Thursday, June 13, 2024

ಸತ್ಯ | ನ್ಯಾಯ |ಧರ್ಮ

ಕೇಂದ್ರದ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ: ಸದನದಲ್ಲಿ ಗದ್ದಲ

ಬೆಂಗಳೂರು: ಇಂದು ಸಿಎಂ ಸಿದ್ದರಾಮಯ್ಯ ಅವರು ಕರ್ನಾಟಕ ಬಜೆಟ್ ಭಾಷಣ (Karnataka Budget 2024) ಆರಂಭಿಸುವಾಗ ಸದನದಲ್ಲಿ ಬಿಜೆಪಿ ನಾಯಕರ ಗದ್ದಲ, ಘೋಷಣೆಗಳು ಮೊಳಗಿದವು. ಇದರ ನಡುವೆಯೂ ಬಜೆಟ್ ಭಾಷಣ (budget speech)) ಮುಂದುವರೆಸಿದ್ದಾರೆ. ಈ ವರ್ಷದ ಬಜೆಟ್ ಗಾತ್ರ ₹ 3,71,383 ಕೋಟಿ.

ಸಿಎಂ ಸಿದ್ದರಾಮಯ್ಯ ಅವರು ತಮ್ಮ ಬಜೆಟ್ ಭಾಷಣದಲ್ಲಿ ಕೇಂದ್ರದ ವಿರುದ್ಧ ವಾಗ್ದಾಳಿ ಸಡೆಸಿ, “ಸರಕು ಮತ್ತು ಸೇವಾ ತೆರಿಗೆಯನ್ನು ಪರಿಚಯಿಸುವಾಗ, 14% ರಷ್ಟು ಬೆಳವಣಿಗೆಯಾಗುತ್ತದೆ ಮತ್ತು ಆದಾಯದಲ್ಲಿ ಕೊರತೆಯಾದರೆ ರಾಜ್ಯಗಳಿಗೆ ಪರಿಹಾರ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಭರವಸೆ ನೀಡಿತ್ತು. ತೋರಿಸಲಾಗಿರುವ 14% ಬೆಳವಣಿಗೆಯಲ್ಲಿ, 2017 ರಿಂದ 2023-24 ರವರೆಗೆ GST ತೆರಿಗೆ ಸಂಗ್ರಹವು 4,92,296 ಕೋಟಿ ರುಪಾಯಿಗಳಾಗಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಕೇವಲ ₹ 3,26,764 ಕೋಟಿ GST ಆದಾಯವನ್ನು ಸಂಗ್ರಹಿಸಲಾಗಿದೆ ಮತ್ತು 1,65,532 ಕೋಟಿ ರುಪಾಯಿ ಶಾರ್ಟ್‌ಫಾಲ್‌ ಆಗಿದೆ. ಕೇಂದ್ರ ಸರ್ಕಾರವು ರಾಜ್ಯಕ್ಕೆ ₹ 1,06,258 ಕೋಟಿ ಪರಿಹಾರವನ್ನು ಬಿಡುಗಡೆ ಮಾಡಿದೆ, ಆದ್ದರಿಂದ ಕಳೆದ 7 ವರ್ಷಗಳಲ್ಲಿ ಜಿಎಸ್‌ಟಿಯ ಅವೈಜ್ಞಾನಿಕ ಅನುಷ್ಠಾನದಿಂದ ರಾಜ್ಯಕ್ಕೆ ₹ 59,274 ಕೋಟಿ ನಷ್ಟವಾಗಿದೆ,” ಎಂದು ಆರೋಪಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು