Thursday, August 21, 2025

ಸತ್ಯ | ನ್ಯಾಯ |ಧರ್ಮ

‘ಇಂಡಿಯಾ’ ಅಧಿಕಾರಕ್ಕೆ ಬಂದರೆ, ಮೋದಾನಿ ಹಗರಣ ತನಿಖೆಗೆ ಜಂಟಿ ಸಮಿತಿ: ಕಾಂಗ್ರೆಸ್ ಭರವಸೆ

ಹೊಸದೆಹಲಿ: ಚುನಾವಣೆಯ ನಂತರ ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದ ತಕ್ಷಣ ಮೋದಾನಿ ಮೆಗಾ ಹಗರಣವನ್ನು ಜಂಟಿ ಸಂಸದೀಯ ಸಮಿತಿಯೊಂದಿಗೆ (ಜೆಪಿಸಿ) ತನಿಖೆ ನಡೆಸುವುದಾಗಿ ಕಾಂಗ್ರೆಸ್ ಬುಧವಾರ ಭರವಸೆ ನೀಡಿದೆ.

ಈ ವಿಷಯವನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈ ರಾರ ರಮೇಶ್ ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗಪಡಿಸಿದ್ದಾರೆ. ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ ಯೋಜನೆ (OCCRP) ತನ್ನ ವರದಿಯಲ್ಲಿ ಮೋದಾನಿ ಮೆಗಾ ಹಗರಣದ ಬಗ್ಗೆ ಬಹಿರಂಗಪಡಿಸಿದೆ. ಈ ವರದಿಯನ್ನು ಕೆಲವು ರಾಷ್ಟ್ರೀಯ ಮಾಧ್ಯಮಗಳು ಪ್ರಕಟಿಸಿವೆ. ವರದಿಯ ಪ್ರಕಾರ, 2014ರಲ್ಲಿ, ಅದಾನಿ ಗ್ರೂಪ್ ಇಂಡೋನೇಷ್ಯಾದಿಂದ ಕಡಿಮೆ-ಗುಣಮಟ್ಟದ, ಕಲ್ಲಿದ್ದಲನ್ನು ಕಡಿಮೆ ಬೆಲೆಗೆ ಡಜನ್‌ಗಟ್ಟಲೆ ಹಡಗುಗಳಲ್ಲಿ ಖರೀದಿಸಿ ಅದನ್ನು ತಮಿಳುನಾಡು ಜನರೇಷನ್ ಮತ್ತು ಡಿಸ್ಟ್ರಿಬ್ಯೂಷನ್ ಕಾರ್ಪೊರೇಷನ್ (TNGEDCO) ಗೆ ಮೂರು ಪಟ್ಟು ಬೆಲೆಗೆ ಮಾರಾಟ ಮಾಡಿತು.

ಈ ಹಗರಣದ ಕುರಿತು ಜೆಪಿಸಿ ತನಿಖೆ ನಡೆಸಲಿದೆ ಎಂದು ಜೈ ರಾಮ್ ರಮೇಶ್ ತಮ್ಮ ಎಕ್ಸ್ ಖಾತೆಯಲ್ಲಿ ಬಹಿರಂಗಪಡಿಸಿದ್ದಾರೆ. ಈ ಹಗರಣದ ಮೂಲಕ ಅದಾನಿ ಗ್ರೂಪ್ ಕನಿಷ್ಠ 3,000 ಕೋಟಿ ರೂಪಾಯಿ ಹೆಚ್ಚುವರಿ ಲಾಭ ಗಳಿಸಿದೆ. ಇನ್ನೊಂದೆಡೆ ವಿದ್ಯುತ್ ಬೆಲೆ ಏರಿಕೆ ಹಾಗೂ ಹೆಚ್ಚಿದ ವಾಯು ಮಾಲಿನ್ಯದಿಂದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಜೈ ರಾಮ್ ರಮೇಶ್ ಟೀಕಿಸಿದರು. ‘‘ಕಳೆದ 10 ವರ್ಷಗಳಲ್ಲಿ ಕಾನೂನನ್ನು ಉಲ್ಲಂಘಿಸಿ ಬಡ ಭಾರತೀಯರನ್ನು ಶೋಷಿಸುವ ಮೂಲಕ ಪ್ರಧಾನಿಯವರ ಆಪ್ತರು ಶ್ರೀಮಂತರಾಗಿದ್ದಾರೆ” ಎಂದು ಅವರು ಆರೋಪಿಸಿದ್ದಾರೆ.

ಇದು ಅವರ ಅಪರಾಧಗಳಿಗೆ ಮತ್ತೊಂದು ಉದಾಹರಣೆಯಾಗಿದೆ. ವಾಯು ಮಾಲಿನ್ಯದಿಂದ ಪ್ರತಿ ವರ್ಷ 20 ಲಕ್ಷ ಭಾರತೀಯರು ಸಾಯುತ್ತಿದ್ದಾರೆ. ಪ್ರಧಾನಿ ಮೋದಿ ಮತ್ತು ಅವರ ಆಪ್ತರಿಗೆ ಇದು ಅಮೃತ ಕಾಲವಾದರೆ, ಉಳಿದವರಿಗೆಲ್ಲ ವಿಷದ ಕಾಲ ಎಂದು ಜೈರಾಮ್ ರಮೇಶ್ ಟೀಕಿಸಿದರು.

ದೇಶದಲ್ಲಿ ಅದಾನಿ ಅಕ್ರಮಗಳ ಬಗ್ಗೆ ತನಿಖೆ ನಡೆಸದೇ ಪ್ರಧಾನಿ ಅವರಿಗೆ ಸಹಾಯ ಮಾಡಿರಬಹುದು ಆದರೆ ಇಂಡೋನೇಷ್ಯಾ ಮತ್ತಿತರ ದೇಶಗಳಿಂದ ಬರುತ್ತಿರುವ ಮಾಹಿತಿ ಮತ್ತು ಸಂಶೋಧನೆಗಳು ಸತ್ಯಾಂಶಗಳನ್ನು ಬಹಿರಂಗಪಡಿಸುತ್ತಿವೆ ಎಂದು ರಮೇಶ್ ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page