Thursday, June 20, 2024

ಸತ್ಯ | ನ್ಯಾಯ |ಧರ್ಮ

Commonwealth game ಟಿ20: ಆಸ್ಟ್ರೇಲಿಯಾಗೆ ಮಣಿದ ಭಾರತ

ಬರ್ಮಿಂಗ್‌ಹ್ಯಾಮ್‌ಕಾಮನ್‌ವೆಲ್ತ್ ಕ್ರೀಡಾಕೂಟದ ಮೊದಲ ಟಿ20 ಕ್ರಿಕೆಟ್‌ ಪಂದ್ಯದಲ್ಲಿ  ಭಾರತೀಯ ಮಹಿಳಾ ತಂಡ, ಆಸ್ಟ್ರೇಲಿಯಾ ತಂಡದ ವಿರುದ್ದ ಮಣಿದಿದೆ.

ಇದೇ ಮೊದಲ ಬಾರಿ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಮಹಿಳಾ ಕ್ರಿಕೆಟ್‌ ಸೇರ್ಪಡೆ ಮಾಡಲಾಗಿದ್ದು, ಮಹಿಳಾ ಟಿ20 ಕ್ರಿಕೆಟ್‌ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಕಣಕ್ಕಿಳಿದ ಭಾರತ ಮತ್ತು ಆಸ್ಟ್ರೇಲಿಯಾ ಮಹಿಳಾ ತಂಡಗಳು ಪರಸ್ಪರ ಸೆಣಸಿದವು.

 ಎಜ್‌ಬಾಸ್ಟನ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 154 ರನ್‌ ಕಲೆಹಾಕಿತ್ತು.

ಸ್ಫೋಟಕ ಬ್ಯಾಟಿಂಗ್‌ ನಡೆಸಿದ ಓಪನರ್‌ ಸ್ಮೃತಿ ಮಂಧಾನಾ, 17 ಎಸೆತಗಳಲ್ಲಿ 5 ಫೋರ್‌ಗಳ ಬಲದೊಂದಿಗೆ 24 ರನ್‌ ಸಿಡಿಸಿ, ವೇಗಿ ಡಾರ್ಸಿ ಬ್ರೌನ್‌ ಅವರ ಬೌಲಿಂಗ್‌ ದಾಳಿಗೆ ಔಟಾಗಿ ಪೆವಿಲಿಯನ್‌ ಸೇರಿದರು. ಹಾಗೆಯೇ ಶೆಫಾಲಿ ವರ್ಮಾ, 33 ಎಸೆತಗಳಲ್ಲಿ 9 ಫೋರ್‌ಗಳೊಂದಿಗೆ 48 ರನ್‌ಗಳಿಸಿ ಕೇವಲ 2 ರನ್‌ಗಳ ಅಂತರದಲ್ಲಿ ಅರ್ಧಶತಕದಿಂದ ವಂಚಿತರಾದರು. ಇನ್ನೂ ಪಂದ್ಯದಲ್ಲಿ ಜವಬ್ದಾರಿಯುತ ಆಟವಾಡಿದ ಕ್ಯಾಪ್ಟನ್‌ ಹರ್ಮನ್‌ಪ್ರೀತ್‌ ಕೌರ್‌, ಎದುರಿಸಿದ 34 ಎಸೆತಗಳಲ್ಲಿ 8 ಫೋರ್‌ ಮತ್ತು 1 ಸಿಕ್ಸರ್‌ನೊಂದಿಗೆ 52 ರನ್‌ ಸಿಡಿಸುವ ಮೂಲಕ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಅರ್ದಶತಕ ಬಾರಿಸಿದ ಮೊಟ್ಟ ಮೊದಲ ಮಹಿಳಾ ಕ್ರಿಕೆಟರ್ ಎಂಬ ದಾಖಲೆಗೆ ಕಾರಣದಾರು.

ನಂತರ 154 ರನ್ ಗಳನ್ನ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ, ವೇಗದ ಬೌಲರ್‌ ರೇಣುಕಾ ಸಿಂಗ್‌ ಅವರ ಬೌಲಿಂಗ್‌ ದಾಳಿಗೆ ಸಿಲುಕಿ ಸಂಕಷ್ಟ ಎದುರಿಸಿತು. 49 ರನ್‌ಗಳಲ್ಲಿ 5 ವಿಕೆಟ್‌ಗಳನ್ನ ಕಳೆದುಕೊಂಡ ಆಸ್ಟ್ರೇಲಿಯಾ ತಂಡ ಸೋಲಿನಕಡೆ ಮುಖದೋರಿತು. ನಂತರ ಕಣಕ್ಕಿಳಿದ ಆಷ್ಲೇ ಗಾರ್ಡ್ನರ್‌, 35 ಎಸೆತಗಳಲ್ಲಿ 9 ಫೋರ್‌ಗಳೊಂದಿಗೆ ಅಜೇಯ 52 ರನ್‌ ಗಳಿಸಿದರು. ಅವರೊಟ್ಟಿಗೆ ಸಿಡಿಲಬ್ಬರದ ಬ್ಯಾಟಿಂಗ್‌ ನಡೆಸಿದ ಗ್ರೇಸ್‌ ಹ್ಯಾರಿಸ್‌, 20 ಎಸೆತಗಳಲ್ಲಿ 5 ಫೋರ್‌ ಮತ್ತು 2 ಸಿಕ್ಸರ್‌ಗಳೊಂದಿಗೆ 37 ರನ್‌ಗಳಿಸಿ ಭಾರತ ತಂಡದ ಗೆಲುವಿನ ಆಸೆಯನ್ನು ಬುಡಮೇಲು ಮಾಡಿ 3 ವಿಕೆಟ್‌ಗಳಿಂದ ಜಯಗಳಿಸಿತು. 

ಸಂಕ್ಷಿಪ್ತ ಸ್ಕೋರ್ ವಿವರ
ಭಾರತ: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 154 ರನ್‌ (ಸ್ಮೃತಿ ಮಂಧಾನಾ 24, ಶೆಫಾಲಿ ವರ್ಮಾ 48, ಹರ್ಮನ್‌ಪ್ರೀತ್‌ ಕೌರ್‌ 52: ಜೆಸ್‌ ಜೊನಾಸೆನ್‌ 24ಕ್ಕೆ 4, ಮೆಗಾನ್‌ ಶುಟ್‌ 26ಕ್ಕೆ 2).
ಆಸ್ಟ್ರೇಲಿಯಾ: 19 ಓವರ್‌ಗಳಲ್ಲಿ 7 ವಿಕೆಟ್‌ಗೆ 157 ರನ್‌ (ಆಷ್ಲೇ ಗಾರ್ಡ್ನರ್‌ 52, ಗ್ರೇಸ್‌ ಹ್ಯಾರಿಸ್‌ 37; ರೇಣುಕಾ ಸಿಂಗ್‌ 18ಕ್ಕೆ 4, ದೀಪ್ತ ಶರ್ಮಾ 24ಕ್ಕೆ 2).
ಪಂದ್ಯಶ್ರೇಷ್ಠ: ಆಷ್ಲೇ ಹ್ಯಾರಿಸ್

Related Articles

ಇತ್ತೀಚಿನ ಸುದ್ದಿಗಳು