Sunday, July 27, 2025

ಸತ್ಯ | ನ್ಯಾಯ |ಧರ್ಮ

ನೂತನ ಕಾಂಗ್ರೆಸ್‌ ಅಧ್ಯಕ್ಷರಿಗೆ ಅಭಿನಂದನೆಗಳು: ಶಶಿತರೂರ್

ಹೊಸದಿಲ್ಲಿ: ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಂಗ್ರೆಸ್ ಅಧ್ಯಕ್ಷರಾಗಿ ಘೋಷಿಸಿದ ಕೂಡಲೇ ಶಶಿ ತರೂರ್ ಅವರು ಅಭಿನಂದನೆ ಸಲ್ಲಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಗೆಲುವು ಸಾಧಿಸಿದ್ದಾರೆ.

ಶಶಿ ತರೂರ್ ಮತ್ತು ಮಲ್ಲಿಕಾರ್ಜುನ ಖರ್ಗೆ ನಡುವೆ ಸ್ಪರ್ಧೆ ನಡೆದಿದ್ದು ಖರ್ಗೆ ಅವರಿಗೆ 7000 ಮತ್ತು ತರೂರ್ ಅವರಿಗೆ 1000 ಮತ ಲಭಿಸಿದೆ.

ಮಲ್ಲಿಕಾರ್ಜುನ ಖರ್ಗೆ ಅವರಿಗೆ ಶುಭಾಶಯ ಕೋರಿದ ತರೂರ್ ಕಾಂಗ್ರೆಸ್ ಅಧ್ಯಕ್ಷರಾಗುವುದು ದೊಡ್ಡ ಗೌರವ ಮತ್ತು ಜವಾಬ್ದಾರಿಯುಳ್ಳದ್ದು. ಈ ಕಾರ್ಯದಲ್ಲಿ ಖರ್ಗೆ ಜೀ ಅವರಿಗೆ ನಾನು ಶುಭ ಕೋರುತ್ತೇನೆ. ಸಾವಿರಕ್ಕೂ ಹೆಚ್ಚು ಸಹೋದ್ಯೋಗಿಗಳ ಬೆಂಬಲವನ್ನು ಪಡೆದಿರುವುದು, ಭಾರತದಾದ್ಯಂತ ಕಾಂಗ್ರೆಸ್‌ನ ಅನೇಕ ಹಿತೈಷಿಗಳ ಭರವಸೆ ಮತ್ತು ಆಕಾಂಕ್ಷೆಗಳನ್ನು ಹೊಂದಿರುವುದು ಒಂದು ಸುಯೋಗವಾಗಿತ್ತು ಎಂದು ತರೂರ್ ಹೇಳಿದ್ದಾರೆ.

ಮುಕ್ತ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯನ್ನು ಬೆಂಬಲಿಸಲು ತಮ್ಮದೇ ಆದ ಪ್ರಯತ್ನ ಮಾಡಿದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ನನ್ನ ಧನ್ಯವಾದಗಳು ಎಂದು ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page