Friday, June 14, 2024

ಸತ್ಯ | ನ್ಯಾಯ |ಧರ್ಮ

ಎರಡು ಬಣಗಳ ನಡುವೆ ಸಂಘರ್ಷ: 30ಕ್ಕು ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲು

ಮುಂಬೈ: ಗಣೇಶ ವಿಸರ್ಜನೆಯ ವೇಳೆ ದಾದರ್ ಪ್ರದೇಶದಲ್ಲಿ ಏಕನಾಥ್ ಶಿಂಧೆ ಬಣ ಮತ್ತು ಉದ್ಧವ್ ಠಾಕ್ರೆ ಬಣದ ಕಾರ್ಯಕರ್ತರ ನಡುವೆ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಾಗಿ ಘರ್ಷಣೆ ನಡೆದಿದ್ದು, ಉದ್ಧವ್ ಠಾಕ್ರೆ ಬಣದ 5 ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಈ ಹಿನ್ನಲೆಯಲ್ಲಿ 30ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ವಾಗ್ವಾದದಲ್ಲಿ ಪೊಲೀಸ್ ಠಾಣೆಯ ಹೊರಗೆ ಗುಂಡು ಹಾರಿಸಿರುವ ಕಾರಣ, ಮುಂಬೈ ಶಾಸಕ ಸದಾ ಸರವಣಕರ್ ಮತ್ತು ಅವರ ಮಗ ಮತ್ತು ಇತರ 6 ಜನರ ಮೇಲೆ ಪೊಲೀಸರು ಗಲಭೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಘರ್ಷಣೆ ಹಿನ್ನಲೆ ಐಪಿಸಿ ಸೆಕ್ಷನ್‌ 395 ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಬಂಧಿಸಿದ್ದ ಶಿವಸೇನೆಯ 5 ಜನ ಕಾರ್ಯಕರ್ತರಿಗೆ ಎಫ್‌ಐಆರ್‌ ನಿಂದ ಸೆಕ್ಷನ್ 395 ಅನ್ನು ತೆಗೆದುಹಾಕುವ ಮೂಲಕ ರಿಲೀಫ್ ನೀಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು