Saturday, December 28, 2024

ಸತ್ಯ | ನ್ಯಾಯ |ಧರ್ಮ

ಮಾಜಿ ಪ್ರಧಾನಿ ಮೋಹನ್ ಸಿಂಗ್ – ಹಿರಿಯ ಪತ್ರಕರ್ತ ನಿಧನಕ್ಕೆ ಸಂತಾಪ

ಹಾಸನ: ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ 92 ವರ್ಷ ಮತ್ತು ಆಲೂರು ತಾಲೂಕು ಪತ್ರಕರ್ತ ಸುರೇಶ್ 54 ವರ್ಷ ನಿಧನರಾದ ಹಿನ್ನಲೆಯಲ್ಲಿ ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸಂಘದವತಿಯಿಂದ ಎರಡು ನಿಮಿಷ ಮೌನ ಆಚರಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಇದೆ ವೇಳೆ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಕೆ.ಹೆಚ್. ವೇಣುಕುಮಾರ್ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಮನ್ ಮೋಹನ್ ಅವರ ಆಡಳಿತವಧಿಯಲ್ಲಿ ಸಲ್ಲಿಸಿದ ಸೇವೆಯನ್ನು ದೇಶ ಸ್ಮರಿಸಬೇಕಾಗಿದೆ. ಅಂತಹ ಆರ್ಥಿಕ ತಜ್ಞನನ್ನು ನಾವು ಇವತ್ತು ಕಳೆದುಕೊಂಡಿದ್ದೇವೆ. ಮಾಜಿ ಪ್ರಧಾನಿ ನಿಧನದ ಹಿನ್ನಲೆಯಲ್ಲಿ ಶುಕ್ರವಾರ ಗಾಂಧಿ ಭವನದಲ್ಲಿ ಜಿಲ್ಲಾ ಪತ್ರಕರ್ತರ ಸಂಘದಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದರು. ಇದೆ ಪ್ರಪ್ರಥಮ ಬಾರಿಗೆ ಮಾಜಿ ಪ್ರಧಾನಿ ನಿಧನಕ್ಕೆ ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಶ್ರದ್ಧಾಂಜಲಿ ಸಭೆ ಏರ್ಪಡಿಸಲಾಗಿದೆ. ಅವರ, ಸರಳತೆ, ಮುಗ್ಧತೆ ಎಲ್ಲಾರಿಗೂ ಇಷ್ಟವಾಗಿದೆ. 10 ವರ್ಷಗಳ ಕಾಲ ಪ್ರಧಾನಿಯಾದಾಗ ಯಾವ ಕಪ್ಪು ಚುಕ್ಕಿ ಇಲ್ಲದೇ ಆಡಳಿತ ನಡೆಸಿರುವುದನ್ನು ನೋಡಿದ್ದೇವೆ. ಮೊದಲ ಅವಧಿಯಲ್ಲಿ ಯಾವ ಕಪ್ಪು ಚುಕ್ಕಿ ಇಲ್ಲದಿದ್ದರೂ ಎರಡನೇ ಅವಧಿಗೆ ಪ್ರಧಾನಿ ಆದಾಗ ಅವರು ಪ್ರಧಾನಿಯಾಗಿ ಕಪ್ಪು ಚುಕ್ಕಿ ಬರುವಾಗೆ ನಡೆದುಕೊಳ್ಳದಿದ್ದರೂ ಅವರು ಬೇರೆಯವರ ಕೈಗೊಂಬೆ ರೀತಿಯಲ್ಲಿ ಉಂಟಾದಗ ಹಲವಾರು ಹಗರಣಗಳು ಸೃಷ್ಠಿಯಾಯಿತು. ಅವರ ಅವಧಿಯಲ್ಲಿ ಹಗರಣ ನಡೆದಿದೆ ಎಂಬುವುದು ಮಾತ್ರ ವಿಪರ್ಯಾಸ ಎಂದು ಬೇಸರವ್ಯಕ್ತಪಡಿಸಿದರು. ಅದನ್ನ ಹೊರತು ಪಡಿಸಿದರೇ ಅವರಂತಹ ಮಹಾನ್ ಆರ್ಥಿಕ ತಜ್ಞರನ್ನು ಮತ್ತೆ ಕಾಣಲು ಸಾಧ್ಯವಿಲ್ಲ ಎನ್ನುವ ಪರಿಸ್ಥಿತಿಯಲ್ಲಿ ಇವತ್ತು ಇದೆ ಎಂದು ಹೇಳಿದರು. ಹಿರಿಯ ಪತ್ರಕರ್ತ ಆಲೂರು ಸುರೇಶ್ ನಮ್ಮೊಳಗೆ ಒಬ್ಬ ಪತ್ರಕರ್ತರಾಗಿದ್ದರು. ಇತನ ತಂದೆ ನಾಗರಾಜು ಕಲಾವಿದರು ಕೂಡ ಆಗಿದ್ದರು. ಮೃತರಾದ ಸುರೇಶ್ ಅವರು ಬಡತನದಿಂದ ಬಂದವರು. ಬಹಳ ವರ್ಷದಿಂದ ಪತ್ರಿಕೋಧ್ಯಮದಲ್ಲಿ ಸೇವೆ ಸಲ್ಲಿಸಿದ್ದಾರೆ. ಈ ಕ್ಷೇತ್ರಕ್ಕೆ ತಮ್ಮದೆಯಾದ ಕೊಡುಗೆ ಕೊಟ್ಟಿರುವುದಾಗಿ ಇದೆ ವೇಳೆ ನೆನಪಿಸಿಕೊಂಡರು.
ಇದೆ ವೇಳೆ ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಬಿ.ಆರ್. ಉದಯಕುಮಾರ್, ಮಾಜಿ ಅಧ್ಯಕ್ಷೆ ಲೀಲಾವತಿ, ಮಾತನಾಡುತ್ತಾ, ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ಉತ್ತಮ ವ್ಯಕ್ತಿತ್ವ ಹೊಂದಿದ್ದರು. ದೀಪದ ಬೆಳಕಿನಲ್ಲಿ ಓದಿ ಕಡು ಬಡತನದಲ್ಲಿ ಬಂದವರು. ಅವೆರಂತಹ ಜ್ಞಾನಿ ಪ್ರಧಾನಿ ಸಿಗುವುದಿಲ್ಲ. ಡಾಕ್ಟರೇಟ್ ಪದವಿ ಪಡೆದಿದ್ದರು. ಪ್ರಧಾನಿ ಆಗಿದ್ದ ನರಸಿಂಹರಾವ್ ಅವರೆ ಮೇದವಿ ಅಂದುಕೊAಡಿದ್ದೇವು. ಅವರಿಗಿಂದ ಹೆಚ್ಚಿನ ಜ್ಞಾನ ಹೊಂದಿದ್ದ ಎಲ್ಲಾರ ಅಚ್ಚುಮೆಚ್ಚಿನ ರಾಜಕಾರಣಿ ಎಂದು ಇದೆ ವೇಳೆ ಬಣ್ಣಿಸಿದರು. ವಾಜಪೇಯಿ ಬಿಟ್ಟರೇ ಇಡೀ ರಾಜಕಾರಣದಲ್ಲೆ ಮನೆ ಮೋಹನ್ ಸಿಂಗ್ ಅವರನ್ನು ಅಜಾತ ಶತ್ರು ಎಂದು ಕರೆಯಬಹುದು. ಎಲ್ಲಾರೊಂದಿಗೆ ಸಾಮರಸ್ಯದಿಂದ ಇದ್ದವರು ಎಂದು ಹೇಳಿದರು. ಅವರ ಆತ್ಮಕ್ಕೆ ಶಾಂತಿ ಆಗಲಿ ಎಂದು ಇದೆ ವೇಳೆ ಪ್ರಾರ್ಥಿಸಿದರು.
ಶ್ರದ್ಧಾಂಜಲಿ ಸಭೆಯಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಹೆಚ್.ಟಿ. ಮೋಹನ್ ಕುಮಾರ್, ಕೆ.ಎಂ. ಹರೀಶ್, ಪ್ರಧಾನ ಕಾರ್ಯದರ್ಶಿ ಬಿ.ಸಿ. ಶಶಿಧರ್, ಕಾರ್ಯದರ್ಶಿ ನಟರಾಜು ಇತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page