Sunday, June 30, 2024

ಸತ್ಯ | ನ್ಯಾಯ |ಧರ್ಮ

ಕಾಂಗೆಸ್ ‌ʼಭಗವದ್ಗೀತೆಯನ್ನು ಜಿಹಾದ್‌ಗೆ ಹೋಲಿಸಿʼ ತನ್ನ ಅಂತರಂಗದ ಹಿಂದೂ‌ ವಿರೋಧಿ ನೀತಿಯನ್ನು ತೋರಿದೆ: ಆರ್‌ ಅಶೋಕ್

ಬೆಂಗಳೂರು: ಈ ಹಿಂದೆ ಕಾಂಗ್ರೆಸ್‌ನ ಹಿರಿಯ ನಾಯಕ ಮತ್ತು ಮಾಜಿ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ಅವರು ದೆಹಲಿಯಲ್ಲಿ, ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಜಿಹಾದ್ ಕುರಿತು ಹೇಳಿಕೆ ನೀಡಿದ್ದರು.

ಅವರು ಜಿಹಾದ್ ಪರಿಕಲ್ಪನೆಯನ್ನು ಗೀತೆಯಲ್ಲಿ ಉಲ್ಲೇಖಿಸಲಾಗಿದೆ, ಮಹಾಭಾರತ ಯುದ್ಧದ ಸಮಯದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಜಿಹಾದ್ ಬಗ್ಗೆ ಪಾಠಗಳನ್ನು ನೀಡಿದ್ದಾನೆ ಎಂದು ಹೇಳಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ ಸಚಿವ ಆರ್.‌ ಅಶೋಕ್‌ ಅವರು, ಹಿಂದು, ಹಿಂದುತ್ವ, ಹಿಂದುಸ್ತಾನ್ ಎನ್ನುವ ಶಬ್ದಗಳು ಕಾಂಗ್ರೆಸ್ ಗೆ ಅಪಥ್ಯ. ಹಿಂದೆ ಕಾಂಗ್ರೆಸ್‌, ರಾಮಸೇತು ಮತ್ತು ರಾಮಮಂದಿರವನ್ನು ವಿರೋಧಿಸುವ ಮೂಲಕ ಶ್ರೀರಾಮನ ಅಸ್ತಿತ್ವವನ್ನೇ ಪ್ರಶ್ನೆ ಮಾಡಿತ್ತು.

ಆದರೆ ಈಗ ವಿಶ್ವವೇ ಒಪ್ಪಿ, ಆರಾಧಿಸಿದ ಭಗವದ್ಗೀತೆಯನ್ನು ಜಿಹಾದ್ ಗೆ ಹೋಲಿಸುವ ಮೂಲಕ ತನ್ನ ಅಂತರಂಗದಲ್ಲಿರುವ ಹಿಂದೂ‌ ವಿರೋಧಿ ನೀತಿಯನ್ನು ಹೊರ ಹಾಕಿದೆ, ಭಗವಾನ್ ಶ್ರೀಕೃಷ್ಣ ಇವರಿಗೆ ಸದ್ಬುದ್ಧಿ ನೀಡಲಿ ಎಂದು ಟ್ವೀಟ್‌ ಮಾಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು