Monday, July 28, 2025

ಸತ್ಯ | ನ್ಯಾಯ |ಧರ್ಮ

ಸಿಎಂ ಕಚೇರಿ ಬೊಮ್ಮಾಯಿ ಅವರ ಹಿಡಿತದಲ್ಲಿ ಇಲ್ಲವೇ? : ಕಾಂಗ್ರೆಸ್

ಬೆಂಗಳೂರು: ಸಿಎಂ ಆಪ್ತ ಕಾರ್ಯದರ್ಶಿಯ ಹನಿಟ್ರಾಪ್ ವಿಚಾರಕ್ಕೂ, ಕಡತ ಕಾಣೆಯಾಗಿರುವುದಕ್ಕೂ ಸಂಬಂಧವಿದೆಯೇ? ಎಂದು ರಾಜ್ಯ ಕಾಂಗ್ರೆಸ್‌ ಘಟಕ ಬೊಮ್ಮಾಯಿಯವರಿಗೆ ಪ್ರಶ್ನೆ ಮಾಡಿದೆ.

ಜಾಹೀರಾತು ಯೋಜನೆ ಸಂಬಂಧವಾಗಿ ಹಿರಿಯ ಅಧಿಕಾರಿಯೊಬ್ಬರು ಮುಖ್ಯಮಂತ್ರಿ ಅವರ ಕಚೇರಿಗೆ ಕಳುಹಿಸಿದ್ದರು. ಆದರೆ ಆ ಕಡತ ಕಾಣೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್‌ ಬಿಜೆಪಿಯನ್ನು ಟೀಕಿಸಿದೆ.

ಈ ಕುರಿತು ಟ್ವೀಟ್‌ ಮಾಡಿರುವ ರಾಜ್ಯ ಕಾಂಗ್ರೆಸ್‌ ಘಟಕ, ʼಮುಖ್ಯಮಂತ್ರಿ ಕಚೇರಿಯಿಂದ ಮಹತ್ವದ ಕಡತ ಒಂದು ಕಾಣೆಯಾಗಿರುವ ಸಂಗತಿ ಬೆಳಕಿಗೆ ಬಂದಿದೆ. ಸಿಎಂ ಆಪ್ತ ಕಾರ್ಯದರ್ಶಿಯ ಹನಿಟ್ರಾಪ್ ವಿಚಾರಕ್ಕೂ, ಕಡತ ಕಾಣೆಯಾಗಿರುವುದಕ್ಕೂ ಸಂಬಂಧವಿದೆಯೇ? ಸಿಎಂ ಕಚೇರಿ ಬಸವರಾಜ ಬೊಮ್ಮಾಯಿ ಅವರ ಹಿಡಿತದಲ್ಲಿ ಇಲ್ಲವೇ? ಬಿಬಿಎಂಪಿಗೆ ಸಂಬಂಧಿಸಿದ ಮಹತ್ವದ ಕಡತವನ್ನೇ ರಕ್ಷಿಸಲಾಗದವರು ರಾಜ್ಯ ರಕ್ಷಿಸಲು ಸಾಧ್ಯವೇ? ಎಂದು ಪ್ರಶ್ನೆ ಮಾಡಿದೆ.

ʼಸಿಎಂ ಕಚೇರಿಯಲ್ಲಿರುವ ಲಂಚ, ಮಂಚದ ಪರಿಣಾಮ ಮಹತ್ವದ ಕಡತಗಳೇ ನಾಪತ್ತೆಯಾಗುವ ಸ್ಥಿತಿ ಒದಗಿದೆ. ಸಿಎಂ ಕಾರ್ಯದರ್ಶಿಯ ಹನಿಟ್ರಾಪ್ ಪ್ರಕರಣವನ್ನು ಬಿಜೆಪಿ ಮುಚ್ಚಿಹಾಕಲು ಪ್ರಯತ್ನಿಸುತ್ತಿರುವುದರ ಹಿಂದೆ ಅತಿ ದೊಡ್ಡ ಹಗರಣ ಇರುವುದು ನಿಶ್ಚಿತ. ಬಸವರಾಜ ಬೊಮ್ಮಾಯಿಯವರೇ, ಹನಿಟ್ರಾಪ್‌ನಿಂದಾಗಿ ಇನ್ನೂ ಯಾವ ಅನಾಹುತಗಳು ಜರುಗಿವೆ? ಎಂದು ಮುಖ್ಯಮಂತ್ರಿಗಳಿಗೆ ವಿರುದ್ಧ ಕಿಡಿಕಾರಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page