Saturday, June 15, 2024

ಸತ್ಯ | ನ್ಯಾಯ |ಧರ್ಮ

ಕಾಂಗ್ರೆಸ್ಸಿನಲ್ಲಿ ಸರ್ವಜನಾಂಗದವರಿಗೂ ಜಯ: ಯಾವ ಸಮುದಾಯ ಎಷ್ಟು ಸ್ಥಾನ ಗೆದ್ದಿದೆ? ಇಲ್ಲಿದೆ ಸಂಪೂರ್ಣ ವರದಿ

ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ದಶಕಗಳಿಂದಲೂ ಬಹುಸಂಖ್ಯಾತರು ಎನಿಸಿಕೊಂಡಿರುವ ಎರಡು ಜಾತಿ ಸಮುದಾಯಗಳು ಪ್ರಾಬಲ್ಯ ಸಾಧಿಸುತ್ತಾ ಬಂದಿವೆ. ಅನೇಕ ಜಾತಿಗಳ ಜನರು ರಾಜಕಾರಣಕ್ಕೆ ಪೂರಕವಾಗಿದ್ದರೂ ಸಹ ರಾಜಕೀಯ ಪಕ್ಷಗಳು ಅಧಿಕಾರ ಹಿಡಿಯುವಲ್ಲಿ ‘ಲಿಂಗಾಯತ-ಒಕ್ಕಲಿಗ’ ಸಮುದಾಯಗಳು ನೀರ್ಣಾಯಕವಾಗಿವೆ.

ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿಗೆ, ಜೆಡಿಎಸ್ ಹಾಗೂ 70 ವರ್ಷ ದೇಶವಾಳಿದ ಕಾಂಗ್ರೆಸ್‌ಗೆ ಈ ಎರಡು ಜಾತಿ ಸಮುದಾಯಗಳ ಬೆಂಬಲ ಅಗತ್ಯವಾಗಿತ್ತು. ಯೋಜನೆ ಪ್ರಕಾರ ಕಾಂಗ್ರೆಸ್ ಗೆ ಈ ಎರಡು ಸಮುದಾಯದ ಮತದಾರರು ಕೈ ಹಿಡಿದಿದ್ದು ದಲಿತ ಸಮುದಾಯವು ಕಾಂಗ್ರೆಸ್ ಕೈ ಹಿಡಿದು ಇಂದು ಅಧಿಕಾರಕ್ಕೆ ಕೂರಿಸಿದೆ.

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ 224 ಸ್ಥಾನಗಳಲ್ಲಿ 135 ಸ್ಥಾನ ಗೆದ್ದಿರುವ ಕಾಂಗ್ರೆಸ್ ಸರ್ಕಾರ ರಚಿಸುಲು ಮುಂದಾಗಿದೆ. ಗೆದ್ದ 135 ಅಭ್ಯರ್ಥಿಗಳು ಯಾವ ಸಮುದಾಯವನ್ನು ಹೆಚ್ಚು ಗೆಲ್ಲಿಸಿದ್ದಾರೆ ನೋಡೊಣ ಬನ್ನಿ.

ಸಮುದಾಯವಾರು ಕಾಂಗ್ರೆಸ್ ಗೆದ್ದಿರುವ ಪಟ್ಟಿ

ಲಿಂಗಾಯತ-39

ಒಕ್ಕಲಿಗ-21

ದಲಿತ (ಎಡ) ಮಾದಿಗ-6

ದಲಿತ (ಬಲ) ಹೊಲೆಯ-11

ನಾಯಕ : 15

ಕುರುಬ-8

ಮುಸ್ಲಿಂ -9

ರೆಡ್ಡಿ -4

ಬ್ರಾಹ್ಮಣ-3

ಈಡಿಗ-3

ಭೋವಿ -3

ಮರಾಠ-2

ಬಿಲ್ಲವ -2

ಕ್ರಿಶ್ಚಿಯನ್, ಜೈನ, ಲಮಾಣಿ, ಕೊರಚ, ಬಲಿಜ, ರಾಜಪುಥ್, ಉಪ್ಪಾರ, ಕೊಡವ, ಬೆಸ್ತ ತಲಾ 1 ಸ್ಥಾನ

ಸರ್ವ ಜನಾಂಗಿಯ ಶಾಂತಿಯ ತೋಟದಂತೆ ಕಾಣುವ ಈ ಅಂಕಿಅಂಶಗಳವನ್ನು ಸಾಮಾಜಿಕ ಜಾಲತಾಣದಲ್ಲು ನೆಟ್ಟಿಗರು ಶೇರ್ ಮಾಡಿಕೊಂಡು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು