Friday, November 8, 2024

ಸತ್ಯ | ನ್ಯಾಯ |ಧರ್ಮ

ಸಂಸದ ತೇಜಸ್ವಿ ಸೂರ್ಯ ಹಾಗೂ ಎರಡು ಸುದ್ದಿತಾಣಗಳ ವಿರುದ್ಧ ಪ್ರಕರಣ ದಾಖಲು

ಹಾವೇರಿ: ವಕ್ಫ್‌ ವಿವಾದಕ್ಕೆ ಸಂಭಂಧಿಸಿದಂತೆ ಸುಳ್ಳು ಸುದ್ದಿ ಹಂಚಿಕೊಂಡ ಆರೋಪದ ಮೇಲೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಹಾಗೂ ಎರಡು ಸುದ್ದಿ ತಾಣಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಕುರಿತು ಹಾವೇರಿಯ ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿ ನ್ಯೂಸ್‌ ಮಾನಿಟರಿಂಗ್‌ ಸೆಲ್ಲಿನಲ್ಲಿ ಕೆಲಸ ಮಾಡುವ ಸುನಿಲ ಎನ್ನುವವರು ನೀಡಿದ ದೂರನ್ನು ಆಧರಿಸಿ ಪೊಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನೆಯ ಹಿನ್ನೆಲೆ

ನಿನ್ನೆ ಮಧ್ಯಾಹ್ನ 1:00 ಗಂಟೆ ಸುಮಾರಿಗೆ E-Paper ಕನ್ನಡ ದುನಿಯಾ ಹೆಸರಿನ ಸುದ್ದಿ ತಾಣದಲ್ಲಿ, “”Breaking: ಜಮೀನಿನ ಪಹಣಿಯಲ್ಲಿ ವಕ್ಷ ಹೆಸರು ನಮೂದು: ಹಾವೇರಿಯಲ್ಲಿ ರೈತ ಆತ್ಮಹತ್ಯೆ ಎಂಬ ಶಿರ್ಷಿಕೆ ಅಡಿಯಲ್ಲಿ ಹಾವೇರಿ: ಜಮೀನಿನ ಪಹಣಿಯಲ್ಲಿ ಪಕ್ಷ ಹೆಸರು ನಮೂದಾಗಿದ್ದಕ್ಕೆ ಹಾವೇರಿಯಲ್ಲಿ ಮನನೊಂದು ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎನ್ನುವ ಸುದ್ದಿ ಪ್ರಕಟವಾಗಿತ್ತು.

ಹಾವೇರಿ ಜಿಲ್ಲೆಯ ಹರನಗಿ ಗ್ರಾಮದ ರೈತ ಚನ್ನಪ್ಪ ಎಂಬುವವರ ಪುತ್ರ ರುದ್ರಪ್ಪ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪ ಮಾಡಿದ್ದಾರೆ 4 ಎಕರೆ ಹೊಲದ ಪಹಣಿಯಲ್ಲಿ ವಕ್ಷ ಹೆಸರು ನಮೂದಾಗಿದ್ದಕ್ಕೆ ಅವರು ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಘಟನೆ ಹಿನ್ನಲೆ ಗ್ರಾಮದ ಜನರು ಆಕ್ರೋಶ ಹೊರ ಹಾಕಿದ್ದಾರೆ” ಎಂದು ಸುದ್ದಿ ಮಾಡಲಾಗಿತ್ತು.

ಇದೇ ಸುದ್ದಿಯನ್ನು ಕನ್ನಡ ನ್ಯೂಸ್‌ ಎನ್ನುವ ತಾಣವೂ ಶೇರ್‌ ಮಾಡಿತ್ತು.

ನಂತರ ಇದರ ಸ್ಕ್ರೀನ್‌ ಶಾಟ್‌ ಲಗತ್ತಿಸಿ ಸಂಸದ ತೇಜಸ್ವಿ ಸೂರ್ಯ ತಮ್ಮ ಎಕ್ಸ್‌ ಖಾತೆಯಲ್ಲಿ ಈ ವಿಷಯವನ್ನು ಪೋಸ್ಟ್‌ ಮಾಡಿದ್ದರು. ಅವರು ತಮ್ಮ ಪೋಸ್ಟಿನಲ್ಲಿ “ಸಿದ್ದರಾಮಯ್ಯ ಹಾಗೂ ಜಮೀರ್‌ ಅಹ್ಮದ್‌ ಅವರ ನಿರ್ಧಾರದಿಂದಾಗಿ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ” ಎನ್ನುವ ಅರ್ಥ ಬರುವಂತೆ ಪೋಸ್ಟ್‌ ಮಾಡಿದ್ದರು.

ನಂತರ ಹಾವೇರಿಯ ಪೊಲೀಸ್‌ ಇಲಾಖೆ ಇದನ್ನು ಸುಳ್ಳು ಎಂದು ಸ್ಪಷ್ಟಪಡಿಸಿತ್ತು. ಇದಾದ ನಂತರ ಸಂಸದ ತಮ್ಮ ಟ್ವೀಟ್‌ ಅಳಿಸಿದ್ದಾರೆ.

ಇದೀಗ ಹಾವೇರಿಯ ಸೆನ್‌ (CEN) ಠಾಣೆಯಲ್ಲಿ ಸಂಸದ ಹಾಗೂ ಸುದ್ದಿ ಪ್ರಕಟಿಸಿದ ಸುದ್ದಿ ತಾಣಗಳ ವಿರುದ್ಧ BNS 353 (2) ರ ಅಡಿ ಪ್ರಕರಣ ದಾಖಲಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page