು ಛಾಯಾಗ್ರಾಹಕರ ಗುಂಪಿಗೆ ಎದುರಾಗಿ ನಿಲ್ಲುವಂತೆ ಮಾಡಿದರು.

ಈ ಬಗ್ಗೆ ವಿರೋಧ ಪಕ್ಷ ಆರ್ಜೆಡಿ “ಮುಖ್ಯಮಂತ್ರಿ ನಿತೀಶ್ ಕುಮಾರ್ ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ಆಕ್ಷೇಪಾರ್ಹ ರೀತಿಯಲ್ಲಿ ಮಹಿಳೆಯನ್ನು ತನ್ನ ಕಡೆಗೆ ಹೇಗೆ ಎಳೆಯುತ್ತಿದ್ದಾರೆಂದು ನೋಡಿ” ಎಂದು ಬರೆದಿದೆ.

“ಬಿಹಾರ ಮುಖ್ಯಮಂತ್ರಿ ಅನಾರೋಗ್ಯದಿಂದ ಬಳಲುತ್ತಿದ್ದು, ಬಿಜೆಪಿ ಅಸಹಾಯಕತೆಯಿಂದ ನಾಚಿಕೆಪಡುತ್ತಿದೆ” ಎಂದು ವಿರೋಧ ಪಕ್ಷ ಆರೋಪಿಸಿದೆ. ದೀರ್ಘ ಕಾಲ ಅಧಿಕಾರದಲ್ಲಿದ್ದ ಮುಖ್ಯಮಂತ್ರಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ ಎಂದು ಆರ್ ಜೆಡಿ ಹೇಳಿದೆ.

ಮುಖ್ಯಮಂತ್ರಿಯಾದ ನಂತರ ಜಗತ್ತು ಅಸ್ತಿತ್ವಕ್ಕೆ ಬಂದಿತು” ಎಂದು ನಿತೀಶ್ ನಂಬಿದ್ದಾರೆ ಎಂದು ಆರ್ ಜೆಡಿ ಹೇಳಿದೆ. “2005 ಕ್ಕಿಂತ ಮೊದಲು ಯಾವುದೇ ಮುಖ್ಯಮಂತ್ರಿ ಈ ರೀತಿ ವರ್ತಿಸಿದ್ದಾರೆಯೇ? ನಾನು ಅಧಿಕಾರಕ್ಕೆ ಬಂದ ನಂತರವೇ ಇದು ಸಂಭವಿಸಿದೆ” ಎಂದು ಆರ್‌ಜೆಡಿ ಹೇಳಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page