Saturday, June 15, 2024

ಸತ್ಯ | ನ್ಯಾಯ |ಧರ್ಮ

ಕಾಕ್ಟೇಲ್ ಲೈಫ್

“ನೀವೆಲ್ಲ ಬರುವ ಲಕ್ಷ ಲಕ್ಷ ಸಂಬಳದಲ್ಲಿ ರೆಡ್ ರೈನೊ ಪಬ್ಬಲ್ಲಿ ಸಾವಿರಾರು ರೂಪಾಯಿಗಳನ್ನು ಕಳೆಯುತ್ತೀರಿ. ಆದ್ರೆ ನಾನು ಅದೇ  ದುಡ್ಡು ಮಿಕ್ಕಿದ್ರೆ ಎಲ್ಲಾದ್ರೂ ಚೀಟಿ ಹಾಕ್ಬೋದು ಅಂತ ಯೋಚ್ನೆ ಮಾಡ್ತೀನಿ. ಇದೇ reason ಗೆ ನಾನು ನಿಮ್ ಪಾರ್ಟಿಗೆ ಬರಲ್ಲ”… ಹೊರಗಿನವರಿಗೆ ಕಾಣುವ ಐಟಿಯವರ ಬಣ್ಣಬಣ್ಣದ ಐಶಾರಾಮಿ ಬದುಕಿನೊಳಗೂ ಬಡತನದ ಬೆಂಕಿಯಲ್ಲಿ ಅರಳಿದ ಹೂಗಳ ನಿಟ್ಬುಸಿರಿದೆ ಎಂಬುದನ್ನು ಹೊರಹಾಕಿದ್ದಾರೆ ಇಂಜಿನಿಯರ್ ಕಾವ್ಯಶ್ರೀಯವರು.               

Imagine living in a world where there is no domination, where females and males are not alike or even always equal, but where a vision of mutuality is the ethos shaping our interaction. Imagine living in a world where we can all be who we are, a world of peace and possibility.

~Bell Hooks 

ಟೀ ಬ್ರೇಕ್ ಗೆಂದು ನಾವೆಲ್ಲ ಕೆಫೆಟೇರಿಯಾ ಗೆ ಹೋದೆವು. ನೇಹಾ ಸಿಟ್ಟಿನಲ್ಲಿ ಬುಸ್ಗುಡ್ತ ಇದ್ಳು. ಏನಾಯ್ತು ಅಂತ ಕೇಳ್ದೆ.

“I’ll never travel in the bus.

Uff ಎಸ್ಟು irritate ಆಗ್ತಿದೆ ಗೊತ್ತಾ? And I hate it.”

“Hate what? To sit next to common people?”

ಧ್ವನಿ ಯಾಕೋ ತುಸು ಅಸಮಾಧಾನದಲ್ಲಿದ್ದಳು.

ನೇಹಾ “ನಂಗೆ ಲೋಕಲ್ ಬಸ್ ಗಳಲ್ಲಿ ಓಡಾಡಿ ಅಭ್ಯಾಸ ಇಲ್ಲ. Too much socialization Plus bus ಸ್ವಲ್ಪ rush ಕೂಡ ಇತ್ತು, I felt so much touchy”. ಧ್ವನಿಗೂ ನೇಹಾಗು ಒಂದ್ ತರ ಎಣ್ಣೆ ಸೀಗೆಕಾಯಿ.

ವರ್ಷದ ಕೆಳಗೆ ನಮ್ ಪ್ರೊಜೆಕ್ಟ್ ಗೆ ಟ್ರಾನ್ಸ್ ಫರ್ ತಗೊಂಡು ಬಂದಿದ್ದ ಚುರುಕು ಹುಡುಗಿ ಧ್ವನಿ. ಅವ್ಳ aggressiveness, over excitement ಒಂದ್ ಥರಾ ಚಂದ. ಅವಳನ್ನ ನೋಡ್ತಾ ಇದ್ರೆ ಎಂಟು ವರ್ಷಗಳ ಹಿಂದಿನ ನನ್ನನ್ನೇ ನೋಡಿ ಕೊಂಡಂತೆ ಅನ್ನಿಸ್ತಾ ಇತ್ತು.

ಎಲ್ಲಕ್ಕಿಂತ ಹೆಚ್ಚಾಗಿ ಧ್ವನಿ, ಆ ಹೆಸರೇ ಚಂದ. ನನ್ನ ರಿಪೋರ್ಟಿ ಆದರೂ ತಂಗಿಯಂತೆ.

ಆದ್ರೆ ಇಷ್ಟು ದಿನ ಆದ್ರೂ ನನ್ನ ಹಿತಾ mam ಅನ್ನೋದು ಬಿಟ್ಟಿಲ್ಲ.

ಈ ಧ್ವನಿ ಒಂಥರಾ ವಿಚಿತ್ರ ಹುಡುಗಿ,

ಸಂಬಳದ ದಿನ ccd ಗೆ ಹೋಗಿ devils own fraape ಮತ್ತೆ brushchetta ದೊಂದಿಗೆ celebrate ಮಾಡಿದ್ರೆ,

ರಾತ್ರಿಯ dinner mandatory Domino’s ನ pizza ಹಾಗೂ choco lawa cake.

ಉಳಿದಂತೆ ಅವಳದೇ ಅಡುಗೆ.

ಎಂಥಹ ಚಳಿ ಇರಲಿ ಹೊರಗೆ ಎಷ್ಟೇ ಸುರಿಯೋ ಮಳೆ ಇರಲಿ ಇವಳು ccd ನಲ್ಲಿ ಕುಡಿಯೋದು ಅದೊಂದೇ devils own fraape!

Red Rhino ಗೆ ನಮ್ಮೊಂದಿಗೆ ಒಂದೇ ಸಲ ಬಂದಿದ್ದು. ಆ ನಂತರ ಆಕೆ ಬರ್ಲೇ ಇಲ್ಲ.

ಒಮ್ಮೆ ಕೇಳಿದ್ದೆ “Starbucks, Third Wave ಮತ್ತೆ ಇನ್ನು ಎಷ್ಟೆಲ್ಲ options ಇದ್ರು ನೀನ್ ಯಾಕೆ CCD ಗೆ ಹೋಗ್ತಿಯಾ ಅದೇ particular CCD ಗೇ ಯಾಕೆ ಹೋಗ್ತಿಯ? ಮತ್ತೆ Domino’s ಬಿಟ್ಟು ಬೇರೆ ಕಡೆ try ಮಾಡ್ಬೋದಲ….”

ಆಗ ಅವಳು ಹೀಗೆ ಹೇಳಿದ್ಲು-

“ಅದು ನನ್ನ struggling days. ಆಗಷ್ಟೇ ಬೆಂಗಳೂರಿಗೆ ಕೆಲಸ ಹುಡುಕೊಂಡು ಬಂದೆ. Rural area ನಮ್ದು. ಅಪ್ಪ ದುಡಿಯೋದು ಏನಕ್ಕೂ ಸಾಕಾಗ್ತ ಇರ್ಲಿಲ್ಲ. ನಾವು ಮೂರು ಜನ ಹೆಣ್ಣು ಮಕ್ಳು. ನಮ್ ಅಕ್ಕ ನಮ್ಮನ್ನೆಲ್ಲ ಓದಿಸಿ ಅವ್ಳು ಮದುವೆ ಆಗದೆ ಹಾಗೆ ಇದಾಳೆ. ನಮ್ ಎರಡನೇ ಅಕ್ಕನ ಮದುವೆ ಹೋದ ವರ್ಷ ಆಯ್ತು. ಸ್ಕಾಲರ್‌ಶಿಪ್ ಬರ್ತಾ ಇದ್ರೂ, ಪುಸ್ತಕಗಳಿಗೆ, ಮಿಕ್ಕ ಖರ್ಚುಗಳಿಗೆ ನಾವು ಕಷ್ಟ ಪಡಲೇ ಬೇಕಿತ್ತು. ಸೆಮಿಸ್ಟರ್ ರಜದಲ್ಲಿ  ಒಂದು ತಿಂಗಳು ಗಾರ್ಮೆಂಟ್ ನಲ್ಲಿ ಕೆಲ್ಸ ಮಾಡ್ತಾ ಇದ್ದೆ. ಅಲ್ಲಿ ಬಂದಿದ್ದ ಸಂಬಳದಲ್ಲಿ ಇಡೀ ಸೆಮಿಸ್ಟರ್ ನ ಖರ್ಚು ನಡೆಯೋದು. ಒಮ್ಮೊಮ್ಮೆ ಕಾಲೇಜಿಗೆ ಹೋಗೋಕೆ ಮೊದಲು ಮುಯ್ಯಾಳು ತೀರ್ಸಿ ಹೋಗ್ತಾ ಇದ್ದೆ.

BE ಮುಗಿದ ನಂತರ ಬೆಂಗಳೂರಿಗೆ ಬಂದ ಹೊಸದರಲ್ಲಿ ಕೈಲಿ ತಂದಿದ್ದ ಹತ್ತು ಸಾವಿರ ಇನ್ನೇನು ಕರಗಿ ಹೋಗ್ತಾ ಇತ್ತು. ಆಗ Domino’s ನಲ್ಲಿ ಕೆಲಸಕ್ಕೆ ಸೇರಿದ್ದೆ. ಹಾಗೆ ಯಾರೋ ಹೇಳಿದ್ರು ಅಂತ ಡೇಟಾ ಅನಾಲಿಟಿಕ್ಸ್ ಕೋರ್ಸ್ ಗೆ ಸೇರಿದ್ದೆ. ನಂಗೂ ತುಂಬಾ ಕನಸುಗಳು. ಐಟಿ ಬದುಕಿನ ಬಗ್ಗೆ. 

Price tag ನೋಡದೇ shop ಮಾಡಬೇಕು…. CCD ಅಲ್ಲಿ Capputino, frappe ರುಚಿ ನೋಡ್ಬೇಕು… ಎಲ್ಲಾ ಮಧ್ಯಮ ವರ್ಗದ ಹುಡುಗಿಯರಂತೆ ನಂದೂ ಕೂಡ ಕನಸು…. ಯಾಕೆ ಅಂದ್ರೆ ನಮಗೂ ನಮ್ಮ ಕನಸುಗಳನ್ನ ಮುಚ್ಚಿಟ್ಟು ಸಾಕಾಗಿತ್ತು.

ಆಗ interview ಗೆ ಹೋಗೋಕೂ bus charge ಗೆ ಪರದಾಡುತ್ತಿದ್ದಂಥ ಸಮಯ…

ಪ್ರತಿ ಒಂದು company ಮುಂದೆ CCD ಇದ್ದೆ ಇರ್ತಿತ್ತು….

ಒಂದಿನ ದೊಡ್ಡ ಕಂಪನಿ ಒಂದಕ್ಕೆ ಇಂಟರ್ವ್ಯೂ ಗೆ ಹೋಗಿದ್ದೆ. ಇಡೀ ದಿನ ಆ ಇಂಟರ್ವ್ಯೂ ನಡೆದಿತ್ತು. ಆದ್ರೆ ಕೊನೆ ರೌಂಡ್ ನಲ್ಲಿ ನನ್ನ ರಿಜೆಕ್ಟ್ ಮಾಡಿದ್ರು. ಸಂಜೆ ಹೊರಟೆ. ಮಳೆ ಬೇರೆ ಬರ್ತಾ ಇತ್ತು. ಬಸ್ ಸ್ಟಾಪಿನಲ್ಲಿ ಕಾಯ್ತಾ ಇದ್ದೆ. ಹೊಟ್ಟೆ ಬೇರೆ ಸಿಕ್ಕಾಪಟ್ಟೆ ಹಸೀತಾ ಇತ್ತು. ಬೆಳಿಗ್ಗೆ ಒಂದು pack marrie gold biscuit ಮತ್ತೆ ಒಂದ್ ಗ್ಲಾಸ್ ಟೀ ಕುಡಿದಿದ್ದು ಬಿಟ್ರೆ ಇಂಟರ್ವ್ಯೂ ನ ಮಧ್ಯದಲ್ಲಿ ಅಲ್ಲಿನ ಕಾಫಿ ಮಷೀನ್ ನಿಂದ ಒಂದು ಕಪ್ ಕಾಫಿ ಕುಡಿದಿದ್ದು ಅಷ್ಟೇ. 

ನಂಗೆ ಹತ್ರ ಇದ್ದಿದ್ದ ಒಂದೇ ಒಂದು ಶಾಪ್ ಅಂದ್ರೆ ಅದು CCD. ಐದು ರೂಪಾಯಿ ಉಳಿಸೋಕೋಸ್ಕರ ಮುಂದಿನ ಸ್ಟಾಪ್ ಗೆ ನಡ್ಕೊಂಡು ಹೋಗೋ ನನ್ನಂತವಳಿಗೆ ನೂರಾರು ರೂಪಾಯಿ ಕೊಟ್ಟು ಕಾಫಿ ಕುಡಿಯೋದು ಒಂದು ಕನಸೇ ಸರಿ.

ಅವತ್ತು ನಾನು ತೀರ್ಮಾನ ಮಾಡ್ಕೊಂಡೆ ಹಿತಾ, ಮುಂದಿನ ತಿಂಗಳೊಳಗೆ ಒಂದು ಕೆಲಸ ತಗೊಂಡು ಇದೇ CCD ನಲ್ಲಿ ಕೂತ್ಕೊಂಡು ಆ fraappe ಸವಿಬೇಕು ಅಂತ.

ಬಹುಶಃ ದೇವ್ರು ಕಣ್ ಬಿಟ್ಟ ಅನ್ಸುತ್ತೆ. ಅದ್ರ ಮಾರನೇ ದಿನಾನೆ ನಂಗೆ ಈ ಕಂಪನಿಲಿ ಆಫರ್ ಸಿಕ್ತು… ಅವತ್ತಿಂದ ನಂಗೆ ಸಂಬಳದ ಮೊದಲ್ನೆ ದಿನ ಹೀಗೆ CCD ನಲ್ಲಿ ಬಂದು Frappe ಕುಡಿಯೋ ಅಭ್ಯಾಸ. ಹಾಗೆ Domino’s ನ pizza. ಇವೆರೆಡೆ ನನ್ನ luxury” ಅಂತ ಹೇಳಿದ್ದಳು. ಆಗ ಇವಳ ಮೇಲೆ ಪ್ರೀತಿ  ಹೆಚ್ಚಾಗಿತ್ತು.

ನೇಹಾಗೆ ಧ್ವನಿ ಬಗ್ಗೆ ಇರುವ ಅಸಹನೆ ಯಾಕೆ ಅಂತ ಅಂದ್ರೆ “ಧ್ವನಿ ಸಿಕ್ಕಾಪಟ್ಟೆ ಜುಗಾಡ್. ಪಾರ್ಟಿ ಮಾಡೋಕೆ ಪಬ್ ಗೆ ಹೋಗೋಣ ಅಂತ ಅಂದ್ರೆ ಬೇಡ ಮನೇಲೇ ಮಾಡೋಣವಾ ಏನ್ ಬೇಕೋ ಅಡಿಗೆ ನಾನ್ ಮಾಡ್ತೀನಿ ಅಂತಾಳೆ. ಇವಳಿಂದ ಬಾಲಿ ಟ್ರಿಪ್ ಕ್ಯಾನ್ಸಲ್ ಆಯ್ತು, ಎಷ್ಟೊಂದು ಸಲ ಇವಳು ಬರಲ್ಲ ಅಂತ weekend plan cancel ಮಾಡ್ಕೊಂಡ್ ಇರ್ತೀವಿ” . ಇಷ್ಟೇ ನೇಹಾಗೆ ಧ್ವನಿ ಮೇಲಿದ್ದ ಅಸಮಾಧಾನ.

ಆದ್ರೆ ಧ್ವನಿ ಇವತ್ಯಾಕೆ ಈ ತರ ಮಾತಾಡ್ತಾ ಇದಾಳೆ??

“ಧ್ವನಿ calm down” ಎಂದೇ.

“ಹಿತಾ mam am so done with it! ನಮ್ middle class lifestyle ನ ಆಗಾಗ indirect ಆಗಿ ಜಡ್ಜ್ ಮಾಡೋರು ಎಷ್ಟು ಜನ ಇದಾರೆ .

ನಾನು ಆಫೀಸ್ ನಲ್ಲಿ ಈ ತರ indirect tauntings ನ ಆಗಾಗ ನೋಡ್ತಾನೆ ಇರ್ತೀನಿ.”

“ಅಯ್ಯೋ ಇಲ್ಲಿ ಕ್ಲಾಸ್ ಯಾರ್ ತಂದ್ರು ಧ್ವನಿ? ನಂಗೆ ಬಸ್ journey ಹಿಂಸೆ ಆಯ್ತು ಅಂತ ಅಷ್ಟೇ ಹೇಳಿದ್ದು” ಎಂದಳು ನೇಹಾ.

ಅದಕ್ಕೆ ಧ್ವನಿ ” ಹಾ ನಿಮಗೆ ಬಸ್ ನಲ್ಲಿ ಓಡಾಡೋಕೆ ಅದೇ ಕಾರಣಕ್ಕೆ ತಾನೇ ಹಿಂಸೆ ಆಗೋದು ನೇಹಾ.. ನನ್ನ ನೋಡಿದ್ರೆ ನಿಮ್ಗೆ ಅದಕ್ಕೆ ಅಲ್ವಾ ಕಷ್ಟ ಆಗೋದು??”

ಆಕಾಂಕ್ಷ ಮಧ್ಯೆ ಬಂದು, “girls let’s not make the scene here please” ಅಂತ ತಣ್ಣಗೆ ಮಾಡಿದ್ಲು.

ಯಾಕೋ ಧ್ವನಿ ನೇಹಾ ವಿಷಯ ದಲ್ಲಿ ಇವತ್ತು ತೋರಿದ್ದ outrage ನೋಡಿ ನಂಗೆ ಕೆಲ್ಸ ಮಾಡೋಕೆ ಮನಸ್ಸು ಬರಲಿಲ್ಲ.

ಈ ಕಾರ್ಪೊರೇಟ್ ಕ್ಯಾಪಿಟಲಿಸಂ ನ heirarchy ಹೇಗಿರುತ್ತೆ ಅಂತ ಅಂದ್ರೆ 2 ಲಕ್ಷ ದುಡಿಯೋರು 20 ಸಾವಿರ ದುಡಿಯೋರು ಎಲ್ಲ ಒಂದೇ ಕಡೆ ಕೆಲ್ಸ ಮಾಡ್ತಾರೆ. ಮತ್ತೆ ಕಾರ್ಪೊರೇಟ್ ಹಿಡಿಸಿರುವ ಕೊಳ್ಳುಬಾಕ ಸಂಸ್ಕೃತಿ ಯ ಚಟ ಅನ್ನೋದು ಒಬ್ಬರಿಂದ ಒಬ್ಬರಿಗೆ ಅಂಟು ರೋಗದಂತೆ. ಈಗೀಗ ಬಟ್ಟೆ ನೋಡಿ ಮನುಷ್ಯನ ಕ್ಲಾಸ್ ಅಳೆಯೋದು ಶುರು ಆಗಿದೆ. ಕಾಸಿಗೆ ತಕ್ಕ ಕಜ್ಜಾಯದಂತೆ ರೇಟು ಹೆಚ್ಚಿಗೆ ಕೊಟ್ಟಂತೆ accessory ಗಳು ಅವುಗಳ ಮೇಲೆ ದೊಡ್ಡದಾಗಿ ರಾರಾಜಿಸುವ brand ಹೆಸರುಗಳು.

ಧ್ವನಿ ನ ಕರ್ಕೊಂಡು ಮೀಟಿಂಗ್ ರೂಮಿಗೆ ನಡೆದೆ.

“ಧ್ವನಿ ಏನಾಗಿದೆ ನಿನಗೆ ಯಾರಾದ್ರೂ discrimination ಏನಾದ್ರೂ ತೋರ್ಸಿದ್ರ? Do you want to share?”

“Nothing ಹಿತಾ.”

“Then what went wrong in the cafeteria?”

“Nothing Hitha, I was just in some other mood”

“You know the alligations you made on Neha are serious?”

“ನಾನ್ ಏನು ಅಲ್ಲಿಗೇಶನ್ಸ್ ಮಾಡಿಲ್ಲ ಹಿತಾ, ನೇಹಾ ನನ್ ವಿಚಾರದಲ್ಲಿ ಸ್ವಲ್ಪ avoid ಮಾಡ್ತಾರೆ ಅದು ನಂಗೆ ಈ ತರ feel ಕೊಡ್ತು “

“ಧ್ವನಿ ಅದು ಹಾಗಲ್ವೋ, ನೀನ್ ಬರ್ಲಿಲ್ಲ ಅಂತ ಅವತ್ತು ಬಾಲಿ ಟ್ರಿಪ್ ಕ್ಯಾನ್ಸಲ್ ಮಾಡ್ಕೊಂಡ್ ಇದ್ವಿ ಅಲ್ವಾ?”

“ಹಿತಾ, ನಂಗೆ ನಿಮ್ ಅಷ್ಟು privilages ಇಲ್ಲ. ನಂಗೆ ನನ್ ಫ್ಯಾಮಿಲಿ ನ ನೋಡ್ಕೋ ಬೇಕು. ಮೊನ್ನೆ ಅಷ್ಟೇ ನನ್ education ಗೆ ಅಂತ ಇಟ್ಟಿದ್ದ ಅಮ್ಮನ ಒಡವೆ ನ ಒಂದೊಂದಾಗಿ ಬಿಡಿಸಿಕೊಳ್ತ ಇದೀವಿ.

ಇನ್ನೂ ಮನೆ ಕಟ್ ಬೇಕು.”

“ಅದೆಲ್ಲ ನಮ್ಗೆ ಗೊತ್ತಿಲ್ವಾ, ಅವಳ ಬೇಜಾರು ಏನಂದ್ರೆ, ನಾವೇ share ಮಾಡ್ಕೊತಿವಿ ಅಂತ ಹೇಳಿದ್ಲು ಅಲ್ವಾ.. ಆದ್ರೂ ನೀನ್ ಒಪ್ಪಿಲ್ಲ ಅಂತ ಅವ್ಳಿಗೆ ಸಿಟ್ಟಿತ್ತು ಅಷ್ಟೇ”

“ನಂಗೂ ಸ್ವಾಭಿಮಾನ ಅಂತ ಇರುತ್ತೆ ಅಲ್ವಾ ಹಿತಾ? ಅದು ಹೇಗೆ ಅದನ್ನೆಲ್ಲ accept ಮಾಡ್ಕೊಳೋಕೆ ಆಗುತ್ತೆ ಹೇಳಿ ನೀವೇ?

ನೀವೆಲ್ಲ ರೆಡ್ ರೈನೊ ಪಬ್ಬಲ್ಲಿ, ಬರುವ ಲಕ್ಷ ಲಕ್ಷ ಸಂಬಳದಲ್ಲಿ ಸಾವಿರಾರು ರೂಪಾಯಿಗಳನ್ನು ಕಳೆಯುತ್ತೀರಿ. ಆದ್ರೆ ನಾನು ಅದೇ  ದುಡ್ಡು ಮಿಕ್ಕಿದ್ರೆ ಎಲ್ಲಾದ್ರೂ ಚೀಟಿ ಹಾಕ್ ಬೋದು ಅಂತ ಯೋಚ್ನೆ ಮಾಡ್ತೀನಿ. ನೀವೇ ಬಿಲ್ ಪೇ ಮಾಡಿದ್ರು ನಾನು ಯಾವಾಗಾದ್ರು ಒಮ್ಮೆ ಆದ್ರೂ ನಿಮ್ಗೆ ಪೇ ಮಾಡಿಲ್ಲ ಅನ್ನೋ guilt ಇರುತ್ತೇ. ಇದೇ reason ಗೆ ನಾನು ನಿಮ್ ಪಾರ್ಟಿ ಗೆ ಬರಲ್ಲ.”

“ಇಷ್ಟೇ ತಾನೇ ಧ್ವನಿ? ಸೀರಿಯಸ್ ಆಗಿ ಎಲ್ಲೂ ನಿಂಗೆ discrimination face ಆಗಿಲ್ಲ ಅಲ್ವಾ?”

“ಇಲ್ಲ ಹಿತಾ”

———-

ಆ ಸಂಜೆ ನಮ್ಮೆಲ್ಲರಿಗೂ ನೇಹಾಳ ಮನೆಯಿಂದ ಪಾರ್ಟಿ ಗೆ invite ಒಂದು ಬಂದಿತ್ತು.

ನೇಹಾ ಮತ್ತು ಧ್ವನಿ ನಗುತ್ತಾ ಅಡುಗೆ ಮನೆಯೊಳಗೆ ಹೋದರು.

ನಾನೂ ಆಕಾಂಕ್ಷ ಮೊದಲ ಬಾರಿಗೆ MRP ಶಾಪ್ ಹುಡ್ಕೊಂಡು ಹೋಗಿದ್ವಿ.

ಮತ್ತೆ ಬಂದು ಎಲ್ಲರೂ ಒಟ್ಟಿಗೆ ಕೂತು ಮಾತಾಡ್ತಾ ಇದ್ದಾಗ ಸೆಂಥಿಲ್ ನಿಂದ ಅವನ ತಂಗಿಯ ಮದುವೆಯ ಆಮಂತ್ರಣ ಬಂದಿತು. ಮದುವೆ ಕೊಯಂಬತೂರಿನಲ್ಲಿತ್ತು. 

Destination ಮದುವೆ ಎಲ್ಲರೂ ಧ್ವನಿ ಯ ಕಡೆ ನೋಡಿದ್ದೆವು.

“ಇಲ್ಲಿಂದ ಟ್ರೈನ್  ಇದೆ. ನೀವೆಲ್ಲ ಟ್ರೈನ್ ನಲ್ಲಿ ಬರೋದಾದ್ರೆ ನಾನು ready” ಅಂದ್ಳು… ಸರಿ ಎಲ್ಲರೂ ಖುಷಿಯಿಂದ “cheers to Senthil” ಎಂದೆವು….

ಹೀಗೆ ನಗುತ್ತಾ outlook ತೆರೆದೆ. R&D lab establish ಮಾಡೋಕೆ US ನಿಂದ ಒಂದು ತಂಡ ಬರ್ತಾ ಇದೆ. ಆ project ನಲ್ಲಿರುವ ನನ್ಗೂ ಆಕಾಂಕ್ಷ ಇಬ್ರಿಗೂ inclusion training ಕೊಡ್ತಾ ಇದಾರೆ…ನಾಳೆ ಇಂದ ನಾಲ್ಕು ದಿನ.

ಏನಿದು ಎಂದೆ. ಬರ್ತಾ ಇರೋರಲ್ಲಿ delegates ಒಬ್ರು transwoman. ಇನ್ನೊಬ್ಬರು ಆಫ್ರಿಕನ್. So ಅವ್ರ ಜೊತೆ ಇರೋವಾಗ sensible ಆಗಿ ಹೇಗೆ ಇರ್ಬೇಕು ಅಂತ training ಇದು.

ಮನುಷ್ಯರನ್ನು ಮನುಷ್ಯರ ತರ ಟ್ರೀಟ್ ಮಾಡೋಕೆ ಟ್ರೈನಿಂಗ್ ಬೇಕಾ?

Violence, dominance ಮತ್ತೆ discrimination ಇಲ್ಲದ ಪ್ರಪಂಚ ದ ಕನಸು ಕಾಣ್ತಾ ಇದೀನಿ ನಾನು…..

ಕಾವ್ಯಶ್ರೀ

ದೊಡ್ಡಬಳ್ಳಾಪುರದ ಇವರು ಸಾಫ್ಟ್‌ವೇರ್ ಇಂಜಿನಿಯರ್

Related Articles

ಇತ್ತೀಚಿನ ಸುದ್ದಿಗಳು