Monday, July 28, 2025

ಸತ್ಯ | ನ್ಯಾಯ |ಧರ್ಮ

ಪಿಎಫ್ಐ ಸಂಘಟನೆಗಳಿಗೆ ಕಾಂಗ್ರೆಸ್‌ ಬೆಂಗಾವಲು: ಬಿಜೆಪಿ ಆರೋಪ

ಬೆಂಗಳೂರು: ಕಾನೂನು ಬಾಹಿರವಾಗಿರುವ ಪಾಪ್ಯುಲರ್​ ಫ್ರಂಟ್​ ಆಫ್​ ಇಂಡಿಯಾ (ಪಿಎಫ್‌ಐ) ಮತ್ತು ಅದರ ಸಹವರ್ತಿ ಸಂಘಟನೆಗಳಿಗೆ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷವು ಬೆಂಗಾವಲಾಗಿತ್ತು ಎಂದು ರಾಜ್ಯ ಬಿಜೆಪಿ ಘಟವು ಆರೋಪಿಸಿದೆ.

ಪಿಎಫ್‌ಐ ಮತ್ತು ಅದರ ಅಂಗ ಸಂಸ್ಥೆಗಳನ್ನು ಕಾನೂನು ಬಾಹಿರ ಎಂದು ಪರಿಗಣಿಸಿ ಕೇಂದ್ರ ಸರ್ಕಾರ 5 ವರ್ಷಗಳ ವರೆಗೆ ಭಾರತದಲ್ಲಿ ನಿಷೇಧಿಸಿ ಇಂದು ಆದೇಶ ಹೊರಡಿಸಿರುವ ಹಿನ್ನಲೆ ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ ಘಟಕ, ಪಿಎಫ್‌ಐ ಸೇರಿದಂತೆ ಅದರ ಸಹವರ್ತಿ ಸಂಘಟನೆಗಳು ಮಾಡುತ್ತಿದ್ದ ಎಲ್ಲಾ ದೇಶ ವಿರೋಧಿ ಚಟುವಟಿಕೆಗಳಿಗೆ ಸಿದ್ದರಾಮಯ್ಯ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷ ಬೆಂಗಾವಲಾಗಿ ನಿಂತಿತ್ತು. ಹೀಗಿರುವಾಗ ಸಂಘನೆಗಳ ನಿಷೇಧದ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಏಕೆ ಇನ್ನೂ ಬಾಯಿ ತೆರೆದಿಲ್ಲ? ಬಾಯಿ ತೆರೆದರೆ ಮತಬ್ಯಾಂಕ್‌ ಕಳೆದುಕೊಳ್ಳುವ ಭಯವೇ? ಎಂದು ಟೀಕಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page