Home ರಾಜ್ಯ ಭೂ ಮಂಜೂರಾತಿ ತಡೆ: ಕಾಂಗ್ರೆಸ್ ́ದ್ವೇಷದ ರಾಜಕಾರಣ ಮಾಡುತ್ತಿದೆʼ ಎಂದ ಬಿಜೆಪಿ

ಭೂ ಮಂಜೂರಾತಿ ತಡೆ: ಕಾಂಗ್ರೆಸ್ ́ದ್ವೇಷದ ರಾಜಕಾರಣ ಮಾಡುತ್ತಿದೆʼ ಎಂದ ಬಿಜೆಪಿ

0

ಬೆಂಗಳೂರು: RSS ಅಂಗ ಸಂಸ್ಥೆಯಾದ ಜನಸೇವಾ ಟ್ರಸ್ಟಿಗೆ ಹಿಂದಿನ ಸರಕಾರ ಮಂಜೂರು ಮಾಡಿದ್ದ ಭೂಮಿಯನ್ನು ಈಗಿನ ಸರಕಾರ ವಾಪಾಸ್‌ ಪಡೆಯಲು ನಿರ್ಧರಿಸಿರುವುದಕ್ಕಾಗಿ ಬಿಜೆಪಿಯು ಕಾಂಗ್ರೆಸ್‌ ಪಕ್ಷದ ವಿರುದ್ಧ ಕಿಡಿ ಕಾರಿದ್ದು, ಇದನ್ನು “ದ್ವೇಷದ ರಾಜಕೀಯ” ಎಂದು ಕರೆದಿದೆ. 

“RSS ಸಂಘಟನೆಯೊಡನೆ ಸಂಪರ್ಕ ಹೊಂದಿದೆ ಎಂಬ ಕಾರಣಕ್ಕೆ ಸಂಸ್ಥೆಗೆ ನೀಡಲಾದ ಭೂಮಿಯನ್ನು ತಡೆಹಿಡಿಯುವ ಮೂಲಕ ಕಾಂಗ್ರೆಸ್ ಕೀಳು ಮಟ್ಟದ ರಾಜಕಾರಣಕ್ಕೆ ಇಳಿದಿದೆ. ಈ ನಿರ್ಧಾರವು ಅವೈಜ್ಞಾನಿಕ, ಆಧಾರರಹಿತ ಮತ್ತು ದ್ವೇಷದ ರಾಜಕೀಯಕ್ಕೆ ಸಮನಾಗಿದೆ. ಇದನ್ನು ನಾನು ಬಲವಾಗಿ ಖಂಡಿಸುತ್ತೇನೆ” ಎಂದು ಹಿರಿಯ ಬಿಜೆಪಿ ಶಾಸಕ ಆರ್ ಅಶೋಕ್ ಹೇಳಿದರು, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಇದರ ಪರಿಣಾಮಗಳನ್ನು ಎದುರಿಸಲಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಜನಸೇವಾ ಟ್ರಸ್ಟಿಗೆ ಭೂಮಿಯನ್ನು ಮಂಜೂರು ಮಾಡಿದ್ದ ಸಮಯದಲ್ಲಿ ಅಶೋಕ ಕಂದಾಯ ಸಚಿವರಾಗಿದ್ದರು.

“ನಮ್ಮ ಸರ್ಕಾರವಿದ್ದ ಸಮಯದಲ್ಲಿ, ಭೂಮಿಯನ್ನು ರಾಷ್ಟ್ರೋತ್ಥಾನ ಪರಿಷತ್ತಿಗೆ ನೀಡಲಾಗಿತ್ತು. ಹೀಗೆ ನಾವು ಮಾತ್ರ ಭೂಮಿ ನೀಡಿಲ್ಲ, 30-40 ವರ್ಷಗಳ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಮಯದಲ್ಲಿ ಚನ್ನೇನಹಳ್ಳಿಯಲ್ಲಿ ಭೂಮಿಯನ್ನು ನೀಡಿತ್ತು. ಪ್ರಸ್ತುತ ರಾಷ್ಟ್ರೋತ್ಥಾನ ಪರಿಷತ್‌ ಅಲ್ಲಿ ಗ್ರಾಮೀಣ ಜನರಿಗೆ ಸೇವೆ ಸಲ್ಲಿಸುವ ಗುಣಮಟ್ಟದ, ಕೈಗೆಟುಕುವ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ” ಎಂದು ಅಶೋಕ ಹೇಳಿದರು.

ಆದಿಚುಂಚನಗಿರಿ ಮಠ, ಸಿದ್ದಗಂಗಾ ಮಠ, ಸುತ್ತೂರು ಮಠ ಮತ್ತು ಉತ್ತರ ಕರ್ನಾಟಕದ ಹಿಂದುಳಿದ ವರ್ಗಗಳ ಮಠಗಳಿಗೆ ಮತ್ತು RSS ge ಭೂಮಿ ನೀಡಲಾಗಿತ್ತು ಎಂದು ಹೇಳಿದ ಅಶೋಕ, “ಇದರಲ್ಲಿ ಮುಚ್ಚಿಡುವಂತಹದ್ದು ಏನೂ ಇಲ್ಲ. ಅವರು ಶಿಕ್ಷಣವನ್ನು ಒದಗಿಸುತ್ತಿದ್ದಾರೆ” ಎಂದರು.

ಬಿಜೆಪಿ ಉಪಾಧ್ಯಕ್ಷ ಹಾಗೂ ಶಿಕಾರಿಪುರ ಶಾಸಕ ಬಿ.ವೈ.ವಿಜಯೇಂದ್ರ ಮಾತನಾಡಿ, ಭೂ ಮಂಜೂರಾತಿಯನ್ನು ತಡೆಹಿಡಿಯುವ ಕಾಂಗ್ರೆಸ್ ಸರ್ಕಾರದ ನಿರ್ಧಾರ “ಕೇವಲ ಆರಂಭ ಮಾತ್ರ.” ಎನ್ನುತ್ತಾ, “ಈ ಸರ್ಕಾರ ಯಾವ ದಿಕ್ಕಿನಲ್ಲಿ ಸಾಗುತ್ತದೆ ಎಂಬುದು ನಮಗೆ ಈಗಾಗಲೇ ತಿಳಿದಿದೆ. ಜನಸೇವಾ ವಿದ್ಯಾ ಕೇಂದ್ರವು ಒಂದು ನ್ಯಾಯಯುತ ಸಂಸ್ಥೆಯಾಗಿದೆ. ನಾನು ಕೂಡಾ ಅಲ್ಲಿ ಶಿಕ್ಷಣ ಪಡೆದಿದ್ದೇನೆ. ಇದು ಆರ್ ಎಸ್ ಎಸ್ ಅಡಿಯಲ್ಲಿ ಬರುತ್ತದೆ. ಸಾವಿರಾರು ವಿದ್ಯಾರ್ಥಿಗಳು, ಬಡ ಮಕ್ಕಳು ಅಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ಇಂದು ಸಮಾಜದಲ್ಲಿ ಉತ್ತಮ ಸ್ಥಾನದಲ್ಲಿದ್ದಾರೆ” ಎಂದು ವಿಜಯೇಂದ್ರ ಹೇಳಿದರು.

“ಯಡಿಯೂರಪ್ಪ ಅವರು 2019ರಲ್ಲಿ ಮುಖ್ಯಮಂತ್ರಿಯಾದಾಗ ಪಿಎಮ್‌ ಕಿಸಾನ್‌ ಯೋಜನೆಯಡಿ ಹೆಚ್ಚುವರಿಯಾಗಿ ಪ್ರತಿ ರೈತನಿಗೆ 4,000 ರೂ.ಗಳನ್ನು ನೀಡುವ ಯೋಜನೆ ಆರಂಭಿಸಿದ್ದರು ಅದನ್ನು ನಿಲ್ಲಿಸಿದ್ದಲ್ಲದೆ, ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ರೈತರ ಮಕ್ಕಳಿಗಾಗಿ ಆರಂಭಿಸಿದ್ದ ರೈತ ವಿದ್ಯಾನಿಧಿ ವಿದ್ಯಾರ್ಥಿವೇತನಕ್ಕೆ ಬ್ರೇಕ್ ಹಾಕಲಾಗಿದೆ.” ಎಂದು ಅವರು ಕಿಡಿಕಾರಿದರು

You cannot copy content of this page

Exit mobile version