Wednesday, September 3, 2025

ಸತ್ಯ | ನ್ಯಾಯ |ಧರ್ಮ

ಒಳ ಮೀಸಲಾತಿ ಜಾರಿ ಹಿನ್ನೆಲೆ ನಗರದಲ್ಲಿ ಪಟಾಕಿ ಸಂಭ್ರಮಿಸಿದ ಸಮುದಾಯದ ನಾಯಕರು

ಹಾಸನ : ರಾಜ್ಯ ಸರಕಾರದಿಂದ ಒಳ ಮೀಸಲಾತಿ ಜಾರಿಗೊಂಡ ಹಿನ್ನಲೆಯಲ್ಲಿ ನಗರದ ಹೇಮಾವತಿ ಪ್ರತಿಮೆ ಮುಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹೆಚ್. ಆಂಜನೇಯ ಬೃಹತ್ ಕಟೌಟ್ ಗೆ ಹಾಲಿನ ಅಭಿಷೇಕ ಹಾಗೂ ಪುಷ್ಪಾರ್ಚನೆ ನೆರವೇರಿಸಿ ಪಟಾಕಿ ಸಿಡಿಸಿ ಡೋಲು ಭಾರಿಸಿ ನೃತ್ಯ ಮಾಡಿದರು.ಇದೆ ವೇಳೆ ಹಿರಿಯ ಮುಖಂಡ ಹೆಚ್.ಪಿ. ಶಂಕರರಾಜು ಮಾಧ್ಯಮದೊಂದಿಗೆ ಮಾತನಾಡಿ, ನಾವು ಪರಿಶಿಷ್ಟ ಜಾತಿಯಲ್ಲಿ ಮಾದಿಗ ಜನಾಂಗ, ಸಂಪೂರ್ಣವಾಗಿ ಹಿಂದೆ ಇದೆ ಎಂದು ಯಾವುದೆ ರೀತಿಯ ಅಭಿವೃದ್ಧಿ ಹೊಂದಿರುವುದಿಲ್ಲ. ಒಳ ಮೀಸಲಾತಿ ಜಾರಿಗಾಗಿ ನಾವು ಕಳೆದ ೩೦ ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ. ಆ ಹೋರಾಟದ ಫಲವಾಗಿ ೨೦೨೪ ಆಗಸ್ಟ್ ೧ ರಂದು ಸುಪ್ರಿಂ ಕೋರ್ಟ್ ಆದೇಶ ನೀಡಿದ್ದು, ಆಯಾ ರಾಜ್ಯಕ್ಕೆ ಒಳ ಮೀಸಲಾತಿ ಹಂಚಿಕೆ ಮಾಡಿದ್ದು, ಆಯಾ ರಾಜ್ಯಕ್ಕೆ ಸಂಬಂಧಿಸಿದೆ ಎಂದಿದ್ದರು. ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಗಮೋಹನ್ ದಾಸ್ ಆಯೋಗ ರಚನೆ ಮಾಡಿ ಇದನ್ನ ಎಸ್.ಸಿ, ಎಸ್.ಟಿ.ಯಲ್ಲಿ ಮಾದಿಗ, ಹೊಲಯ, ಕೊರಮ, ಕೊರ್ಮ. ಕೊಂಚ, ಲಂಬಾಣಿ, ಸಿಳ್ಳೆಕ್ಯಾತ ಇವೆಲ್ಲಾ ಬಿಟ್ಟು ಸಮೀಕ್ಷೆಯಲ್ಲಿ ಮನೆ ಮನೆಗೆ ಹೋಗಿ ಮಾದಿಗ ಎಂದು ಬರೆಸಲು ಮಾಜಿ ಸಚಿವ ಹೆಚ್. ಆಂಜನೇಯ ಅವರು ನಮಗೆ ಸಲಹೆ ನೀಡಿದರು. ಇಡೀ ರಾಜ್ಯವನ್ನ ಅವರು ಸುತ್ತಿ ಸಿದ್ದರಾಮಯ್ಯ ಅವರಿಗೆ ಬಲಗೈ ಬಂಟರಾಗಿ ಇಂದು ಮೀಸಲಾತಿ ಸಿಗುವುದಕ್ಕೆ ಅವಕಾಶ ಸಿಕ್ಕಿದೆ ಎಂದರು. ಹಿರಿಯ ನಾಯಕರಾದ ಕೇಂದ್ರ ಮಂತ್ರಿ ಮುನಿಯಪ್ಪ ಅವರು ಸಿಎಂ ಅವರಿಗೆ ಒತ್ತಡ ಹಾಕಿ ಮೀಸಲಾತಿ ವರ್ಗಿಕರಣಕ್ಕೆ ಒತ್ತಾಯಿಸಿದರು. ಕ್ಯಾಬಿನೆಟ್ ತೀರ್ಮಾನ ತೆಗೆದುಕೊಂಡಂತೆ ಮಾದಿಗ ಮತ್ತು ಉಪ ಜಾತಿಗೆ ೬ ಪರ್ಸೆಂಟ್, ಹೊಲಯ ಮತ್ತು ಉಪ ಜಾತಿಗೆ ೬ ಪಸೇಂಟ್, ಇನ್ನುಳಿದ ಜಾತಿಗೆ ೫ ಪರ್ಸೆಂಟ್ ಎಂದು ತೀರ್ಮಾನವಾಯಿತು. ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹೆಚ್. ಆಂಜನೇಯ ಅವರಿಗೆ ಹಾಲಿನ ಅಭಿಷೇಕ ಮಾಡಿ ಅಭಿನಂಧನೆ ಸಲ್ಲಿಸಲಾಗಿದೆ ಎಂದು ಹೇಳಿದರು.

ಇದೆ ವೇಳೆ ವಸಂತ ಕುಮಾರ್, ದೇಶಾಣೀ ಶಂಕರಪ್ಪ, ರಾಜು, ಅರಸಪ್ಪ, ಭಾಸ್ಕರ್, ಶ್ರೀನಿವಾಸ್, ವೆಂಕಟೇಶ್, ಮಂಜುನಾಥ್, ಪ್ರದೀಪ್, ರವೀಂದ್ರ, ರಂಗನಾಥ್ ಸೇರಿದಂತೆ ಇತರರು ಇದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page